ಸಾಧಕ-ಬಾಧಕ ಪರಿಗಣಿಸಿ ಸುದ್ದಿ ಪ್ರಕಟಿಸುವುದು ಒಳಿತು

KannadaprabhaNewsNetwork |  
Published : Jan 07, 2026, 03:15 AM IST
ಹರೀಶ ಬೆಂಡಿಗೇರಿ | Kannada Prabha

ಸಾರಾಂಶ

ಸಂಸ್ಥೆಗಳ ಬೆಳವಣೆಗೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಾಧಕ-ಬಾಧಕಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿಗಳನ್ನು ಪ್ರಕಟ ಮಾಡಿದರೇ ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುವುದು ಎಂದು ವಿಟಿಯು ವಿಶೇಷ ಅಧಿಕಾರಿ ಹರೀಶ್‌ ಬೆಂಡಿಗೇರಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಂಸ್ಥೆಗಳ ಬೆಳವಣೆಗೆಯಲ್ಲಿ ಸುದ್ದಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸಾಧಕ-ಬಾಧಕಗಳನ್ನು ಪರಿಗಣನೆಗೆ ತೆಗೆದುಕೊಂಡು ಸುದ್ದಿಗಳನ್ನು ಪ್ರಕಟ ಮಾಡಿದರೇ ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುವುದು ಎಂದು ವಿಟಿಯು ವಿಶೇಷ ಅಧಿಕಾರಿ ಹರೀಶ್‌ ಬೆಂಡಿಗೇರಿ ಸಲಹೆ ನೀಡಿದರು.

ಕನ್ನಡಪ್ರಭ ಕಚೇರಿಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸುದ್ದಿ ಸಂಸ್ಥೆಗಳಿಗೆ ತನ್ನದೆಯಾದ ಜವಾಬ್ದಾರಿ ಹಾಗೂ ಸಾಮಾಜಿಕ ಕಾಳಜಿಗಳನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡುವಲ್ಲಿ ಸಂಸ್ಥೆಯ ಸಿಬ್ಬಂದಿಯ ಪಾತ್ರವೂ ಅಷ್ಟೇ ಮುಖ್ಯವಾಗಿರುತ್ತದೆ. ಯಾವುದೇ ಸಂಸ್ಥೆಗಳ ವಿರುದ್ಧ ಋುಣಾತ್ಮಕವಾದ ವರದಿಗಳನ್ನು ಪ್ರಕಟಿಸುವ ಪೂರ್ವದಲ್ಲಿ ವಿಶೇಷ ವರದಿಗೆ ಬೇಕಾದ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬೇಕಾದ ಜವಾಬ್ದಾರಿಯನ್ನು ಸುದ್ದಿ ಸಂಸ್ಥೆಗಳ ಹೊರಬೇಕಾಗಿದ್ದು, ಧಾವಂತಕ್ಕೆ ಲೋಪವುಳ್ಳ ಮಾಹಿತಿಗಳನ್ನು ಪ್ರಕಟಿಸಿ ಸಂಸ್ಥೆಗಳ ಮೇಲಿನ ವಿಶ್ವಾಸವನ್ನು ಕ್ಷೀಣಿಸುವಂತೆ ಮಾಡಬಾರದು ಎಂದು ಮನವಿ ಮಾಡಿದರು.ಕೇವಲ ಗ್ರಹಿಕೆಯಿಂದ ಮಾತ್ರ ಸುದ್ದಿಗಳನ್ನು ಮಾಡದೇ ಕುಲಂಕುಶವಾಗಿ ಅಧ್ಯಯನ ಮಾಡಿದ ಅದಕ್ಕೆ ಪೂರಕವಾದ ಮಾಹಿತಿಗಳನ್ನು ಓರೆಗೆ ಹಚ್ಚಿ ವರದಿ ಮಾಡಿದರೇ ಓದುಗರಿಗೆ ನೈಜ ವರದಿಗಳನ್ನು ನೀಡಿದಂತಾಗುತ್ತದೆ. ಇಂದರಿಂದ ಪತ್ರಿಕೆ ಮೇಲಿನ ವಿಶ್ವಾಸವನ್ನು ವೃದ್ಧಿಸಿದಂತಾಗುವುದು. ವರದಿಯಲ್ಲಿರುವ ಸಂಸ್ಥೆಗೂ ಎಚ್ಚರಿಕೆ ನೀಡಿದಂತಾಗುವುದು ಎಂದು ತಿಳಿಸಿದರು.ಕನ್ನಡಪ್ರಭವು ವಿಶೇಷತೆಯಲ್ಲಿಯೇ ವಿಶೇಷತೆ ಹುಡುಕುವ ರಾಜ್ಯದ ಪ್ರತಿಷ್ಠಿತ ಸುದ್ದಿ ಮಾಧ್ಯಮ ಸಂಸ್ಥೆಯಾಗಿದೆ. ಅದರಲ್ಲೂ ಶಿಕ್ಷಣ ಸಂಸ್ಥೆಗಳ ಸುದ್ದಿಗಳಿಗೆ ಹೆಚ್ಚಿನ ಸ್ಥಾನ ನೀಡುವುದಲ್ಲದೇ ವರ್ಣ ರಂಜಿತವಾಗಿ ಮೂಡುವಂತೆ ಮಾಡುವ ಮೂಲಕ ಓದುಗರ ಮನ ಸೆಳೆಯುವ ಕೆಲಸವನ್ನು ಮಾಡುತ್ತಿರುವುದರಿಂದ ಕನ್ನಡಪ್ರಭವನ್ನೇ ಓದುವ ಗಟ್ಟಿ ಓದುಗನ ಬಳವನ್ನು ಹೊಂದಿದೆ.

-ಹರೀಶ್‌ ಬೆಂಡಿಗೇರಿ, ವಿಟಿಯು ವಿಶೇಷ ಅಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ