ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಲೋಕಸಭಾ ಕ್ಷೇತ್ರ ಚುನಾವಣಾ ಪ್ರಚಾರ ನಿಮಿತ್ತ ಯಾದಗಿರಿ ಮತಕ್ಷೇತ್ರದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ ನಾಯಕಗೆ ಪಕ್ಷ ಟಿಕೆಟ್ ನೀಡಿದೆ. ಅವರು ಕೂಡ ರಾಯಚೂರು ಜಿಲ್ಲಾಧಿಕಾರಿಯಾಗಿ ಹಾಗೂ ರಾಜ್ಯದ ಹಲವಾರು ಇಲಾಖೆಗಳ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿ, ತಮ್ಮ ಕೊಡುಗೆ ನೀಡಿದ್ದಾರೆ ಎಂದರು.ಕುಮಾರ್ ನಾಯಕಗೆ ಆಡಳಿತದಲ್ಲಿ ಅಪಾರ ಅನುಭವವಿದೆ. ಅವರನ್ನು ಜಿಲ್ಲೆಯ ಮತದಾರರು ಗೆಲ್ಲಿಸಬೇಕು ಎಂದು ಕರೆ ನೀಡಿದರು. ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಕೆಪಿಸಿಸಿ ಕಾರ್ಯದರ್ಶಿ ಮರಿಗೌಡ ಹುಲಕಲ್, ಲಾಯಕ್ ಹುಸೇನ್ ಬಾದಲ್, ನೀಲಕಂಠ ಬಡಿಗೇರ ಮಾತನಾಡಿದರು.
ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ, ಮುಖಂಡರಾದ ಎ.ಸಿ ಕಾಡ್ಲೂರ, ಶರಣಿಕಕುಮಾರ ದೋಕಾ, ಚಿದಾನಂದಪ್ಪ ಕಾಳೆಬೆಳಗುಂದಿ, ಸುದರ್ಶನ ನಾಯಕ, ಮರೆಪ್ಪ ಬಿಳ್ಹಾರ, ವಿನಾಯಕ ಮಾಲಿ ಪಾಟೀಲ್, ಡಾ. ಭೀಮಣ್ಣ ಮೇಟಿ, ಬಸವರಾಜಪ್ಪ ಬಾಗ್ಲಿ, ಶಾಂತರಡ್ಡಿ ದೇಸಾಯಿ, ಮಂಜುಳಾ ಗೂಳಿ, ಮಲ್ಲಣ್ಣ ದಾಸನಕೇರಿ, ರಾಘವೇಂದ್ರ ಮಾನಸಗಲ್ ಮುಂತದವರಿದ್ದರು.