ದೇಶದಲ್ಲಿ ನೆಲೆಯೂರಿದ ಭ್ರಷ್ಟಾಚಾರ ಜಾತಿವಾದ ದು:ಖದ ಸಂಗತಿ

KannadaprabhaNewsNetwork |  
Published : Aug 16, 2024, 12:52 AM IST
ಚಿತ್ರ 15ಬಿಡಿಆರ್58 | Kannada Prabha

ಸಾರಾಂಶ

It is a sad fact that the corruption has settled in the country

-ಹುಲಸೂರಿನಲ್ಲಿ ನಡೆದ ಧ್ವಜಾರೋಹಣದಲ್ಲಿ ಗುರುಲಿಂಗಪ್ಪ ಧಬಾಲೆ ಕಳವಳ

----

ಕನ್ನಡ ಪ್ರಭ ವಾರ್ತೆ, ಹುಲಸೂರ

ದೇಶ ಸ್ವಾತಂತ್ರಗೊಂಡು 78 ವರ್ಷಗಳಾಗಿದ್ದರು ಭ್ರಷ್ಟಾಚಾರ, ಜಾತಿವಾದ ಕಂದಾಚಾರಗಳಿಂದ ಮುಕ್ತಗೊಳ್ಳದೆ ಇರುವುದು ದುಃಖದ ಸಂಗತಿ ಎಂದು ಅಕ್ಕಲಕೋಟನ ಖೇಡಗಿ ಬಸವೇಶ್ವರ ಸ್ನಾತಕೋತ್ತರ ಪದವಿಯ ಕನ್ನಡ ವಿಭಾಗದ ಮುಖ್ಯಸ್ಥ ಗುರುಲಿಂಗಪ್ಪ ಧಬಾಲೆ ಕಳವಳ ವ್ಯಕ್ತಪಡಿಸಿದರು.

ಅವರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯೋಗತ್ಸವ ದಿನಾಚರಣೆ ಪ್ರಯುಕ್ತ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಾವು ಭಾರತೀಯರು ಬ್ರಿಟಿಷ್‌ರಿಂದ ದೇಶ ಸ್ವಾತಂತ್ರ್ಯಗೊಳಿಸಿ 78 ನೇ ವರ್ಷಾಚರಣೆಯಲ್ಲಿ ತೊಡಗಿದ್ದೇವೆ. ಆದರೆ, ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಸಮಾಜ ವಿರೋಧಿ ಚಟುವಟಿಕೆಗಳಿಂದ ಮುಕ್ತ ಭಾರತ ಆಗಬೇಕಿದೆ. ದೇಶದ ಭವಿಷ್ಯ ಮಕ್ಕಳಲ್ಲಿ ಅಡಗಿದೆ ಅವರನ್ನು ಸುಸಂಸ್ಕೃತ, ಪ್ರತಿಭಾವಂತರಾಗಿ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲೆ ಇದೆ ಎಂದು ತಿಳಿಸಿದರು.

ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ರಾಷ್ಟ್ರೀಯ ಧ್ವಜಾರೋಹಣವನ್ನು ತಹಸೀಲ್ದಾರ್ ಶಿವಾನಂದ ಮೆತ್ರೆ ನೆರವೇರಿಸಿ, ಊರಿನ ಮುಖಂಡರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿ ಉತ್ತಮ ತಾಲೂಕುವಾಗಿ ರೂಪಿಸೋಣ ಎಂದು ತಿಳಿಸಿದರು.

ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ನಿರೂಪಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕುಡೆ, ಜಿ.ಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ತಾಪಂ ಎಇಒ ವೈಜಣ್ಣ, ತಾಪಂ ಎ ಡಿ, ಮಹಾದೇವ ಜಮ್ಮು, ಪೊಲೀಸ್ ಉಪ ನಿರೀಕ್ಷಕ ಶಿವಪ್ಪ ಮೋಟಿ, ಪಿಡಿಒ ರಮೇಶ ಮಿಲಿಂದಕರ,

ತಾ.ಪಂ ಮಾಜಿ ಸದಸ್ಯ ಗೊವಿಂದರಾವ ಸೋಮವಂಶಿ, ಉಪ ತಹಸೀಲ್ದಾರ್ ಸಂಜೀವಕುಮಾರ ಭೈರೆ, ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸೂರ್ಯಕಾಂತ ಪಾಟೀಲ್, ಸೂರ್ಯಕಾಂತ ಅಡಿಕೆ, ರಾಜಪ್ಪ ನಂದೋಡೆ, ದೇವಿಂದ್ರ ಬೇಂದ್ರೆ, ಗ್ರಾಮ ಲೆಕ್ಕಿಗ ನಾಗರಾಜ, ಗದಗಯ್ಯಾ ಮಠಪತಿ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು

-------

ಫೋಟೊ: ಚಿತ್ರ 15ಬಿಡಿಆರ್58

ಹುಲಸೂರ ಮಹಾತ್ಮ ಗಾಂಧಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಶಿವಾನಂದ ಮೆತ್ರೆ ಧ್ವಜಾರೋಹಣ ನೆರವೇರಿಸಿದರು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ