ಕನ್ನಡಕ್ಕಾಗಿ ದುಡಿದ ಮಹನೀಯರ ಸ್ಮರಣೆ ಅಗತ್ಯ

KannadaprabhaNewsNetwork | Published : May 7, 2024 1:06 AM

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿಗೆ ೧೧೦ರ ಸಂಭ್ರಮ. ಕನ್ನಡ ನಾಡು ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ೧೯೧೫ ಮೈಸೂರಿನ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತು ಸಂಸ್ಥಾಪನೆಗೊಳ್ಳಲು ಕಾರಣರಾಗಿದ್ದರು ಎಂದು ಜಿಲ್ಲಾ ಕಸಾಪ ಗೌರವ ಅಧ್ಯಕ್ಷ ಭಾರತಿ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡ ಸಾಹಿತ್ಯ ಪರಿಷತ್ತಿಗೆ ೧೧೦ರ ಸಂಭ್ರಮ. ಕನ್ನಡ ನಾಡು ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ೧೯೧೫ ಮೈಸೂರಿನ ಅರಸರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತು ಸಂಸ್ಥಾಪನೆಗೊಳ್ಳಲು ಕಾರಣರಾಗಿದ್ದರು ಎಂದು ಜಿಲ್ಲಾ ಕಸಾಪ ಗೌರವ ಅಧ್ಯಕ್ಷ ಭಾರತಿ ಪಾಟೀಲ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕ ಘಟಕಗಳ ಆಶ್ರಯದಲ್ಲಿ ನಡೆದ ೧೧೦ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ಮಹನೀಯರು ಕನ್ನಡ ಕಟ್ಟುವ ಕಾಯ೯ದಲ್ಲಿ ತೊಡಗಿ ಕನ್ನಡ ನಾಡು ನುಡಿಯ ಬೆಳವಣಿಗೆಗೆ ನೆರವಾಗಿದ್ಡಾರೆ ಎಂದರು.

ಸಾಹಿತಿ ಡಾ.ವಿ.ಡಿ ಐಹೊಳ್ಳಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ ಹಾಗೂ ನಾಟಕಗಳಿಂದ ಇಂದು ಕನ್ನಡ ಭಾಷ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅಭಿಮಾನದ ಕನ್ನಡ ಭಾಷೆಯನ್ನು ಇಂದು ನಾವೆಲ್ಲರೂ ಅಪ್ಪಿ ಒಪ್ಪಿಕೊಳ್ಳಬೇಕಾಗಿದೆ ಎಂದರು.

ಗುಣದಾಳದ ಕಲ್ಯಾಣಮಠ ವಿವೇಕಾನಂದ ಸ್ವಾಮೀಜಿ ಆಶೀವ೯ಚನ ನೀಡಿ, ಕನ್ನಡ ತಾಯಿ ಭಾಷೆ, ಮಾತೃ ಭಾಷೆ. ಆಡಳಿತ ಭಾಷೆಯಾಗಿದೆ. ಹೃದಯದಿಂದ ಅಭಿಮಾನ ಪೂರ್ವಕವಾಗಿ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯವಾಗಬೇಕು ಎಂದರು.

ರಾಜ್ಯ ಕರವೇ ಉಪಾಧ್ಯಕ್ಷ ಎಂ.ಸಿ ಮುಲ್ಲಾ ಮಾತನಾಡಿ, ಕನ್ನಡ ಉಳಿಯುವಿಗಾಗಿ ನಿರಂತರ ಹೋರಾಟ ಮಾಡುತ್ತೇವೆ. ಕನ್ನಡ ಅನ್ನದ ಭಾಷೆಯಾಗಿ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಆನಂದ ಕುಲಕರ್ಣಿ, ಇಂಡಿ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಆಲಮೇಲ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ತಿಕೋಟಾ ಕಸಾಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿದರು.

ನಗರ ಘಟಕ ಕಸಾಪ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಸಂಸ್ಥಾಪನಾ ದಿನ ಕುರಿತು ಕವನ ವಾಚಿಸಿದರು. ತಾಳಿಕೋಟೆ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ, ನಿಡಗುಂದಿ ಕಸಾಪ ಅಧ್ಯಕ್ಷ ಸಂಗಮೇಶ ಕೆಂಭಾವಿ, ಬ.ಬಾಗೇವಾಡಿ ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಚಡಚಣ ಕಸಾಪ ಅಧ್ಯಕ್ಷ ಸಿದ್ದಪ್ಪ ಮಾನೆ, ಸಿಂದಗಿ ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮನಗೂಳಿ ಹೋಬಳಿ ಅಧ್ಯಕ್ಷ ಎಸ್.ಐ ಬಿರಾದಾರ, ಹಾಸಿಂಪೀರ ವಾಲಿಕಾರ, ಬಸವರಾಜ ಆಜೂರ ಸುಖದೇವಿ ಅಲಬಾಳಮಠ, ಕಮಲಾ ಮುರಾಳ, ಶಾರದಾ ಐಹೊಳ್ಳಿ, ಜಿ ಎಸ್ ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ರಾಜೇಸಾಬ ಶಿವನಗುತ್ತಿ, ನಿಂಗಪ್ಪ ಬೋಮ್ಮನಹಳ್ಳಿ, ಲಕ್ಷೀ ಬಿರಾದಾರ, ಸಿದ್ರಾಮಪ್ಪ ಜಂಗಮಶೆಟ್ಟಿ, ಆನಂದ ಮೊಕಾಶಿ, ಸಿದ್ದು ಸಾವಳಸಂಗ ಸಲೀಮ ಮುಲ್ಲಾ, ಮಂಜುನಾಥ ಮಾನೆ, ಕೆ ಎಸ್ ಹಣಮಾನೆ, ಸುರೇಶ ಕಾಗಲಕರರಡ್ಡಿ, ಕೊಟ್ರೇಶ ಹೆಗಡಿಹಾಳ, ಅಹಮ್ಮದ ವಾಲಿಕಾರ, ಬಿ ಆಯ್ ಸಿಂಧೆ, ಎಮ್ ಎನ್ ನಿಂಬಾಳ, ಶ್ರೀಶೈಲ ಬಿಳೆಬಾವಿ, ಆರ್‌ ಬಿ ದಾನಿ, ಶಿವಾಜಿ ಮೋರೆ ಮುಂತಾದವರು ಉಪಸ್ಥಿತರಿದ್ದರು. ಸೂಫಿಯಾ ಬಿಜಾಪುರ, ಅದೀತಿ ಮೊಕಾಶಿ ಭಾಗ್ಯ ಕನ್ನಡದ ಗೀತೆಗಳನ್ನು ಹಾಡಿದರು. ಶ್ರೀಕಾಂತ ಮಾದರ ಸ್ವಾಗತಿಸಿ ಗೌರವಿಸಿದರು. ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಲಕ್ಷ್ಮಿ ಕಾತ್ರಾಳ ವಂದಿಸಿದರು.

Share this article