ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳುವುದು ಮುಖ್ಯ

KannadaprabhaNewsNetwork |  
Published : Jul 05, 2024, 12:49 AM IST
ಪ್ರೇರಣಾ ಫೌಂಡೇಶನ್ ವತಿಯಿಂದ ಪತ್ರಿಕಾ ವಿತರಕರಿಗೆ ಜಾಕೆಟ್ ನೀಡಲಾಯಿತು. | Kannada Prabha

ಸಾರಾಂಶ

ಸಮಾಜದಲಿ ಪ್ರತಿಯೊಂದು ವೃತ್ತಿಗೂ ತಮ್ಮದೇಯಾದ ಗೌರವವಿದ್ದು, ಆ ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಶೋಧಕ ಡಾ.ಜಿ.ಕೆ.ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಸಮಾಜದಲಿ ಪ್ರತಿಯೊಂದು ವೃತ್ತಿಗೂ ತಮ್ಮದೇಯಾದ ಗೌರವವಿದ್ದು, ಆ ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಶೋಧಕ ಡಾ.ಜಿ.ಕೆ.ಹಿರೇಮಠ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರೇರಣಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ವಿತರಿಕರಿಗೆ ಜಾಕೆಟ್ ವಿತರಣಾ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನೂ ಸಹ ಶಿಕ್ಷಕನಾಗಿ, ಲೇಖಕನಾಗಿ, ಸಂಶೋಧಕನಾಗಿ ವೃತ್ತಿ ಬದುಕಿನಲ್ಲಿ ಪರಿಶ್ರಮದ ಮೂಲಕ ನನ್ನ ವೃತ್ತಿ ಪೂರ್ಣಗೊಳಿಸಿರುವ ಸಾರ್ಥಕ ನನಗಿದೆ ಎಂದರು.

ಹಿರಣ್ಯಕೇಶಿ ಪತ್ರಕರ್ತರ ಸಂಘದ ಅಧ್ಯಕ್ಷ ಕುಮಾರ ಗುಡಸಿ ಮಾತನಾಡಿ, ಏಳು ಬೀಳಿನ ನಡುವೆ ಇಂದಿನ ಡಿಜಿಟಲ್ ಮಾಧ್ಯಮದ ನಡುವೆಯೂ ಸಹ ಪತ್ರಿಕೆಗಳ ತಮ್ಮ ಜೀವಂತಿಕೆ ಉಳಿಸಿಕೊಳ್ಳುವಲ್ಲಿ ಪತ್ರಿಕಾ ವಿತರಕರ ಪಾತ್ರ ಮಹತ್ವದಾಗಿದ್ದು, ಮಳೆಗಾಳಿ ಬೀಸಿನ ನಡುವೆಯೂ ಸಹ ತಮ್ಮ ವೃತ್ತಿ ಬದುಕಿನಲ್ಲಿ ಸಂತಸದ ಕ್ಷೆಣಗಳನ್ನು ಕಾಣುವ ವಿತರಕರನ್ನು ಗೌರವಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಸಂಯೋಜಕ ಎಸ್.ಆರ್.ಮಾಳಿ ಮಾತನಾಡಿ, ಸರಳ ವ್ಯಕ್ತಿತ್ವ ಶರಣ ನಡೆಯ ಮೂಲಕ ಡಾ.ಜಿ.ಕೆ.ಹಿರೇಮಠ ಶಿಕ್ಷಕ ವೃತ್ತಿಗೆ ಬಹುದೊಡ್ಡ ಆಸ್ತಿಯಾಗಿದ್ದು, ತಮ್ಮ ಪಾಂಡಿತ್ಯದ ಮೂಲಕವೇ ಕನ್ನಡದ ಸಾಂಸ್ಕೃತಿ, ಸಾಹಿತ್ಯ ಬೆಳಗಿಸಿ ಅಪಾರ ವಿದ್ಯಾರ್ಥಿಗಳ ಗೌರವ ಸಂಪಾದಿಸಿರುವುದೇ ಅವರ ವೃತ್ತಿ ಬದುಕಿಗೆ ಬಹುದೊಡ್ಡ ನಿದರ್ಶನ. ಪ್ರೇರಣಾ ಫೌಂಡೇಶನ್ ದಶಕಗಳಿಂದಲೂ ಸಹ ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಪತ್ರಿಕಾ ರಂಗದ ಮೂಲವಾಗಿರುವ ವಿತರಕರು ಮಳೆಗಾಲದ ಅನೂಕೂಲಕ್ಕಾಗಿ ಜಾಕೆಟ್ ವಿತರಿಸಲಾಗಿದೆ ಎಂದರು.ನಿಡಸೋಸಿ ಎಸ್‌ಜೆಡಿ ಶಾಲೆಯ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಸಂಶೋಧಕ ಡಾ.ಜಿ.ಕೆ.ಹಿರೇಮಠ ಅವರಿಗೆ ಸನ್ಮಾನಿಸಲಾಯಿತು.ಫೌಂಡೇಶನ್ ಅಧ್ಯಕ್ಷ ವಿಜಯ ಹಂದಿಗೂಡಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಸುರೇಶ ಮಂಜರಗಿ, ಆನಂದ ಶಿಂಧೆ, ಎಂ.ಕೆ.ಮೋಮಿನ, ಶಿವಾನಂದ ಪದ್ಮನ್ನವರ, ಸಚಿನ್ ಕಾಂಬಳೆ, ಗಣೇಶ ಮಲಾಬಾದಿ, ಸರ್ಜೇರಾವ ಗಾಯಕವಾಡ, ಸಚಿನ್ ಸಾವಂತ, ವಿಜಯ ಶಿರಗಾವಿ, ಅಭಿಷೇಕ ಸುತಾರ ಸೇರಿದಂತೆ ಇತರರು ಇದ್ದರು.ಪತ್ರಿಕಾ ವಿತರಕರಾದ ಅರುಣ ಸಮ್ಮನ್ನವರ, ದಯಾನಂದ ಅಲೂರೆ, ಸಂದೀಪ ಮನವಡ್ಡರ, ಸಚಿನ್ ಸಮನ್ನವರ, ಅರುಣ ಕಾಂಬಳೆ, ಶುಭಂ ಕಾಂಬಳೆ, ತಮ್ಮಣ್ಣ ಪಾಟೀಲ, ಭರತ ಗಂಗಾಧರಿ ಸೇರಿದಂತೆ 15 ವಿತರಕರಿಗೆ ಜಾಕೆಟ್ ವಿತರಿಸಲಾಯಿತು.

ಜೀವನದಲ್ಲಿ ಪರರ ಕಷ್ಟ ಅರಿತಾಗಲೇ ಆ ಬದುಕಿಗೆ ಬೆಲೆ ಬರುತ್ತದೆ. ಈ ನಿಟ್ಟಿನಲ್ಲಿ ಪ್ರೇರಣಾ ಫೌಂಡೇಶನ್ ಸಾಮಾಜಿಕ ಕಾಳಜಿಯತ್ತ ಮುಖ ಮಾಡಿರುವುದು ಶ್ಲಾಘನಾರ್ಹ. ಪತ್ರಿಕಾ ವಿತರಕರು, ವರದಿಗಾರರು ತಮ್ಮ ದೈನಂದಿನ ಬದುಕಿನಲ್ಲಿ ಏನೇ ಸಮಸ್ಯೆಗಳಿದ್ದರೂ ಸಹ ನಿತ್ಯದ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ರಂಗವಾಗಿದ್ದು, ಇಂತಹ ಶ್ರಮಜೀವಿಗಳಿಗೆ ನಿತ್ಯದ ಉಪಯೋಗಕ್ಕಾಗಿ ಜಾಕೆಟ್ ವಿತರಿಸಿರುವುದು ಸಮಯೋಚಿತವಾಗಿದೆ.- ಡಾ.ಜಿ.ಕೆ.ಹಿರೇಮಠ, ಸಂಶೋಧಕರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ