ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುರು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂಗವಿಕಲರ ಕುಂದುಕೊರತೆಗಳ ಪರೀಶೀಲನಾ ಸಭೆ ಮತ್ತು ಅಂಗವಿಕಲರ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗವಿಕಲರು ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ನಡೆಸುವುದು ಅಗತ್ಯ. ಸುಮಾರು ೧೪ ಕಂಪನಿಗಳು ಅಂಗವಿಕಲರಿಗೆ ಮೀಸಲಿರುವ ಉದ್ಯೋಗಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ನೀಡುತ್ತಿದ್ದಾರೆ. ಈಗಾಗಲೇ ೩೦೦ಕ್ಕೂ ಹೆಚ್ಚು ಜನ ನೋಂದಣಿಯಾಗಿದ್ದಾರೆ. ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲಾ ಅಂಗವಿಕಲರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಅಂಗವಿಕಲರಿಗೆ ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಸಹ ದೇವರು ಅವರಿಗೆ ವಿಶೇಷ ಚೈತನ್ಯ ನೀಡಿ ಕಳಿಸಿದ್ದಾನೆ, ಅವರ ಚೈತನ್ಯವನ್ನು ಗುರುತಿಸಿ ಚೈತನ್ಯಕೆ ಅನುಗುಣವಾಗಿ ಅವರಿಗೆ ಅವಕಾಶ ನೀಡುವುದು ಅತಿ ಮುಖ್ಯವಾಗಿದೆ. ಅಂಗವಿಕಲರ ಕುಂದುಕೊರತೆ ಆಲಿಸಲಾಗಿದೆ. ಅವರು ನೀಡಿರುವ ಅಹವಾಲುಗಳನ್ನು ಕಾನೂನಾತ್ಮಕವಾಗಲ್ಲದೆ ಮಾನವಿಯತೆ ದೃಷ್ಟಿಯಿಂದ ನೋಡಿ ಹಾಗೂ ಅವರ ಕುಂದುಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಅಂಗವಿಕಲರಿಗೆ ಸಾಂಕೇತಿಕವಾಗಿ ಶ್ರವಣದೋಷ ಯಂತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ಎಸ್.ಕೋಮಲ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಭಾಗವಹಿಸಿದ್ದರು.190 ವಿಕಲಚೇತನರಿಗೆ ಉದ್ಯೋಗ ನೀಡಲು ಕಂಪನಿ ಒಪ್ಪಿಗೆಮಂಡ್ಯ