ತಂದೆ-ತಾಯಿಗಳ ಕಡೆಗಣನೆ ವಿಷಾದ ಸಂಗತಿ

KannadaprabhaNewsNetwork |  
Published : Sep 08, 2025, 01:00 AM ISTUpdated : Sep 08, 2025, 01:01 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ವಿವಿ ಪುರದ ಬಿ.ಎಲ್.ಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಬಳಗದಿಂದ ಗುರು ವಂದನಾ, ಸ್ನೇಹಿತರ ಸಮ್ಮಿಲನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಿವಿ ಪುರದ ಬಿ.ಎಲ್.ಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ 1990 ರಿಂದ 1993ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಳಗದಿಂದ ಗುರು ವಂದನಾ, ಸ್ನೇಹಿತರ ಸಮ್ಮಿಲನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಎ.ಅನಂತ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಕಲಿಯಲಿ ಎಂದು ಶಿಕ್ಷೆ ನೀಡಿರುತ್ತೇವೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲಿ ಎಂದು ಎಷ್ಟೋ ಬಾರಿ ತರಗತಿಯಲ್ಲಿ ಹೊಡೆದು ಬಂದು ಹೊರಗೆ ಕಣ್ಣೀರಾಕಿದ್ದೇವೆ. ನೀವೆಲ್ಲಾ ಇದೀಗ ವಿವಿಧ ಕ್ಷೇತ್ರಗಳಲ್ಲಿ ಬೆಳೆದಿದ್ದೀರಿ. ಹಿಂದೆ ಶಿಕ್ಷೆ ನೀಡಿ ಶಿಕ್ಷಣ ಕೊಡುವ ಪದ್ಧತಿ ಇತ್ತು. ಇದೀಗ ಅಂತಹ ಪರಿಸ್ಥಿತಿ ಇಲ್ಲ. ತಂದೆ-ತಾಯಿ, ಬಂದು ಬಳಗ, ಗುರು ಹಿರಿಯರನ್ನು, ಸಂಬಂಧಿಕರನ್ನು ಕಡೆಗಣಿಸುವ ಪರಸ್ಥಿತಿ ಬಂದಿದೆ ಎಂದು ವಿಷಾಧಿಸಿದರು.

ಈ ವೇಳೆ ನಿವೃತ್ತ ಶಿಕ್ಷಕ ಪುಟ್ಟರಂಗಪ್ಪ, ಚಂದ್ರಹಾಸ ರೆಡ್ಡಿ, ಬಿ.ಎನ್.ಚಂದ್ರಪ್ಪ, ಪಂಚಾಕ್ಷರಪ್ಪ, ಮಂಜುನಾಥಪ್ಪ, ಮಂಜುನಾಥ ಸ್ವಾಮಿ, ಹಳೆಯ ವಿದ್ಯಾರ್ಥಿಗಳಾದ ಪ್ರೊ.ಬಸವರಾಜ ಬೆಳಗಟ್ಟ, ಶ್ರೀನಿವಾಸ, ಕೆಟಿ ತಿಪ್ಪೇಸ್ವಾಮಿ, ರಮೇಶಬಾಬು, ನಾಗರಾಜ, ಲಿಂಗಣ್ಣ, ಮುದ್ದುರಾಜು, ನಿರಂಜನ ಮೂರ್ತಿ, ಜಗನ್ನಾಥ ರಂಗಸ್ವಾಮಿ, ಸೆಂದಿಲ್, ನಾಗೇಶ್, ಜಗದೀಶ್, ಜಗನ್ನಾಥ, ಹನುಮಂತಪ್ಪ, ತಿಮ್ಮರಾಜು, ಮೂರ್ತಿ, ಸಾವಿತ್ರಮ್ಮ, ಗಾಯತ್ರಿ, ರಾಧ, ಗೀತಾ, ಪಾರ್ವತಮ್ಮ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಬಸವ ಶ್ರೀ ಇಡೀ ಮನುಕುಲ ಪ್ರೀತಿಸುವ ಗುಣದವರು
ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸುತ್ತಿರುವ ಪ್ರಶಂಸಾರ್ಹ: ಎಂ.ಎನ್.ಪಾಟೀಲ