ಪೊಲೀಸರು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ

KannadaprabhaNewsNetwork |  
Published : Nov 25, 2025, 02:30 AM IST
ಪೊಟೋಪೈಲ್ ನೇಮ್ ೨೪ಎಸ್‌ಜಿವಿ೩  ಶಿಗ್ಗಾಂವಿ ತಾಲೂಕಿನ ಗಂಗೆಭಾವಿ ಕೆ.ಎಸ್.ಆರ್.ಪಿ. ೧೦ನೇ ಪಡೆ ಆವರಣದಲ್ಲಿ ನಡೆದ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ರಾಜೇಂದ್ರ ಶಿರಗುಪ್ಪಿ, ಕೆ.ಎಲ್. ಲಮಾಣಿ ನೇತೃತ್ವದ ತಂಡಕ್ಕೆ ಶಿವಮೊಗ್ಗ ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಪ್ರಬಂಧಕ ಪಂಕಜಕುಮಾರ ಸುಮನ್ ಪ್ರಥಮ ಬಹುಮಾನ ವಿತರಿಸಿದರು | Kannada Prabha

ಸಾರಾಂಶ

ನಿತ್ಯ ಸಮಾಜ ಸಂರಕ್ಷಣೆಗಾಗಿ ಓಡಾಡುವ ಪೊಲೀಸರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಮುಖ್ಯ, ಸದೃಢ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಹಮ್ಮಿಕೊಂಡಿರುವ ಕ್ರೀಡಾಕೂಟಗಳು ಉತ್ತಮವಾಗಿವೆ. ಅವರು ಆರೋಗ್ಯವಂತರಾಗಿದ್ದರೆ ನಾಡು ಕಟ್ಟಲು ಸಾಧ್ಯವಿದೆ ಎಂದು ಶಿವಮೊಗ್ಗ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಪ್ರಬಂಧಕ ಪಂಕಜಕುಮಾರ ಸುಮನ್ ಹೇಳಿದರು.

ಶಿಗ್ಗಾಂವಿ: ನಿತ್ಯ ಸಮಾಜ ಸಂರಕ್ಷಣೆಗಾಗಿ ಓಡಾಡುವ ಪೊಲೀಸರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಸಹ ಮುಖ್ಯ, ಸದೃಢ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯಲ್ಲಿ ಹಮ್ಮಿಕೊಂಡಿರುವ ಕ್ರೀಡಾಕೂಟಗಳು ಉತ್ತಮವಾಗಿವೆ. ಅವರು ಆರೋಗ್ಯವಂತರಾಗಿದ್ದರೆ ನಾಡು ಕಟ್ಟಲು ಸಾಧ್ಯವಿದೆ ಎಂದು ಶಿವಮೊಗ್ಗ ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಪ್ರಬಂಧಕ ಪಂಕಜಕುಮಾರ ಸುಮನ್ ಹೇಳಿದರು.ತಾಲೂಕಿನ ಗಂಗೆಭಾವಿ ಕೆ.ಎಸ್.ಆರ್.ಪಿ. ೧೦ನೇ ಪಡೆ ಆವರಣದಲ್ಲಿ ನಡೆದ ಅಂತರ ದಳಗಳ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ರಾಜೇಂದ್ರ ಶಿರಗುಪ್ಪಿ, ಕೆ.ಎಲ್. ಲಮಾಣಿ ನೇತೃತ್ವದ ತಂಡಕ್ಕೆ ಪ್ರಥಮ ಬಹುಮಾನ ವಿತರಿಸಿ ಅವರು ಮಾತನಾಡಿದರು.ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಪಾತ್ರ ಮಹತ್ವದಾಗಿದ್ದು, ಅವರಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಸಾರ್ವಜನಿಕರು ಬದುಕು ಸಾಗಿಸಲು ಸಾಧ್ಯವಿದೆ ಎಂದರು.ಗಂಗೆಭಾವಿ ಕೆ.ಎಸ್.ಆರ್.ಪಿ ೧೦ನೇ ಪಡೆ ಕಮಾಂಡೆಂಟ್ ಎನ್. ಬಿ. ಮೆಳ್ಳಾಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪಡೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರ ಆರೋಗ್ಯ ಕಾಪಾಡುವುದು ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಅವರಲ್ಲಿ ಅಡಗಿದ ಜ್ಞಾನವನ್ನು ಹೊರತರುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಸಹಾಯಕ ಕಮಾಂಡೆಂಟ್ ಮಂಜಪ್ಪ ಕೋಟಿಹಾಳ, ವಿಶ್ವನಾಥ ನಾಯಕ, ಸುಲೇಮಾನ್ ಹಂಚಿಮನಿ, ಅಧಿಕಾರಿಗಳಾದ ಕೃಷ್ಣಪ್ಪ ಪೂಜಾರ, ಸಂತೋಷ ವಸ್ತ್ರದ, ಶ್ರೀಧರ ವಾಘ್ಮೋರೆ, ಮಾರುತಿ ಎಸ್.ಆರ್., ಸುರೇಶ ಡಂಬೇರ, ಶ್ರೀಕಾಂತ ನಾಯಕ, ಹನುಮೇಶ ಜಿ. ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!