ದೊಡ್ಡಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ರಾಮ ಮೂರ್ತಿ ಪ್ರತಿಷ್ಟಾಪನೆ ಮಹೋತ್ಸವ
ಯುವ ಪೀಳಿಗೆ ಧರ್ಮ ಕಾರ್ಯಗಳಲ್ಲಿ ತಮ್ಮನ್ಮು ತೊಡಗಿಸಿಕೊಂಡು ಮುಂದಿನ ಪೀಳಿಗೆಯನ್ನು ಜಾಗೃತಗೊಳಿಸುವ ಕಾರ್ಯ ಅಭಿನಂದನೀಯವಾದದ್ದು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
ಭಾನುವಾರ ಪಟ್ಟಣದ ದೊಡ್ಡಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ಪಂಚಲೋಹದ ರಾಮ ಮೂರ್ತಿ ಪರಿವಾರದ ಪ್ರತಿಷ್ಟಾಪನೆ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಹಿಂದೆ ಈ ಚಿಕ್ಕಗುಡಿ ಯಲ್ಲಿ ಪೂಜಾ ಕಾರ್ಯಗಳು ನೆರವೇರುತ್ತಿದ್ದು ಅನೇಕ ಹಿರಿಯರ ಪರಿಶ್ರಮ ಮತ್ತು ಇಂದಿನ ಯುವಕರ ಬೆಂಬಲದೊಂದಿಗೆ ಉತ್ಸವ ಮೂರ್ತಿಗಳ ಪ್ರತಿಷ್ಟಾಪನೆಗೆ ಒತ್ತು ನೀಡಿ ಧಾರ್ಮಿಕವಾಗಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಈ ದೇವಸ್ಥಾನದ ಅಭಿವೃದ್ಧಿಗೆ ನನ್ನ ಸಹಕಾರ ನಿರಂತರವಾಗಿರಲಿದೆ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಭಾಗದ ಮಹಿಳೆಯರ ಹೆಚ್ಚಿನ ಕಾಳಜಿಯಿಂದ ಶ್ರೀ ರಾಮ ದೇವರ ದೇವಸ್ಥಾನಕ್ಕೆ ಹೊಸ ರೂಪ ನೀಡಲು ಸಾಧ್ಯವಾಗಿದೆ. ಶ್ರೀ ರಾಮ ಯುವಕ ಸಂಘದಿಂದ ಅಭಿವೃದ್ಧಿಗೆ ಶ್ರಮಿಸ ಲಾಗಿದೆ. ಎಲ್ಲರ ಆರಾಧ್ಯ ದೈವವಾಗಿ ಕಾಣುವ ಶ್ರೀರಾಮನ ಆದರ್ಶದ ತಳಹದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಮಹೋತ್ಸವದ ಅಂಗವಾಗಿ ಶ್ರೀ ರಾಮತಾರಕ ಹೋಮ ಹಾಗು ಸಂಕಲ್ಪ ಸೇವೆಗಳು ನಡೆದು ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಮರುಗುದ್ದಿ ಮನು, ಮುಖಂಡ ಪಂಗ್ಲಿ ಮಂಜುನಾಥ್,
-- ಬಾಕ್ಸ್ --
ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು. ಪೇಟೆಯ ಶ್ರೀಅಭಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆವ ಮೂಲಕ ಭಕ್ತಾದಿಗಳಿಗೆ ಪಾನಕ ಕೊಸುಂಬರಿಯ ಪ್ರಸಾದ ವಿತರಿಸಲಾಯಿತು. ಶ್ರೀ ರಾಮನ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.
ಕಡೂರು ಪಟ್ಟಣದ ಪೇಟೆ ಶ್ರೀ ರಾಮದೇವರ ದೇವಾಲಯದಲ್ಲಿ ಪಂಚಲೋಹದ ಮೂರ್ತಿಗಳ ಪ್ರತಿಷ್ಟಾಪನೆ ಮಹೋತ್ಸವದಲ್ಲಿ ಶಾಸಕ ಕೆ.ಎಸ್. ಆನಂದ್, ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಗೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಅಭಿನಂದಿಸಿದರು.