ಸಮಾನತೆ, ಸಹೋದರತೆ, ಮಾನವೀಯತೆ ಬೆಳೆಸಿಕೊಳ್ಳಿ: ಅನ್ನದಾನ‌ ಮಹಾಸ್ವಾಮೀಜಿ

KannadaprabhaNewsNetwork |  
Published : Nov 25, 2025, 02:30 AM IST
ಪೋಟೊ24.12: ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಹಾಗೂ ಅನುಭಾವಿಗಳ ಅಮೃತ ಚಿಂತನ ಹಾಗೂ ಕೃಷಿ ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಮುಂಡರಗಿಯ ನಾಡೋಜ ಡಾ.ಅನ್ನದಾನ‌ ಮಹಾಸ್ವಾಮೀಜಿಗಳು ಮಾತನಾಡಿದರು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಹಾಗೂ ಅನುಭಾವಿಗಳ ಅಮೃತ ಚಿಂತನ ಹಾಗೂ ಕೃಷಿ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮುಂಡರಗಿಯ ನಾಡೋಜ ಅನ್ನದಾನ‌ ಮಹಾಸ್ವಾಮೀಜಿ ಅವರು ಮಾತನಾಡಿದರು.

ಕೊಪ್ಪಳ: ಅರಿವಿನ ಜನ್ಮಕ್ಕೆ ಬಂದಿರುವ ನಾವು ಮಾನವೀಯತೆ ಬೆಳೆಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಅನ್ನದಾನ‌ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಕಾತರಕಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆಯ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಹಾಗೂ ಅನುಭಾವಿಗಳ ಅಮೃತ ಚಿಂತನ ಹಾಗೂ ಕೃಷಿ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅರಿವಿನ ಜನ್ಮ ಮುಖ್ಯ, ನಾನು ಯಾರು, ಯಾತಕ್ಕಾಗಿ ಬಂದೆ ಎಂದು ಅರ್ಥ ಮಾಡಬೇಕು. ಜಗದಲ್ಲಿ ಆಗಬಾರದ ಕಾರ್ಯಗಳು ಆಗುತ್ತಿದೆ. ಮಾನವೀಯತೆ ಮರೆಯುತ್ತಾರೆ. ಹೀಗಾಗಿ ಇಂಥ ಧಾರ್ಮಿಕ ಕಾರ್ಯಗಳಿಂದ ನಾವೆಲ್ಲ ಒಳ್ಳೆ ಹಾದಿಯಲ್ಲಿ ನಡೆಯಬೇಕಾಗಿದೆ. ಸಮಾನತೆ ಸಹೋದರತೆ ನಡೆಸಿಕೊಂಡು ಹೋಗಬೇಕಾಗಿದೆ‌ . ನಮ್ಮಲ್ಲಿರುವ ದುರ್ಗುಣ ಸುಟ್ಟು ಹಾಕಬೇಕು. ನಮ್ಮಲ್ಲಿಯೇ ಇರುವ ದುರ್ಗುಣ ದೂರ ಮಾಡಿಕೊಂಡು, ಜ್ಞಾನದ ದೀವಿಗೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ದೇವರು ಇದ್ದಾನೆ ಎನ್ನುವ ನಂಬಿಕೆ ಇರಬೇಕು. ಸಿರಿತನ, ಬಡತನ ಶಾಶ್ವತವಲ್ಲ. ಅದಕ್ಕೆ ಒತ್ತು ನೀಡದೆ ಕಾಯಕನಿಷ್ಠನಾಗಬೇಕು. ದುಡಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು‌. ಈ ಸರ್ಕಾರ ಆ ಗ್ಯಾರಂಟಿ, ಈ ಗ್ಯಾರಂಟಿ ನೀಡಿ, ಜನರಲ್ಲಿ ದುಡಿಯುವ ಭಾವನೆ ದೂರ ಮಾಡುತ್ತಿರುವುದು ಬೇಸರದ ಸಂಗತಿ. ಅದು ಬರಲಿ, ಬರದಿರಲಿ ದುಡಿಮೆಯಿಂದ ಫಲ ಪಡೆಯುವ ಮನಸ್ಥಿತಿ ಇರಬೇಕು ಎಂದರು.

ಶ್ರೀ ಅಮೃತಾನಂದ ಮಹಾಸ್ವಾಮಿಗಳು, ಶ್ರೀ ಚಿದಾನಂದ ಮಹಾಸ್ವಾಮಿಗಳು, ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು, ಶ್ರೀ ಶಿವರಾಮ ಕೃಷ್ಣಾನಂದರು, ಶ್ರೀ ಶ್ರೀನಿವಾಸ ಶ್ರೀಪಾದಭಟ್ , ಶ್ರೀ ಮೋಹನ್ ಪುರೋಹಿತ, ಶ್ರೀ ಗವಿಸಿದ್ದಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.ಶೂನ್ಯಕೃಷಿ ತಜ್ಞ ಹುಲಿಕೆರೆ ವಿಶ್ವೇಶ್ವರ ಸಜ್ಜನ್, ಎಚ್.ಎಲ್. ಹಿರೇಗೌಡ್ರ, ಡಾ. ಶ್ರೀನಿವಾಸ ಹ್ಯಾಟಿ, ಹನುಮರಡ್ಡಿ ಹಂಗನಕಟ್ಟಿ, ಸೋಮರಡ್ಡಿ ಅಳವಂಡಿ, ಡಾ. ಚಂದ್ರಶೇಖರ ಕರಮುಡಿ, ಅಜೀಮ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!