ಪಟ್ಟಣದ ಹಿರಿಯ ವೈದ್ಯ ಡಾ.ಬಿ.ವಿ. ಕಂಬಳ್ಯಾಳ ಅವರಿಗೆ ವೈದ್ಯರ ದಿನ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ ಎಂದು ದಿ.ಲಕ್ಷ್ಮೀ ಅರ್ಬನ್ ಬ್ಯಾಂಕ್‌ನ ನಿರ್ದೇಶಕ ಸದಸ್ಯ ವೀರೇಶ ನಂದಿಹಾಳ ಹೇಳಿದರು.
ಗಜೇಂದ್ರಗಡ: ಪಟ್ಟಣದ ಹಿರಿಯ ವೈದ್ಯ ಡಾ.ಬಿ.ವಿ. ಕಂಬಳ್ಯಾಳ ಅವರಿಗೆ ವೈದ್ಯರ ದಿನ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ಸಂಗತಿ ಎಂದು ದಿ.ಲಕ್ಷ್ಮೀ ಅರ್ಬನ್ ಬ್ಯಾಂಕ್‌ನ ನಿರ್ದೇಶಕ ಸದಸ್ಯ ವೀರೇಶ ನಂದಿಹಾಳ ಹೇಳಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಬ್ರಾಂಚ್ ಜುಲೈ-೧ ವೈದ್ಯರ ದಿನಾಚರಣೆಯ ಡಾಕ್ಟರ್ಸ್ ಡೇ ಅವಾರ್ಡ್-೨೦೨೫ಕ್ಕೆ ಭಾಜನರಾದ ಸ್ಥಳೀಯ ಹಿರಿಯ ವೈದ್ಯ ಡಾ.ಬಿ.ವಿ. ಕಂಬಳ್ಯಾಳಗೆ ಲಕ್ಷ್ಮೀ ಅರ್ಬನ್ ಬ್ಯಾಂಕ್‌ನಿಂದ ಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸುದೀರ್ಘ ವೈದ್ಯಕೀಯ ಸೇವೆ ಹಾಗೂ ಸಾಧನೆ ಮೂಲಕ ಗುರುತಿಸಿಕೊಂಡಿರುವ ಡಾ.ಬಿ.ವಿ. ಕಂಬಳ್ಯಾಳ ಅವರು ಇಂಡಿಯನ್ ಮೆಡಿಕಲ್ ಅಸೋಶಿಯನ್ ಕರ್ನಾಟಕ ರಾಜ್ಯ ಬ್ರಾಂಚ್ ಜುಲೈ-೧ ವೈದ್ಯರ ದಿನಾಚರಣೆಯ ಡಾಕ್ಟರ್ಸ್ ಡೇ ಪ್ರಶಸ್ತಿಗೆ ಭಾಜನರಾಗಿದ್ದು ಗಜೇಂದ್ರಗಡ ಪಟ್ಟಣಕ್ಕೆ ಹಾಗೂ ಲಕ್ಷ್ಮೀ ಅರ್ಬನ್ ಬ್ಯಾಂಕಿಗೆ ಹೆಮ್ಮೆಯ ಸಂಗತಿ ಎಂದರು.ಸನ್ಮಾನ ಬಳಿಕ ಡಾ.ಬಿ.ವಿ. ಕಂಬಳ್ಯಾಳ ಮಾತನಾಡಿ, ಈ ಹಿಂದೆ ವೈದ್ಯರು ಎಂದರೆ ಜೀವ ಉಳಿಸುವ ದೇವರು ಎನ್ನುವ ಭಾವನೆ ಇದ್ದರಿಂದ ವೈದ್ಯೋ ನಾರಾಯಣೋ ಹರಿ ಎನ್ನುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಪ್ರಾಣ ರಕ್ಷಣೆಗೆ ಕೊನೆಯ ಕ್ಷಣದವರೆಗೆ ನಾವು ನಡೆಸುತ್ತಿದ್ದ ಪ್ರಯತ್ನಕ್ಕೆ ಜನರ ಮನ್ನಣೆ ಸಹ ಇರುತ್ತಿತ್ತು. ಆದರೆ ಜನರ ಮನಸ್ಥಿತಿ ಬದಲಾಗಿದ್ದು ಹಲ್ಲೆ ಎನ್ನುವ ಘಟನೆಗಳ ವರದಿಗಳು ನಡೆಯುತ್ತಿವೆ ಎಂದ ಅವರು, ವೈದಕೀಯ ಕ್ಷೇತ್ರದಲ್ಲಿನ ಸುದೀರ್ಘ ಸೇವೆಯಲ್ಲಿನ ಕೆಲ ನೆನಪುಗಳನ್ನು ಸ್ಮರಿಸಿಕೊಂಡು ವೈದ್ಯರಿಗೆ ರೋಗಿಗಳು ಪುಸ್ತಕವಿದ್ದಂತೆ. ನನ್ನ ಅಲ್ಪ ಸೇವೆ ಗುರುತಿಸಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ವಿಷಯ ತಿಳಿದ ಕೆಲವೇ ಕ್ಷಣಗಳಲ್ಲಿ ಲಕ್ಷ್ಮೀ ಅರ್ಬನ್ ಬ್ಯಾಂಕಿನಿಂದ ಸನ್ಮಾನಿಸಿದ್ದು ಖುಷಿ ತಂದಿದೆ ಎಂದರು.ಬ್ಯಾಂಕಿನ ಚೇರ್ಮನ್ ಸುರೇಶ ಚನ್ನಿ, ಸುಹಾಸಕುಮಾರ ಪಟ್ಟೇದ, ಕಲ್ಲಪ್ಪ ಸಜ್ಜನರ, ಪವಾಡೆಪ್ಪ ಮ್ಯಾಗೇರಿ, ಸಿಂದಲಿಂಗಪ್ಪ ಕನಕೇರಿ, ಪರಸಪ್ಪ ತಳವಾರ, ರಾಮಣ್ಣ ನಿಡಗುಂದಿ, ಬ್ಯಾಂಕಿನ ವ್ಯವಸ್ಥಾಪಕ ರಾಜು ಹೊಸಂಗಡಿ, ಪ್ರದೀಪ ಮ್ಯಾಗೇರಿ, ಮಹಾಂತೇಶ ಇಂಡಿ, ನಾಗರಾಜ ಹೊಸಂಗಡಿ, ಸಿದ್ದಲಿಂಗೇಶ ಕೋಟಿ, ವಿಶ್ವನಾಥ ಕರಬಾಶೆಟ್ಟರ, ವಿನಯ ಕೆಂಬಾವಿ, ವಿಜಯಲಕ್ಷ್ಮೀ ಆಲೂರ, ಬಸಬರಾಜ ರಂಜನಗಿ, ಶರಣಪ್ಪ ರಂಜಣಗಿ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.