ಪರೀಕ್ಷೆಗಳು ಮುಗಿಯುವ ತನಕ ಟಿ20 ಕ್ರಿಕೆಟ್ ಮುಂದೂಡಲು ಆಗ್ರಹ

KannadaprabhaNewsNetwork |  
Published : Feb 10, 2026, 01:30 AM IST
9ಕೆಬಿಪಿಟಿ.2.ಬಂಗಾರಪೇಟೆಯಲ್ಲಿ ರೈತ ಸಂಘದ ಮುಖಂಡರು ಟ2ಒ ಕ್ರಿಕೆಟ್‌ ಮುಂದೂಡಲು ತಟ್ಟೆ ಹಿಡಿದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. | Kannada Prabha

ಸಾರಾಂಶ

ಕೋಟ್ಯಂತರ ಕ್ರಿಕೆಟ್‌ ಯುವ ಪ್ರೇಮಿಗಳ ಇರುವ ಭಾರತ ದೇಶದಲ್ಲಿ ಟಿ20 ವಿಶ್ವಕಪ್‌ ಜ್ವರ ಒಂದು ಕಡೆಯಾದರೆ ಮತ್ತೊಂದು ಕಡೆ ಕೋಟ್ಯಂತರ ಮಕ್ಕಳ ಭವಿಷ್ಯವನ್ನು ರೂಪಿಸುವ ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆಯ ಜ್ವರ ಏರುತ್ತಿದೆ.

ಬಂಗಾರಪೇಟೆ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳು ಮುಗಿಯವರೆಗೂ ಟಿ 20 ವಿಶ್ವಕಪ್‌ ಕ್ರಿಕೆಟ್‌ ಕ್ರೀಡೆಯನ್ನು ಮುಂದೂಡಿ ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ತಟ್ಟೆ ಹಿಡಿದು ಪ್ರಧಾನ ಮಂತ್ರಿಗಳನ್ನು ಹಾಗೂ ಕ್ರಿಕೆಟ್‌ ಆಡಳಿತ ಮಂಡಳಿಯನ್ನು ಭಿಕ್ಷೆ ಬೇಡುವ ಮೂಲಕ ಆಗ್ರಹಿಸಿದರು.ನಗರದ ಪ್ರವಾಸಿ ಮಂದಿರಲ್ಲಿ ತಟ್ಟೆ ಹಿಡಿದು ಮಾತನಾಡಿದ ಅವರು, ಕೋಟ್ಯಂತರ ಕ್ರಿಕೆಟ್‌ ಯುವ ಪ್ರೇಮಿಗಳ ಇರುವ ಭಾರತ ದೇಶದಲ್ಲಿ ಟಿ20 ವಿಶ್ವಕಪ್‌ ಜ್ವರ ಒಂದು ಕಡೆಯಾದರೆ ಮತ್ತೊಂದು ಕಡೆ ಕೋಟ್ಯಂತರ ಮಕ್ಕಳ ಭವಿಷ್ಯವನ್ನು ರೂಪಿಸುವ ಶಾಲಾ ಕಾಲೇಜು ಮಕ್ಕಳಿಗೆ ಪರೀಕ್ಷೆಯ ಜ್ವರ ಏರುತ್ತಿದೆ. ಇದರ ಮಧ್ಯ ಮಕ್ಕಳ ಭವಿಷ್ಯದ ಮೇಲೆ ಪೋಷಕರು ಒಂದು ಕಡೆ ಒತ್ತಡವು ಹಾಕಲಾರದೆ ಮತ್ತೊಂದು ಕಡೆ ಕ್ರಿಕೆಟ್‌ ನೋಡದಂತೆ ಮಕ್ಕಳಿಗೆ ಹೇಳಲಾಗದ ಪರಿಸ್ಥಿತಿಯಲ್ಲಿ ಪರೀಕ್ಷೆಗಳು ಸಮಯದಲ್ಲಿ ಮಕ್ಕಳು ಯಾವ ರೀತಿ ಎರಡು ಕಡೆ ನಿಭಾಯಿಸುತ್ತಾರೆ ಎಂಬ ಚಿಂತೆಯಲ್ಲಿರುವ ಪೋಷಕರ ಸಮಸ್ಯೆಗೆ ಸರ್ಕಾರವು ಕೂಡಲೇ ಕ್ರಿಕೆಟ್‌ ಆಡಳಿತ ಮಂಡಳಿಯ ಜೊತೆ ಚರ್ಚೆ ಮಾಡಬೇಕಾಗಿದೆಂದು ಸಲಹೆ ನೀಡಿದರು.

365 ದಿನ ಕಷ್ಟಪಟ್ಟು ಓದಿ ಅಂತಿಮ ಪರೀಕ್ಷೆಗೆ ಸಿದ್ಧರಾಗಿರುವ ಮಕ್ಕಳ ಭವಿಷ್ಯದ ಮೇಲೆ ಕ್ರಿಕೆಟ್‌ ಎಂಬ ಕ್ರೀಡೆ ಅವರ ಬಾಳಿಗೆ ಮಾರಾಕವಾಗದಿರಲಿ ಪೋಷಕರು ಮಕ್ಕಳ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕಾದರೆ ಕ್ರಿಕೆಟ್‌ ಕ್ರೀಡೆಯಿಂದ ಮಕ್ಕಳು ದೂರ ಇರುವ ಮುಖಾಂತರ ತಮ್ಮ ಭವಿಷ್ಯವನ್ನು ತಾವೇ ರೂಪಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಚಾಂದ್‌ ಪಾಷ, ಕಿರಣ್‌, ರಾಜು, ಗಿರೀಶ್‌, ಮುನ್ನ, ಮುನಿಕೃಷ್ಣ, ವಿಶ್ವ, ಮುನಿರಾಜು, ಸುಪ್ರಿಂ ಚಲ, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ ತಿಮ್ಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ: ಮಾರಸಿಂಗನಹಳ್ಳಿಯಲ್ಲಿ ಸಿಡಿ ಉತ್ಸವ ಸಂಪನ್ನ
ಸಿದ್ಧಗಂಗಾ ದನ ಜಾತ್ರೇಲಿ ₹18 ಲಕ್ಷದ ಹೋರಿ