ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಸಿಇಟಿ ಉಚಿತ ಆನ್‌ಲೈನ್ ತರಬೇತಿ ಹಾಗೂ ಎಂಎಸ್‌ಐಎಲ್ ವತಿಯಿಂದ ಸಿಇಟಿ ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಮ್ಮ ಕುಟುಂಬದಲ್ಲಿ ಸಹೋದರರು ಶಿಕ್ಷಣಕ್ಕೆ ಆದ್ಯತೆ ಕೊಡಲಿಲ್ಲ, ನಾನು ಮಾತ್ರ ಓದಲೇಬೇಕು ಎಂಬ ಹಠತೊಟ್ಟು, ಉನ್ನತ ಶಿಕ್ಷಣಪಡೆಯುವ ಮೂಲಕ ಇಂದು ಉನ್ನತಮಟ್ಟದಲ್ಲಿ ನಿಂತಿದ್ದೇನೆ. ಇದಕ್ಕೆಲ್ಲ ಶಿಕ್ಷಣ ಕಾರಣ ಎಂದರು.ಇಂದು ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣಕೋರ್ಸ್‌ಗೆ ಪ್ರವೇಶಪಡೆಯಬೇಕಾದರೆ ಸಿಇಟಿ, ನೀಟ್, ಜೆಇಇ ತರಬೇತಿ ಪಡೆಯಲೇಬೇಕು, ಆನ್‌ಲೈನ್ ತರಬೇತಿ ಕೊಡಿಸುವ ಸಂಬಂಧ ಚಾಮರಾಜನಗರದ ಸರ್ಕಾರಿ ಬಾಲಕ, ಬಾಲಕಿಯರ ಪದವಿಪೂರ್ವ ಕಾಲೇಜು, ಹರವೆ, ಸಂತೇಮರಹಳ್ಳಿ, ಕುದೇರು, ಚಂದಕವಾಡಿ, ವೆಂಕಟಯ್ಯನಛತ್ರ ಪದವಿಪೂರ್ವ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ತಲಾ ೧೦ವಿದ್ಯಾರ್ಥಿಗಳಂತೆ ೭೦ ವಿಜ್ಞಾನವಿಭಾಗದ ವಿದ್ಯಾರ್ಥಿಗಳಿಗೆ ಎಂಎಸ್‌ಐಎಲ್ ವತಿಯಿಂದ ಸಿಇಟಿ ಪುಸ್ತಕವಿತರಣೆ ಜತೆಗೆ ತರಬೇತಿಯನ್ನು ಕೊಡಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುಗಳ ಜತೆ ಸಿಇಟಿ ತರಬೇತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಳ ಮಾಡಲಾಗುವುದು ಎಂದರು.
ವಿದ್ಯಾರ್ಥಿಗಳು ಕೇವಲ ಶಿಕ್ಷಣಪಡೆದರೆ ಸಾಲದು, ವಿವಿಧ ಕೌಶಲ್ಯಾಧಾರಿತ ತರಬೇತಿ ಪಡೆಯಬೇಕು, ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾವಸಾಹತು ಪ್ರದೇಶದಲ್ಲಿ ವಿವಿಧ ಪ್ರತಿಷ್ಠಿತ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ತರಬೇತಿಗೆ ತಕ್ಕ ಉದ್ಯೋಗಪಡೆಯಬಹುದಾಗಿದೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಚಾಮರಾಜನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್.ಗುರುಸ್ವಾಮಿ’ ಶಿಕ್ಷಣ ಇಂದು ಮಾರಾಟದ ವಸ್ತುವಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಸಿಇಟಿ. ನೀಟ್, ಜೆಇಇ ತರಬೇತಿ ಗಗನಕುಸುಮವಾಗಿವೆ. ಇದನ್ನು ಮನಗಂಡ ಶಾಸಕರು; ಬಡಪ್ರತಿಭಾನ್ವಿತ ವಿದ್ಯಾರ್ಥಿಗಳು ಸಿಇಟಿ ತರಬೇತಿಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಚಾಮರಾಜನಗರ ತಾಲ್ಲೂಕಿನ ೭ ಸರ್ಕಾರಿಪದವಿಪೂರ್ವ ಕಾಲೇಜಿನ ಪ್ರಥಮಪಿಯುಸಿ ವಿಜ್ಞಾನವಿಭಾಗದಲ್ಲಿ ಅತಿಹೆಚ್ಚು ಅಂಕಪಡೆದ ಒಂದು ಕಾಲೇಜಿಗೆ ತಲಾ ೧೦ವಿದ್ಯಾರ್ಥಿಗಳಂತೆ ೭೦ ವಿಜ್ಞಾನವಿಭಾಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಸಿಇಟಿ ತರಬೇತಿ ಪುಸ್ತಕ ವಿತರಣೆ ಮಾಡಿದ್ದಾರೆ, ಸೂಪರ್ ನೀಟ್ ಅಕಾಡೆಮಿ ವತಿಯಿಂದ ಆನ್‌ಲೈನ್ ತರಬೇತಿ ಆರಂಭವಾಗಲಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಚುಡಾಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ) ಮಾತನಾಡಿ, ಸರ್ಕಾರಿ ಶಾಲಾಕಾಲೇಜುಗಳಲ್ಲಿ ಬಹುತೇಕ ವ್ಯಾಸಂಗ ಮಾಡುವವರು ಬಡವರ್ಗದ ವಿದ್ಯಾರ್ಥಿಗಳೇ ಆಗಿದ್ದಾರೆ, ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆದುಕೊಂಡು, ತಾವು ಅಂದುಕೊಂಡಿದ್ದ ಗುರಿಮುಟ್ಟಬೇಕು ಎಂದು ಸಲಹೆ ನೀಡಿದರು.ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಕುಮಾರ್, ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾರಾಯಣ, ನಿವೃತ್ತ ಪ್ರಾಂಶುಪಾಲ ಸೋಮಣ್ಣ, ವೆಂಕಟಯ್ಯನಛತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೇಶವನ್, ಸಂಪನ್ಮೂಲವ್ಯಕ್ತಿಗಳಾದ ಮಾದೇಶ್, ದೀಪಕ್, ಮಲ್ಲಿಕಾರ್ಜುನ್, ಚೂಡಾ ಸದಸ್ಯ ರಾಜೇಂದ್ರ (ದ್ವಾರ್ಕಿ), ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.