ಮಣ್ಣಿನ ವಸ್ತುಗಳ ಕುರಿತು ಅರಿವು ಮೂಡಿಸುವುದು ಅಗತ್ಯ

KannadaprabhaNewsNetwork |  
Published : Jan 23, 2025, 12:45 AM IST
ಶಿವಮೊಗ್ಗ ತಾಲೂಕು ಕುಂಬಾರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು 14 ನೇ ವರ್ಷದ ಸರ್ವ ಸದಸ್ಯರ ಸಭೆಯು ಇತ್ತೀಚೆಗೆ ಶಿವಮೊಗ್ಗ ಸೆಂಟ್ರಲ್ ರೋಟರಿ ಭವನ ಹಾಲ್ ನಲ್ಲಿ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗ: ತಾಲೂಕು ಕುಂಬಾರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು 14ನೇ ವರ್ಷದ ಸರ್ವ ಸದಸ್ಯರ ಸಭೆಯು ಶಿವಮೊಗ್ಗ ಸೆಂಟ್ರಲ್ ರೋಟರಿ ಭವನದಲ್ಲಿ ನಡೆಯಿತು.

ಶಿವಮೊಗ್ಗ: ತಾಲೂಕು ಕುಂಬಾರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು 14ನೇ ವರ್ಷದ ಸರ್ವ ಸದಸ್ಯರ ಸಭೆಯು ಶಿವಮೊಗ್ಗ ಸೆಂಟ್ರಲ್ ರೋಟರಿ ಭವನದಲ್ಲಿ ನಡೆಯಿತು.ಶಿವಮೊಗ್ಗ ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಎಸ್.ಮಣಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಣ್ಣಿನಿಂದ ಮಾಡಿದ ವಸ್ತುಗಳು ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ, ಹೀಗಿದ್ದು ಇವುಗಳ ಬಗ್ಗೆ ಜನತೆಗೆ ಕಾಳಜಿಯೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇಂದಿನ ಜಾಗತೀಕರಣ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚುತ್ತಿದೆ. ಇವುಗಳು ಪರಿಸರಕ್ಕೆ ಮಾರಕ ಎಂಬುದು ತಿಳಿದಿದ್ದರೂ ಬಹುಪಾಲು ಜನತೆ ಇದನ್ನು ಯಥೇಚ್ಛವಾಗಿ ಬಳಸುತ್ತಿದ್ದಾರೆ ಎಂದರು.ಕುಂಬಾರ ವೃತ್ತಿಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಇಂದು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಮಣ್ಣಿನ ವಸ್ತುಗಳ ಬಳಕೆ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸರ್ಕಾರದ ಗಮನ ಕೂಡ ಸೆಳೆಯಬೇಕು ಎಂದು ಹೇಳಿದರು.ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಹಿರಿಯ ವ್ಯವಸ್ಥಾಪಕ ಓಬಯ್ಯ ಮಾತನಾಡಿ, ಶಿವಮೊಗ್ಗ ತಾಲೂಕು ಮಟ್ಟದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಕ್ರಮವು ಹೆಚ್ಚು ಹೆಚ್ಚು ಮಾಡಬೇಕು. ಜೊತೆಗೆ ಕುಂಬಾರ ವೃತ್ತಿಗೆ ನೆರವು ಪ್ರೋತ್ಸಾಹ ಅತ್ಯಗತ್ಯ ಇದೆ ಎಂದರು.ತಾಲೂಕು ಕುಂಬಾರ ಸಂಘದ ನಿರ್ದೇಶಕರಾದ ಈಶ್ವರ್‌.ಬಿ.ವಿ ಮಾತನಾಡಿದರು.

ಇದೇ ವೇಳೆ 10 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆ.ಚಂದ್ರು, ವೈ.ಎನ್.ಭಾಗ್ಯಲಕ್ಷ್ಮಿ, ಕೆ.ಬಿ ಪದ್ಮನಾಥ್, ರಾಘವೇಂದ್ರ, ಈಶ್ವರಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶ್ರೀನಿವಾಸ್, ದೇವರಾಜ್, ರವೀಂದ್ರ.ಕೆ.ಟಿ, ಸವಿತಾ ಮಂಜುನಾಥ್, ರೂಪ ಈಶ್ವರ್, ಚಂದ್ರಿಕಾ ಹರೀಶ್, ಯಶೋಧ ಸುಧೀರ್, ರಮೇಶ್.ಎಂ.ಟಿ, ಟಿ.ಎಸ್.ಕೃಷ್ಣಮೂರ್ತಿ, ಅನಿತಾ ಓಬಯ್ಯ ಉಪಸ್ಥಿತರಿದ್ದರು.

PREV

Recommended Stories

‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?
ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ : ಮೊಯ್ಲಿ