ಚಾಮರಾಜನಗರ: ಪುರಾತನ ತಾಣಗಳ ಮಾದರಿಯ ವಸ್ತು ಪ್ರದರ್ಶನದಲ್ಲಿ ಕರ್ನಾಟಕದ ಪ್ರಮುಖ ಐತಿಹಾಸಿಕ ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಭುತ ಪುರಾತನ ತಾಣಗಳ ಮಾದರಿಯ ವಸ್ತು ಪ್ರದರ್ಶನ ಕಣ್ಣಿಗೆ ಕಟ್ಡಿದಂತಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಬೆಂಗಳೂರು ಶಿಕ್ಷಣ ಇಲಾಖೆ ಡಾ. ಎನ್.ಜಿ.ಪ್ರಕಾಶ್ ಮಾತನಾಡಿ. ವಿಜ್ಞಾನ ವಿಭಾಗಕ್ಕೆ ಮಾತ್ರ ಸೀಮಿತವಾದ ಪ್ರದರ್ಶನ ಇಂದು ಇತಿಹಾಸ ವಿಭಾಗದಲ್ಲೂ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಕಾಡು ನಾಡು ಜಲ ರುದ್ರ ರಮಣೀಯ ಕೇಂದ್ರ ಚಾಮರಾಜನಗರ ಜಿಲ್ಲೆ, ಕನ್ನಡದ ತಮಿಳು ಆದಿವಾಸಿಗಳ ಭಾಷೆಯ ಸಂಗಮ ಎಂದರು.
ಇಂದು ಮೆಡಿಕಲ್, ಎಂಜಿನಿಯರಿಂಗ್ ಅಂತಹ ವಿಷಗಳಗೆ ಹೆಚ್ಚಿನ ಆದ್ಯತೆ ನೀಡಿ. ಕಲಾ ವಿಭಾಗ ಬಗ್ಗೆ ಅಲಸ್ಯ ಉಂಟಾಗಿದೆ. ಕಲೆ ತುಳಿತಕ್ಕೆ ಒಳಗಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇತಿಹಾಸ ಬಗ್ಗೆ ಅಸಕ್ತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡಪ್ರಭ-ಸುವರ್ಣ ನ್ಯೂಸ್ ಸಹಯೋಗದಲ್ಲಿ ಸಂಶೋಧಿಸಿದ ಏಳು ಅದ್ಭುತ ಜೊತಗೆ ಇತರ ಪ್ರಮುಖ ಐತಿಹಾಸಿಕ ಪಾರಂಪರಿಕ ಕೋಟೆಗಳು ವಸ್ತು ಪ್ರದರ್ಶನವನ್ನು ಕಾಲೇಜಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಮಾಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದ ಕರ್ನಾಟಕದ ಪ್ರಮುಖ ಐತಿಹಾಸಿಕ, ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಭುತ ಪುರಾತನ ತಾಣಗಳ ಮಾದರಿಗಳನ್ನು ಗಣ್ಯರು ವೀಕ್ಷಣೆ ಮಾಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಬಿ.ಕೆ.ರವಿಕುಮಾರ್, ಸಮೀಉಲ್ಲಾ, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಲಿಖಿತ ಎಸ್. ಉಪನ್ಯಾಸಕ ರೋಹಿತ್ ಇತರರಿದ್ದರು.
೧೫ಸಿಎಚ್ಎನ್೫ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಕರ್ನಾಟಕದ ಪ್ರಮುಖ ಐತಿಹಾಸಿಕ ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಭುತ ಪುರಾತನ ತಾಣಗಳ ಮಾದರಿಯ ವಸ್ತು ಪ್ರದರ್ಶನ.
೧೫ಸಿಎಚ್ಎನ್೫ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಕರ್ನಾಟಕದ ಪ್ರಮುಖ ಐತಿಹಾಸಿಕ ಪಾರಂಪರಿಕ ಕೋಟೆಗಳು ಹಾಗೂ ಏಳು ಅದ್ಭುತ ಪುರಾತನ ತಾಣಗಳ ಮಾದರಿಯ ವಸ್ತು ಪ್ರದರ್ಶನ ಸಮಾರಂಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು.