ಮಾದಕ ವ್ಯಸನದಿಂದ ಎಲ್ಲರೂ ಮುಕ್ತರಾಗಿರುವುದು ಅಗತ್ಯ: ಜಿಲ್ಲಾಧಿಕಾರಿ ನಾಗರಾಜ್‌

KannadaprabhaNewsNetwork |  
Published : Mar 02, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ''''ನಮ್ಮ ಪೊಲೀಸ್ ನಮ್ಮ‌ ಹೆಮ್ಮೆ'''' ಘೋಷವಾಕ್ಯದಡಿ ಆಯೋಜಿಸಿದ್ದ ''''ಪೊಲೀಸ್ ಓಟ'''' (ಕರ್ನಾಟಕ ಪೊಲೀಸ್ ರನ್) ಸ್ಪರ್ಧೆಗೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಭಾನುವಾರ ಚಾಲನೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ'''''''', ''''''''ಸೈಬರ್ ಅಪರಾಧ'''''''' ಕುರಿತು ಜಾಗೃತಿ ಓಟ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ''''''''ನಮ್ಮ ಪೊಲೀಸ್ ನಮ್ಮ‌ ಹೆಮ್ಮೆ'''''''' ಘೋಷವಾಕ್ಯದಡಿ ಆಯೋಜಿಸಿದ್ದ ''''''''ಪೊಲೀಸ್ ಓಟ'''''''' (ಕರ್ನಾಟಕ ಪೊಲೀಸ್ ರನ್) ಸ್ಪರ್ಧೆಗೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಭಾನುವಾರ ಚಾಲನೆ ನೀಡಿದರು.

''''''''ಡ್ರಗ್ಸ್ ಮುಕ್ತ ಕರ್ನಾಟಕ'''''''', ''''''''ಸೈಬರ್ ಅಪರಾಧ'''''''' ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ 10 ಕಿ.ಮೀ ಹಾಗೂ 5 ಕಿ.ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಪೊಲೀಸ್ ಇಲಾಖೆ, ಎಸ್‌ಬಿಐ ಅಧಿಕಾರಿ ಸಿಬ್ಬಂದಿ, ಸಾವಿರಾರು ಮಂದಿ ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ಉದ್ಯೋಗಿಗಳು, ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದರು. ಈ ವೇಳೆ ಜಿಲ್ಲಾಧಿಕಾರಿ ನಾಗರಾಜ್‌, ಸ್ಪರ್ಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಬಳಿಕ ಮಾತನಾಡಿ, ಮಾದಕ ವಸ್ತುಗಳ ವ್ಯಸನದಿಂದ ವಿದ್ಯಾರ್ಥಿಗಳಿಂದ ಹಿರಿಯರ ವರೆಗೆ ಎಲ್ಲರೂ ಮುಕ್ತರಾಗಿರಬೇಕು. ಈ ಮೂಲಕ ಸದೃಢ ಆರೋಗ್ಯ ಕಾಪಾಡಬೇಕು. ಆಗ ಮಾತ್ರ ಸದೃಢ ಮತ್ತು ಬಲಿಷ್ಠ ಸಮಾಜ ಕಟ್ಟಬಹುದಾಗಿದೆ. ಯಾವುದೇ ದೇಶದ ಮಾನವ ಸಂಪನ್ಮೂಲ ಗುಣಮಟ್ಟದಿಂದ ಕೂಡಿದರೆ ಅಲ್ಲಿನ ದುಡಿಮೆ, ಉತ್ತಮ ಕೌಶಲ್ಯ ಇರಲಿದೆ. ಆಗ ದೇಶ ಅಭಿ ವೃದ್ಧಿ ಕಡೆ ಸಾಗಲಿದೆ. ನಮಗೆ ಒಂದು ಅವಕಾಶ ಸಿಕ್ಕಿದ್ದು, ದೇಶಕ್ಕೆ ಕೊಡುಗೆ ನೀಡಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯಾದರ್ಶಿ ವಿ.ಹನುಮಂತಪ್ಪ ಮಾತನಾಡಿ, ಮಾದಕ ವ್ಯಸನ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹಾಗೂ ಎಸ್‌ಬಿಐ ಕಾರ್ಯಕ್ರಮ ಆಯೋಜಿಸಿದೆ. ಯುವ ಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರ ಇರಬೇಕು. ವ್ಯಸನ ಮುಕ್ತ ಭಾರತ ನಿರ್ಮಾಣದ ನಿಟ್ಟಿನಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದು ಕೆರೆ ನೀಡಿದರು.

ಈ ವೇಳೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್‌ ದಾಯಾಮ, ಜಿಪಂ ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಕೀರ್ತನಾ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಂ.ರವಿ ಸೇರಿದಂತೆ ಮೊದಲಾದವರಿದ್ದರು. --ಬಾಕ್ಸ್‌--

ವಿಜೇತರ ವಿವರ:

10 ಕಿ.ಮೀ. ಓಟ:

ಪ್ರಥಮ: ಶ್ರೇಯಸ್.

ದ್ವಿತೀಯ: ರಘು (ಕಂದಾಯ ಇಲಾಖೆ)

ತೃತೀಯ: ಅಂಬರೀಶ್ (ಮೆಡಿಕಲ್ ಕಾಲೇಜ್)---

5 ಕಿ.ಮೀ. ಓಟ:

ಪ್ರಥಮ:ಸಾಕ್ಷಿತ್.

ದ್ವಿತೀಯ: ನವನೀತ್ ಶೆಟ್ಟಿ

ತೃತೀಯ: ದಿಗಂತ್ ಗೌಡ---ಬಾಕ್ಸ್‌---

5 ಕಿ.ಮೀ ಓಟದ ಮಾರ್ಗ:

ಜಿಲ್ಲಾ ಆಟದ ಮೈಧಾನ, ಬೋಳರಾಮೇಶ್ವರ ದೇವಸ್ಥಾನ, ಐಜಿ ರಸ್ತೆ, ಕೆಎಸ್ಆರ್‌ ಟಿಸಿ ಬಸ್ ಸ್ಟಾಂಡ್, ಎನ್ಎಂಸಿ ವೃತ್ತ, ಫುಡ್ ಪ್ಯಾಲೇಸ್ ವೃತ್ತ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ ಆಜಾದ್ ಪಾರ್ಕ್, ಜಿಲ್ಲಾ ಪೊಲೀಸ್ ಕಚೇರಿ ವೃತ್ತ, ಹಾಗೂ ಜಿಲ್ಲಾ ಆಟದ ಮೈದಾನದ ವರೆಗೆ ನಡೆಯಿತು.

---

10 ಕಿ.ಮೀ ಓಟದ ಮಾರ್ಗ :

ಜಿಲ್ಲಾ ಆಟದ ಮೈಧಾನ, ಜಿಲ್ಲಾ ಪೊಲೀಸ್ ಕಚೇರಿ ವೃತ್ತ, ಆಜಾದ್ ಪಾರ್ಕ್, ಕೋಟೆಕೆರೆ, ಪೈ ವೃತ್ತ, ಬೈಪಾಸ್ ರಸ್ತೆ, ಎಐಟಿ ವೃತ್ತ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ, ಆಜಾದ್ ಪಾರ್ಕ್ ಸರ್ಕಲ್, ಜಿಲ್ಲಾ ಪೊಲೀಸ್ ಕಚೇರಿ ವೃತ್ತ, ಹಾಗೂ ಜಿಲ್ಲಾ ಆಟದ ಮೈದಾನದವರೆಗೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಕ ವ್ಯಸನದ ವಿರುದ್ದ ಜಾಗೃತ ರನ್
ನಾಡು ನುಡಿ ಬಗ್ಗೆ ಗಮನಾರ್ಹ ಸಾಧನೆ: ರವಿ ದಳವಾಯಿ