ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪಕ್ಷಿಗಳ ದಿನಾಚರಣೆ ಅಂಗವಾಗಿ ಪಕ್ಷಿ ಸಂಕುಲಕ್ಕೆ ಕಾಳು ಹಾಗೂ ನೀರು ಹಾಕುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.
1937ರಲ್ಲೇ ಕೈ ಬರಹದ ಮೂಲಕ ಪಕ್ಷಿಗಳ ಚಿತ್ರ ಹಾಗೂ ಅವುಗಳ ಬಗ್ಗೆ ದಾಖಲು ಮಾಡಿದ್ದರು. ಭಾರತ ದೇಶದಲ್ಲಿ 8900 ಪ್ರಭೇದ ಪಕ್ಷಿಗಳಿವೆ. ಪಕ್ಷಿಗಳು ದೇಶದಿಂದ ದೇಶಕ್ಕೆ ಸಾವಿರಾರು ಕಿಮೀ ಪ್ರಯಾಣ ಮಾಡುತ್ತವೆ. ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತವೆ. ಆಹಾರ, ನೀರು ಹಾಕುವ ಮೂಲಕ ಪಕ್ಷಿ ಸಂಕುಲವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದರು.ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರ ಮಹತ್ತರವಾದುದು. ಪರಿಸರದಲ್ಲಿ ಗಿಡ- ಮರಗಳಿಂದ ಸಿಗುವ ಕಾಯಿ, ಹಣ್ಣುಗಳನ್ನು ತಿಂದು ಹಿಕ್ಕೆ ಹಾಕುವ ಮೂಲಕ ಕೋಟ್ಯಾಂತರ ಸಸ್ಯ ರಾಶಿಗೆ ಕಾರಣವಾಗುತ್ತವೆ ಎಂದರು.
ಪಕ್ಷಿಗಳು ರೈತರು ಬೆಳೆಗೆ ಬರುವ ಹುಳು ಉಪ್ಪಟಗಳನ್ನು ಆಹಾರವಾಗಿ ಸೇವಿಸುವ ಮೂಲಕ ರೈತನ ಮಿತ್ರ ಎನಿಸಿವೆ. ಹಲವಾರು ಪಕ್ಷಿಗಳು ಅಳಿವಿನ ಅಂಚಿನಲ್ಲಿದ್ದು ಅವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಸಮಾರಂಭದಲ್ಲಿ ಶಿಕ್ಷಕರಾದ ನಂದಿನಿ, ವಿನೋದ, ಕವಿತ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.