ಫುಟ್ಬಾಲ್ ಕ್ರೀಡೆಯನ್ನು ಗ್ರಾಮಗಳಲ್ಲಿ ಉತ್ತೇಜಿಸುವುದು ಅತ್ಯವಶ್ಯಕ

KannadaprabhaNewsNetwork |  
Published : Feb 16, 2025, 01:47 AM IST
ಫುಟ್ಬಾಲ್ ಕ್ರೀಡೆಯನ್ನು ಗ್ರಾಮೀಣ ಭಾಗದಲ್ಲಿ ಉತ್ತೇಜಿಸುವುದು ಅತ್ಯವಶ್ಯಕ ಎಂದು ಶಾಸಕ ಎಂ.ಆರ್.ಮಂಜುನಾಥ್ | Kannada Prabha

ಸಾರಾಂಶ

ಹನೂರು ಪಟ್ಟಣದ ಮಲೆಮಾದೇಶ್ವರ ಕ್ರೀಡಾಂಗಣದಲ್ಲಿ ಶಾಸಕ ಎಂ.ಆರ್ .ಮಂಜುನಾಥ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕ್ರಿಕೆಟ್, ವಾಲಿಬಾಲ್ ಕ್ರೀಡೆಗಳಂತೆ ಫುಟ್ಬಾಲ್ ಕ್ರೀಡೆಯನ್ನು ಗ್ರಾಮೀಣ ಭಾಗದಲ್ಲಿ ಉತ್ತೇಜಿಸುವುದು ಅತ್ಯವಶ್ಯಕ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿನಿಯಸ್ ಫುಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ವ್ಯವಸ್ಥೆ ಕಲ್ಪಿಸಿ. ಮೈ ಮನಸ್ಸು ಮತ್ತು ಬೌದ್ಧಿಕ ಶಕ್ತಿಯ ಸಮ್ಮಿಳಿತವಾಗಿರುವ ಫುಟ್ಬಾಲ್ ಅಂತಾರಾಷ್ಟ್ರೀಯ ಕ್ರೀಡೆಯಾಗಿದೆ. ಇಂತಹ ಕ್ರೀಡೆಯಿಂದ ಮಾನಸಿಕ ದೈಹಿಕ ಬೌದ್ಧಿಕವಾಗಿ ಸದೃಢವಾಗಿರಲು ಸಾಧ್ಯ. ಆಯಾ ಗ್ರಾಪಂ ವ್ಯಾಪ್ತಿಗಳಲ್ಲಿ ಫುಟ್ಬಾಲ್ ಕ್ರೀಡಾ ಕೂಟಗಳನ್ನು ಆಯೋಜಿಸುವಂತಾಬೇಕು. ಹನೂರಿನಲ್ಲಿ ಕರ್ನಾಟಕ ರಾಜ್ಯ ಪುಟ್ಬಾಲ್ ಅಕಾಡೆಮಿ ಫುಟ್ಬಾಲ್ ಕ್ರೀಡಾಕೂಟವನ್ನು ಪಸರಿಸುತ್ತಿರುವುದು ಶ್ಲಾಘನಿಯ ವಿಚಾರ. ಕ್ರೀಡೆಗೆ ಸದಾ ನನ್ನ ಬೆಂಬಲವಿರುತ್ತದೆ. ಮಹದೇಶ್ವರ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಫುಟ್ಬಾಲ್ ಅಕಾಡೆಮಿಯ ಅಧ್ಯಕ್ಷ ಅಜಿತ್ ಮಾತನಾಡಿ, ಕ್ರೀಡಾಂಗಣದಲ್ಲಿ ಜಿಮ್, ಬಾಸ್ಕೆಟ್ ಬಾಲ್, ಸೆಟಲ್ ಕಾಕ್ ಕೋರ್ಟಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಉದ್ದನೂರು ಮಹಾದೇವ ಪ್ರಸಾದ್, ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಅಜಿತ್, ಆರ್‌ಎಫ್ಒ ಪ್ರವೀಣ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಕರಾದ ಮಂಜೇಶ್ ಫುಟ್ಬಾಲ್ ಹಿರಿಯ ಆಟಗಾರರಾದ ಶ್ರೀನಿವಾಸ್ ನಾಯ್ಡು, ಶ್ರೀನಿವಾಸ್ ವೆಂಕರಾಜು, ಶ್ರೀನಿವಾಸ್ ಶಿವಣ್ಣ, ರವಿ, ಅಭಿಲಾಷ್, ಚಂದ್ರನ್, ದಿನೇಶ್, ಮಂಜು, ಮೋಹನ್, ಸಂತೋಷ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''