ಮಾನವೀಯತೆ ಮೆರೆಯುವುದು ಮುಖ್ಯ: ಸ್ವಾಮೀಜಿ

KannadaprabhaNewsNetwork |  
Published : Dec 10, 2025, 12:45 AM IST
ಕೆ ಕೆ ಪಿ ಸುದ್ದಿ 01: ಶ್ರೀ ಕ್ಷೇತ್ರ ಮರಳೇಗವಿ ಮಠದಲ್ಲಿ ಗುರುವಂದನಾ ಕಾರ್ಯಕ್ರಮ.  | Kannada Prabha

ಸಾರಾಂಶ

ಕನಕಪುರ: ಮನುಷ್ಯನಾಗಿ ಹುಟ್ಟುವುದು ಮುಖ್ಯವಲ್ಲ, ಮನುಷ್ಯತ್ವದಲ್ಲಿ ಮಾನವೀಯತೆ ಮೆರೆಯುವುದು ಬಹಳ ಮುಖ್ಯ ಎಂದು ಮರಳೆ ಗವಿಮಠದ ಪೀಠಾಧ್ಯಕ್ಷ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.

ಕನಕಪುರ: ಮನುಷ್ಯನಾಗಿ ಹುಟ್ಟುವುದು ಮುಖ್ಯವಲ್ಲ, ಮನುಷ್ಯತ್ವದಲ್ಲಿ ಮಾನವೀಯತೆ ಮೆರೆಯುವುದು ಬಹಳ ಮುಖ್ಯ ಎಂದು ಮರಳೆ ಗವಿಮಠದ ಪೀಠಾಧ್ಯಕ್ಷ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ತ್ರಿವಿಧ ದಾಸೋಹ ಮಠ ಮರಳೆಗವಿ ಮಠದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅತಿ ಶ್ರೇಷ್ಠವಾದ ಕ್ಷೇತ್ರ ಧಾರ್ಮಿಕ ಕ್ಷೇತ್ರ. ಧಾರ್ಮಿಕ ಕ್ಷೇತ್ರದಲ್ಲಿ ಮಠಮಾನ್ಯಗಳಲ್ಲಿ ಸ್ವಾಮೀಜಿಗಳಾಗಿ ಸೇವೆ ಮಾಡುವುದು ಪರಮ ಪವಿತ್ರ ಕೆಲಸ. ವಿಶಾಲವಾದ ದೃಷ್ಟಿಯನ್ನಿಟ್ಟುಕೊಂಡು ಸೇವೆ ಮಾಡುವುದು ಪವಿತ್ರವಾದದು. ಈ ನಾಡು ದಾರ್ಶನಿಕರ, ತತ್ವದರ್ಶಿಗಳ, ಸತ್ಪುರುಷರ ಪವಿತ್ರ ಹಿರಿಯ ಗುರುಗಳ ಆಶೀರ್ವಾದದಿಂದ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ದಾಸೋಹ, ಶಿಕ್ಷಣ, ಆಶ್ರಯ ಎಲ್ಲವನ್ನು ಕೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಶ್ರೀ ಮಠ ಬಹಳ ವರ್ಷಗಳಿಂದ ಮಾಡಿಕೊಂಡು ಬಂದಿದೆ ಎಂದರು.

ಗುರುವಂದನೆ ಅಂಗವಾಗಿ ಶ್ರೀ ಮಠದ ಕಾಲಾಗ್ನಿ ರುದ್ರಮುನಿ ಸ್ವಾಮಿಗಳ ಗದ್ದುಗೆ ಅರ್ಚನೆ ಅಭಿಷೇಕದೊಂದಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು, ದಾನಿಗಳು, ಹಿತೈಷಿಗಳು, ಮಠದ ಹಿರಿಯ ವಿದ್ಯಾರ್ಥಿಗಳು ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು.

ಚಿದರವಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಜ್ಜ ಬಸವನಹಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಡುಬರಾಣಿ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ದ್ಯಾವಪಟ್ಟಣ ಶ್ರೀಗಳು, ಧನಗೂರು ಮಠದ ಶ್ರೀಗಳು, ಸೋಸಲೆ ಶ್ರೀಗಳು ಹಾಗೂ ಮನಮುಲ್ ಮಾಜಿ ಅಧ್ಯಕ್ಷ ಅಶೋಕ್, ಚಿರಾಗ್ ಆಸ್ಪತ್ರೆ ಡಾ.ರಾಜಶೇಖರ್, ಡಾ.ಸುರೇಂದ್ರ, ತಮಿಳುನಾಡು ಬಿಜೆಪಿ ಮುಖಂಡ ನಾಗೇಶ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ತಮಿಳುನಾಡು ನೀರಾವರಿ ಇಲಾಖೆ ಚೀಪ್ ಇಂಜಿನಿಯರ್ ಮಾಧು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವು, ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಸದಾಶಿವ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಉಮಾಶಂಕರ್, ವೃಷಭೇಂದ್ರ ಕುಮಾರ್ ಉಪಸ್ಥಿತರಿದ್ದರು.

(ಪೋಟೋ ಕ್ಯಾಫ್ಷನ್‌)

ಕನಕಪುರ ತಾಲೂಕಿನ ಮರಳೆಗವಿ ಮಠದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಪೀಠಾಧ್ಯಕ್ಷ ಮುಮ್ಮಡಿ ಶಿವರುದ್ರ ಸ್ವಾಮೀಜಿ ಗುರುವಂದನೆ ಸ್ವೀಕರಿಸಿ ಭಕ್ತರನ್ನು ಆಶೀರ್ವಾದ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ