ಶ್ರವಣಾಂಗ ದೋಷವಿಲ್ಲದಂತೆ ನಿರ್ವಹಣೆ ಮಾಡಿಕೊಳ್ಳುವುದು ಅಗತ್ಯ-ಡಾ. ಪೂಜಾ

KannadaprabhaNewsNetwork |  
Published : Mar 13, 2024, 02:10 AM IST
ಫೋಟೋ : ೧೨ಎಚ್‌ಎನ್‌ಎಲ್೩ | Kannada Prabha

ಸಾರಾಂಶ

ಪಂಚೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಅಂಗವಾದ ಶ್ರವಣಾಂಗವನ್ನು ದೋಷವಿಲ್ಲದಂತೆ ನಿರ್ವಹಣೆ ಮಾಡಿಕೊಳ್ಳುವುದು ತೀರ ಅಗತ್ಯವಾಗಿದ್ದು, ಜಿಲ್ಲಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ಪೂಜಾ ತಿಳಿಸಿದರು.

ಹಾನಗಲ್ಲ: ಪಂಚೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಅಂಗವಾದ ಶ್ರವಣಾಂಗವನ್ನು ದೋಷವಿಲ್ಲದಂತೆ ನಿರ್ವಹಣೆ ಮಾಡಿಕೊಳ್ಳುವುದು ತೀರ ಅಗತ್ಯವಾಗಿದ್ದು, ಜಿಲ್ಲಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಾ. ಪೂಜಾ ತಿಳಿಸಿದರು.

ಮಂಗಳವಾರ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾವೇರಿ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾನಗಲ್ಲ, ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ರೆಡ್ ಕ್ರಾಸ್‌ ಘಟಕ ಹಾನಗಲ್ಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಶ್ರವಣ ದಿನ ಜಾಗೃತಿ ಅರಿವು ಕಾರ್ಯಕ್ರಮ ಹಾಗೂ ಕಿವಿ, ಮೂಗು, ಗಂಟಲು ತಜ್ಞರಿಂದ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಕಿವಿಯ ಆರೈಕೆಯ ಶಿಕ್ಷಣ ನೀಡಿ ಕಿವಿಗಳಲ್ಲಿ ಯಾವುದೇ ವಸ್ತುವನ್ನು ಅಳವಡಿಸುವುದರಿಂದ ಹಾಗೂ ಜೋರಾದ ಶಬ್ದದೊಂದಿಗೆ ಸಂಗೀತವನ್ನು ಆಲಿಸುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ತಿಳಿವಳಿಕೆ ನೀಡಿ, ಶಾಲೆಯಲ್ಲಿ ಮಕ್ಕಳು ಪಠ್ಯದ ಕಡೆಗೆ ಗಮನಕೊಡದಿದ್ದರೆ ಆ ಮಗುವಿಗೆ ಶ್ರವಣ ಪರೀಕ್ಷೆಯನ್ನು ಮಾಡಿಸಲು ಸೂಚಿಸಬೇಕು. ಯಾರಿಗೂ ಕಿವಿಯ ಮೇಲೆ ಹೊಡೆಯಬೇಡಿ. ಇದರಿಂದ ಶ್ರವಣ ಶಕ್ತಿ ಕುಂದಬಹುದು. ಕಿವಿಯಲ್ಲಿ ನೋವು ಹಾಗೂ ಕಿವಿಯಲ್ಲಿ ಸೋರಿಕೆ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಎಂದರು.

ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬೇಡಿ, ಮಗುವಿನ ಕಿವಿಯ ಮೇಲೆ ಹೊಡೆಯಬೇಡಿ, ಜೋರಾದ ಶಬ್ದದಿಂದ ಮಗುವನ್ನು ದೂರವಿಡಿ, ಸುರಕ್ಷಿತ ಆಡಿಯೋ ಡಿವೈಸ್ ಮೂಲಕ ಕೇಳುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.

ಹಾನಗಲ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಸ್ವಾತಿ ಮಾತನಾಡಿ, ಗದ್ದಲದ ಸ್ಥಳಗಳಲ್ಲಿರುವಾಗ ಕಿವಿ ಕವಚವನ್ನು ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ಯಾವುದೇ ವಸ್ತುವನ್ನು ಕಿವಿಯೊಳಗೆ ಹಾಕಬಾರದು, ನೀವು ತೆಗೆದುಕೊಳ್ಳುವ ಔಷಧಿಗಳು ನಿಮ್ಮ ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂದು ವೈದ್ಯರಿಂದ ತಿಳಿದುಕೊಳ್ಳಿ, ನೀವು ಕಿವಿಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ, ಅಗತ್ಯವಿದ್ದಲ್ಲಿ ವೈದ್ಯರು ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದರು. ತಾಲೂಕು ಆರೋಗ್ಯ ಅಧಿಕಾರಿ ವೀರೇಶ, ಅನೀತಾ ಹಾಗೂ ಮಹೇಶ ಶಿಗ್ಗಾಂವ, ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ರೆಡ್ ರಿಬ್ಬನ್‌ ಕ್ಲಬ್ ಸಂಚಾಲಕರಾದ ಪ್ರೊ. ದಿನೇಶ ಆರ್., ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ವಿಶ್ವನಾಥ ಬೊಂದಾಡೆ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಹರೀಶ್ ಟಿ.ಟಿ., ಪ್ರೊ.ಎಂ. ಬಿ. ನಾಯ್ಕ, ಪ್ರೊ. ರಾಘವೇಂದ್ರ ಮಾಡಳ್ಳಿ, ಡಾ. ಪ್ರಕಾಶ್ ಜಿ.ವಿ., ಡಾ. ರುದ್ರೇಶ್ ಬಿ.ಎಸ್., ಡಾ. ಜೀತೇಂದ್ರ ಜಿ.ಟಿ., ಮಹೇಶ ಅಕ್ಕಿವಳ್ಳಿ, ಎಂ.ಎಂ.ನಿಂಗೋಜಿ, ಎಸ್.ಸಿ. ವಿರಕ್ತಮಠ, ಮಂಜಪ್ಪ ಪರಸಿಕ್ಯಾತಿ, ಮಾಲತೇಶ ಜಡೆದ, ಜಗದೀಶ ನಿಂಬಕ್ಕನವರ ಕಾರ್ಯಕ್ರಮದಲ್ಲಿದ್ದರು.

ಪ್ರಶಿಕ್ಷಣಾರ್ಥಿ ಉಮಾ ಸ್ವಾಗತಿಸಿದರು, ಪವಿತ್ರಾ ಪ್ರಾರ್ಥಿಸಿದರು, ಸ್ಫೂರ್ತಿ ನಾಯಕ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ