ಸೈನಿಕರ ಗೌರವಿಸುವುದು ಎಲ್ಲರ ಕರ್ತವ್ಯ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : May 17, 2025, 01:25 AM IST
ಶಿಕಾರಿಪುರದ ಪ್ರಮುಖ ಬೀದಿಯಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರ ಜತೆಗೆ ಶಾಸಕ ವಿಜಯೇಂದ್ರ ಹೆಜ್ಜೆ ಹಾಕಿದರು | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಆಪರೇಷನ್ ಸಿಂದೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ಸೇವೆಗಾಗಿ ಜೀವ ಮುಡುಪಾಗಿಟ್ಟಿರುವ ಸೈನಿಕರನ್ನು ಗೌರವಿಸಿ ಹುರಿದುಂಬಿಸುವುದು ದೇಶಪ್ರೇಮಿಗಳ ಕರ್ತವ್ಯವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಿರಂಗಾ ಯಾತ್ರೆಗೆ ಚಾಲನೆ । ಸ್ವಾತಂತ್ರ್ಯ ವೀರರ ಸ್ಮಾರಕಕ್ಕೆ ನಮನ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ಆಪರೇಷನ್ ಸಿಂದೂರ ನಿರ್ಧಾರದಿಂದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಗಡಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶ ಸೇವೆಗಾಗಿ ಜೀವ ಮುಡುಪಾಗಿಟ್ಟಿರುವ ಸೈನಿಕರನ್ನು ಗೌರವಿಸಿ ಹುರಿದುಂಬಿಸುವುದು ದೇಶಪ್ರೇಮಿಗಳ ಕರ್ತವ್ಯವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಿರಂಗಾ ಯಾತ್ರೆಗೆ ಚಾಲನೆ ನೀಡಿ ನಂತರದಲ್ಲಿ ಪಟ್ಟಣದ ಪ್ರಮುಖ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ನಂತರ ತಾಲೂಕು ಕಚೇರಿ ಮುಂಭಾಗದ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಪಕ್ಷದ ವರಿಷ್ಠರ ಸೂಚನೆ ಮೇರೆಗೆ ದೇಶಾದ್ಯಂತ ಮೇ 23ರ ವರೆಗೆ ತಿರಂಗ ಯಾತ್ರೆ ನಡೆಯುತ್ತಿದ್ದು ದೇಶಭಕ್ತರು, ದೇಶಪ್ರೇಮಿಗಳು ಯಾತ್ರೆಯಲ್ಲಿ ಪಾಲ್ಗೊಂಡು ಸೈನಿಕರಿಗೆ ಗೌರವ ಸಲ್ಲಿಸಬೇಕು.ವಿನಾಕಾರಣ ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆಗೈದು ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನಕ್ಕೆ, ಪ್ರಧಾನಿ ಮೋದಿ ಅವರು ಸೈನಿಕರ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಬಿಡುವುದಿಲ್ಲ ಎಂದು ಸಿಂಧೂ ನದಿಯ ನೀರನ್ನು ನಿಲ್ಲಿಸಿ ಸೂಕ್ತ ಪಾಠ ಕಲಿಸಿದ್ದಾರೆ ಎಂದರು.

ಗಡಿ ಆಚೆಗಿನ ದಾಳಿಯನ್ನು ಯುದ್ಧ ಎಂದು ಪರಿಗಣಿಸಲು ಮೋದಿ ಅವರು ತೀರ್ಮಾನಿಸಿರುವುದು ಪಾಕಿಸ್ತಾನಕ್ಕೆ ನೀಡಿರುವ ಕಟ್ಟ ಕಡೆಯ ಎಚ್ಚರಿಕೆಯಾಗಿದೆ ಹಾಗೂ ಭಯೋತ್ಪಾದಕರನ್ನು ತಯಾರು ಮಾಡುವ, ಪಾಕಿಸ್ತಾನದಲ್ಲಿನ ಭಯೋತ್ಪಾದಕರನ್ನು ಬೇರು ಸಮೇತ ಮಟ್ಟ ಹಾಕಲು ಈ ನಿರ್ಧಾರ ಅವಶ್ಯಕವಾಗಿದೆ ಎಂದರು.

ಮಾಜಿ ಯೋಧ ಬಸವರಾಜ್,ಮಹಾಲಿಂಗಪ್ಪ, ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪ ಮಂಜುನಾಥ್, ತಾ.ಬಿಜೆಪಿ ಅಧ್ಯಕ್ಷ ಸಂಕ್ಲಾಪುರದ ಹನುಮಂತಪ್ಪ, ಸದಸ್ಯ ರೇಣುಕಸ್ವಾಮಿ, ಸುರೇಶ್, ಲಕ್ಷ್ಮೀ ಮಹಾಲಿಂಗಪ್ಪ, ರೇಖಾಬಾಯಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಮುಖಂಡ ರಾಮಾನಾಯ್ಕ, ವಸಂತಗೌಡ, ಮಹೇಶ್ ಹುಲ್ಮಾರ್, ಸುಧೀರ್, ಪ್ರವೀಣಶೆಟ್ಟಿ, ಬೆಣ್ಣೆ ಪ್ರವೀಣ್, ಈರಣ್ಣ, ಮಧು, ನಿವೇದಿತಾ ರಾಜು, ಪಕ್ಷದ ಮುಖಂಡರು, ಕಾರ್ಯಕರ್ತರು, ಎನ್‌ಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ