ಕನ್ನಡಪ್ರಭ ವಾರ್ತೆ ಮಡಿಕೇರಿ
ಮೊಳ್ಳೇರ ಮತ್ತು ಅಪ್ಪನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಅಪ್ಪನೆರವಂಡ ತಂಡ ಜಯ ದಾಖಲಿಸಿತು.
ಪಾಂಡಂಡ ಮತ್ತು ಕುಮ್ಮಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ಗಳಿಸುವ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ ನಲ್ಲಿ 4-2 ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ದಾಖಲಿಸಿತು.ತಂಬುಕುತ್ತೀರ ಮತ್ತು ಕಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ತಂಬುಕುತ್ತೀರ ಜಯ ಸಾಧಿಸಿತು.
ಮೊಣ್ಣಂಡ ಮತ್ತು ಚೀರಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೀರಂಡ ತಂಡ ಗೆಲುವು ದಾಖಲಿಸಿತು.
ಅರಮಣಮಾಡ ಮತ್ತು ಮೇವಡ ನಡುವಿನ ಪಂದ್ಯದಲ್ಲಿ ಮೇವಡ ತಂಡ 1-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಪುಚ್ಚಿಮಾಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ನಾಪಂಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಕಂಗಂಡ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕುಪ್ಪಂಡ (ನಾಂಗಾಲ) ಜಯ ಸಾಧಿಸಿತು.
ಅಚ್ಚಪಂಡ ಮತ್ತು ಮರ್ಚಂಡ ನಡುವಿನ ಪಂದ್ಯದಲ್ಲಿ ಮರ್ಚಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.
ಬಯವಂಡ ಮತ್ತು ಕೊಣಿಯಂಡ ನಡುವಿನ ಪಂದ್ಯದಲ್ಲಿ ಬಯವಂಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.
ಮುಕ್ಕಾಟಿರ (ಹರಿಹರ) ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ (ಹರಿಹರ) 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮಣವಟ್ಟಿರ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತದಲ್ಲಿ ಕಳ್ಳಿಚಂಡ ಜಯ ಸಾಧಿಸಿತು.ಕಳ್ಳಿರ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರವಂಡ ತಂಡ 6-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.