ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಅಗತ್ಯ: ನಾಗರಾಜ್

KannadaprabhaNewsNetwork |  
Published : Feb 26, 2026, 02:00 AM IST
ಎಪಿಎಂಸಿ | Kannada Prabha

ಸಾರಾಂಶ

ಚಿಕ್ಕಮಗಳೂರುಪ್ರತಿಯೊಬ್ಬರೂ ಆರೋಗ್ಯವನ್ನು ಜೋಪಾನದಿಂದ ಕಾಪಾಡಬೇಕು. ದೈನಂದಿನ ಕಾಯಕದ ಜತೆಗೆ ಶರೀರದ ಏರುಪೇರನ್ನು ನಿಯಂತ್ರಿಸಲು ತಪಾಸಣೆಗೆ ಒಳಗಾ ಗುವುದು ಅತಿಮುಖ್ಯ ಎಂದು ಎಂಪಿಎಂಸಿ ಮಾರ್ಕೆಟ್ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜ್ ಹೇಳಿದರು.

ಎಪಿಎಂಸಿಯಲ್ಲಿ ಹಮಾಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರತಿಯೊಬ್ಬರೂ ಆರೋಗ್ಯವನ್ನು ಜೋಪಾನದಿಂದ ಕಾಪಾಡಬೇಕು. ದೈನಂದಿನ ಕಾಯಕದ ಜತೆಗೆ ಶರೀರದ ಏರುಪೇರನ್ನು ನಿಯಂತ್ರಿಸಲು ತಪಾಸಣೆಗೆ ಒಳಗಾ ಗುವುದು ಅತಿಮುಖ್ಯ ಎಂದು ಎಂಪಿಎಂಸಿ ಮಾರ್ಕೆಟ್ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜ್ ಹೇಳಿದರು.

ಚಿಕ್ಕಮಗಳೂರು ಎಪಿಎಂಸಿ ಮಾರ್ಕೆಟ್ ತರಕಾರಿ ವರ್ತಕರ ಸಂಘ , ಜೀವಿತಾ ಫೌಂಡೇಷನ್ ನಿಂದ ಎಂಪಿಎಂಸಿ ಆವರಣದಲ್ಲಿ ಮಂಗಳವಾರ ಹಮಾಲಿ ಕಾರ್ಮಿಕರಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತ ನಾಡಿ ಹಮಾಲಿ ವೃತ್ತಿ ಬಾಂಧವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಉಚಿತ ತಪಾಸಣೆ ನಡೆಸಲಾಗುತ್ತಿದೆ. ದಿಢೀರ್ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚೆತ್ತು ಆರಂಭದಲ್ಲೇ ಮುಂಜಾಗ್ರತೆ ವಹಿಸಬೇಕು ಎಂದರು. ಎಂಪಿಎಂಸಿ ಆವರಣದಲ್ಲೇ ತಪಾಸಣೆ ಕೇಂದ್ರ ತೆರೆದು ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಇನ್ನಿತರೆ ತಪಾಸಣೆ ಉಚಿತವಾಗಿ ಆಯೋಜಿಸಿ ಸಂಘ ಸಹಕರಿಸುತ್ತಿದೆ ಎಂದರು.

ಜೀವಿತಾ ಪೌಂಢೇಷನ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸಂಸ್ಥೆ ಈಗಾಗಲೇ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಅನೇಕ ಸಾಮಾಜಿಕ ಕಾರ್ಯ ಕೈಗೊಂಡಿದೆ. ವಿಶೇಷವಾಗಿ ಪೌರ ಕಾರ್ಮಿಕರು, ಹಿರಿಯ ರು ಮತ್ತು ವಿಕಲಚೇತನರಿಗೆ ಶಿಬಿರ ಆಯೋಜಿಸುವುದೇ ಮೂಲ ಉದ್ದೇಶ ಎಂದರು.

ಕಾರ್ಮಿಕ ಇಲಾಖೆ ಆಯುಕ್ತ ಪ್ರಭಾಕರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನೇಕ ಸವಲತ್ತು ಒದಗಿಸುತ್ತಿದೆ. ಮದುವೆ, ಹೆರಿಗೆ ಭತ್ಯೆ, ತುರ್ತು ಅನಾಹುತ ಸಂಭವಿಸಿದ್ದಲ್ಲಿ ಸಹಾಯ ಧನ ಕಲ್ಪಿಸಲಾಗಿದೆ. ಈ ಸೌಕರ್ಯ ಪಡೆಯಲು ಮೊದಲು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿ ಎಂದು ತಿಳಿಸಿದರು.

ತಪಾಸಣೆಯಲ್ಲಿ 140 ಮಂದಿ ಭಾಗವಹಿಸಿ ಸದುಪಯೋಗಪಡೆದರು. ಎಪಿಎಂಸಿ ಮಾಜಿ ಸದಸ್ಯ ಭದ್ರೇಗೌಡ, ವರ್ತಕರ ಸಂಘದ ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷ ರಾದ ಡಿ.ಟಿ.ಹರೀಶ್, ಟಿ.ಎಸ್.ರಘು, ವೈದ್ಯರಾದ ಡಾ.ಋದ್ವಿಕ್, ಡಾ. ಸಹನಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಗ ಎಂಎಲ್‌ಸಿಗಳಿಂದ ಸಚಿವ ಸ್ಥಾನಕ್ಕೆ ಬೇಡಿಕೆ
ಮನೆಗೆ ಬೇಕಾದ ಸವಲತ್ತು ಒದಗಿಸುವುದು ಅಭಿವೃದ್ಧಿ ಅಲ್ಲ