ಅಂಧಕಾರದ ಮನಸ್ಥಿತಿಯಲ್ಲಿ ಸಾಗುತ್ತಿರುವುದು ಅಪಾಯಕಾರಿ: ಬಿ.ಎನ್. ವಾಸರೆ

KannadaprabhaNewsNetwork |  
Published : Feb 27, 2026, 02:30 AM IST
ಮುಂಡಗೋಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಬದುಕಿನಲ್ಲಿ ಕಾಣುವ ಸತ್ಯವನ್ನು ಬಿಟ್ಟು ಕಾಣದ್ದರ ಹಿಂದೆ ಹೋಗುತ್ತಿದ್ದೇವೆ. ಅಂತಹ ಅಂಧಕಾರದ ಮನಸ್ಥಿತಿಯಲ್ಲಿ ಸಾಗುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.

ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವ ನಿಮಿತ್ತ ರಾಷ್ಟ್ರಮಟ್ಟದ ವಿಚಾರ ಸಂಕಿರಣಕನ್ನಡಪ್ರಭ ವಾರ್ತೆ ಮುಂಡಗೋಡ

ಬದುಕಿನಲ್ಲಿ ಕಾಣುವ ಸತ್ಯವನ್ನು ಬಿಟ್ಟು ಕಾಣದ್ದರ ಹಿಂದೆ ಹೋಗುತ್ತಿದ್ದೇವೆ. ಅಂತಹ ಅಂಧಕಾರದ ಮನಸ್ಥಿತಿಯಲ್ಲಿ ಸಾಗುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.

ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮುಂಡಗೋಡ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ೫೦ ವರ್ಷಗಳ ಹಿಂದೆ ದೇಶದ ವ್ಯವಸ್ಥೆ ಮತ್ತು ನಮ್ಮ ಬದುಕು ಹೇಗಿತ್ತು. ಇದೇ ಸ್ಥಿತಿ ಮುಂದುವರೆದರೆ ಮುಂದೇನಾಗಬಹುದು ಎಂಬುದರ ಬಗ್ಗೆ ಒಂದು ಬಾರಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಎಲ್ಲರನ್ನು ಒಗ್ಗೂಡಿಸುವ ಈ ದೇಶದ ದೊಡ್ಡ ಕಲ್ಪನೆಯೇ ಬಹುತ್ವ ಅದನ್ನು ಜಿ.ಎಸ್. ಶಿವರುದ್ರಪ್ಪನವರು ಸಮಾಜಕ್ಕೆ ನೀಡಿದ್ದಾರೆ. ಅವರು ನೀಡಿದ ಬಹುತ್ವ ಕಲ್ಪನೆಯನ್ನು ಇನ್ನಾರು ನೀಡಿರುವುದಕ್ಕೆ ಸಾದ್ಯವಿಲ್ಲ. ಅವರ ಆಶಯದಂತೆ ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವುದೇ ನಿಜವಾದ ಪ್ರೀತಿ, ಪ್ರತಿಯೊಬ್ಬರು ಪ್ರೀತಿ ಹಂಚುವ ಗುಣಧರ್ಮ ಹೊಂದಬೇಕು. ಒಂದು ಒಳ್ಳೆಯ ಆದರ್ಶವನ್ನು ದೇವರೆಂದು ಒಪ್ಪಿಕೊಳುವುದರಲ್ಲಿ ತಪ್ಪಿಲ್ಲ. ಬಹುತ್ವದಿಂದ ಇದ್ದರೆ ಮಾತ್ರ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯ. ಸಮನ್ವಯತೆ, ಸೌಹಾರ್ದತೆಯಿಂದ ಬದುಕಬೇಕಿದೆ.

ಭಾರತದ ಭವಿಷ್ಯ ಯುವಪಿಳಿಗೆಯ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿಗಳಿಗೆ ಓದಿನ ಮೂಲಕ ಸಾಧನೆ ಮಾಡುವ ಹಂಬಲದ ವಯಸ್ಸು ಇದಾಗಿದ್ದರೂ ಕೂಡ ಭವಿಷ್ಯ ಮತ್ತು ಜೀವನದ ಅರಿವು ಮುಖ್ಯವಾಗಿದ್ದು, ತುಂಬಾ ಜಾಗೃತಿಯಿಂದ ಸಾಗಬೇಕಿದೆ. ಎಲ್ಲ ಭಾಷೆಯನ್ನು ಗೌರವಿಸಿ ಆದರೆ ಕನ್ನಡವನ್ನು ಮನದಲ್ಲಿ ಮನೆ ಮಾಡಿಟ್ಟುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಮನಿರ್ದೇಶಿತ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಶಿವರುದ್ರಪ್ಪ ಸಮನ್ವದ ಹಾದಿ ತೋರಿಸಿದವರು. ಅವರ ಆಶಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಲಹೊಂಗಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಫಕ್ಕಿರನಾಯ್ಕ ಗಡ್ಡಿಗೌಡರ, ಡಾ. ಜ್ಯೋತಿ ಹಿರೇಮಠ, ಮಲ್ಲಿಕಾರ್ಜು ಕನವಳ್ಳಿ, ರಾಜು ಮಾಕನೂರ, ತಾಲೂಕು ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಮುಂತಾದವರಿದ್ದರು. ಉಪನ್ಯಾಸಕ ಡಾ. ಎ.ಡಿ. ಗೋಕಾವಿ ನಿರೂಪಿಸಿದರು. ಡಾ. ಅನುಪಮಾ ಆದಾಪುರ ಸ್ವಾಗತಿಸಿದರು. ಪ್ರಿಯಾ ಕುಲಕರ್ಣಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ