ಆಟಿಯ ಮಹತ್ವ ಅರಿಯುವುದು ಅಗತ್ಯ : ಆತ್ರಾಡಿ ಅಮೃತ ಶೆಟ್ಟಿ

KannadaprabhaNewsNetwork |  
Published : Aug 04, 2025, 12:30 AM ISTUpdated : Aug 04, 2025, 12:26 PM IST
ಆತ್ರಾಡಿ ಅಮೃತಾ ಶೆಟ್ಟಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಹಿಳಾ ಘಟಕ ವತಿಯಿಂದ ಉರ್ವದ ತುಳು ಭವನದಲ್ಲಿ ‘ಆಟಿದ ಗೇನ’ ಕಾರ್ಯಕ್ರಮ ನಡೆಯಿತು.

 ಮಂಗಳೂರು :  ಆಟಿಯ ನೈಜ ಮಹತ್ವವನ್ನು ನಿಜವಾದ ರೂಪದಲ್ಲಿ ತಿಳಿಯುವ ಕೆಲಸ ನಡೆಯಬೇಕು ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯೆ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಮಹಿಳಾ ಘಟಕ ವತಿಯಿಂದ ಉರ್ವದ ತುಳು ಭವನದಲ್ಲಿ ಭಾನುವಾರ ‘ಆಟಿದ ಗೇನ’ ಕಾರ್ಯಕ್ರಮದಲ್ಲಿ ಕುರಿತು ಮಾತನಾಡಿದರು.ಆಟಿಯೆಂದರೆ ಹತ್ತಾರು ಬಗೆಯ ತಿಂಡಿಗಳನ್ನು ತಯಾರಿಸಿ ಸವಿಯುವುದಷ್ಟೇ ಅಲ್ಲ. ಆಟಿ ತಿಂಗಳ ಸಮಸ್ಯೆಗಳ ಬಗ್ಗೆ ತಿಳಿಯಬೇಕು, ಈಗ ಆ ರೀತಿಯ ಸಮಸ್ಯೆಗಳಿಲ್ಲದಿದ್ದರೂ ಅದರ ಅರಿವು ಇರಬೇಕು. ಆಟಿ ಎಂದರೆ ಅನಿಷ್ಟ ಅಲ್ಲ. ಒಳ್ಳೆಯ, ಸುಖದ ತಿಂಗಳು. ತುಳುವ ಹೆಣ್ಣಿನ ತಾಕತ್ತು ಮತ್ತು ಮನೆ- ಸಂಸಾರ ನಿಭಾಯಿಸಯವ ಶಕ್ತಿ ನಿರೂಪಣೆಯ ಹಾಗೂ ಸಾಬೀತುಪಡಿಸುವ ಸಮಯ. ಮನೆಯವರಿಗೂ, ಬಂದವರಿಗೂ ಹೊಟ್ಟೆ ತುಂಬಿಸುವ ಆಕೆಯ ಕಾಳಜಿ ಮತ್ತು ಬದುಕಿನ ಮೌಲ್ಯ ಗಮನಾರ್ಹ ಎಂದರು.

ಆಟಿ ಕಷಾಯ ಹಿಂದಿನವರಿಗೆ ಬದುಕಿನ ಭಾಗವಾಗಿತ್ತು, ಈಗ ಸೋಷಿಯಲ್ ಮೀಡಿಯಾ ಮಿಂಚಾಗಿದೆ ಎಂದವರು ವಿಷಾದಿಸಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ವರ್ಷದಲ್ಲಿ ಒಂದು ಬಾರಿಯಾದರೂ ಬತ್ತ ಬೆಳೆಸುವ ಉಮೇದನ್ನು ಬೆಳೆಸಿಕೊಳ್ಳೋಣ, ಹಡಿಲು ಬಿದ್ದ ಗದ್ದೆಯಲ್ಲಿ ಮತ್ತೆ ಬೆಳೆ ಮಾಡುವುದರತ್ತ ಚಿತ್ತ ಹರಿಸಬೇಕಿದೆ ಎಂದರು. ಎಜೆ ಆಸ್ಪತ್ರೆಯ ಫಿಸಿಯಾಲಜಿ ವಿಭಾಗದ ಡಾ.ಕಲ್ಪನಾ ಅಶ್ಫಕ್ ಕಾರ್ಯಕ್ರಮ ಉದ್ಘಾಟಿಸಿದರು.

 ಮುಂಡಾಲ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಮಲಾರ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲ ಎಸ್., ಪೊಳಲಿ ಗ್ರಾ.ಪಂ.ಪಿಡಿಒ ವಸಂತಿ ಜಯಪ್ರಕಾಶ್, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಪವಿತ್ರಾ ಕೆ, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಚೇತನಾ ರೋಹಿತ್ ಉಳ್ಳಾಲ್, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಕವಿತಾ ಶೈಲೇಶ್, ಶಿಕ್ಷಕಿ ಮಲ್ಲಿಕಾ ರಘುರಾಜ್, ವೀಣಾ ಶ್ರೀನಿವಾಸ್, ಹರೀಶ್ ಕೊಡಿಯಾಲ್ ಬೈಲ್, ಕಿರಣ್ , ರಘುರಾಜ್ ಕದ್ರಿ, ರಜನೀಶ್ ಕಾಪಿಕಾಡ್ ಮೊದಲಾದವರು ಇದ್ದರು.

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ