ಹುತಾತ್ಮ ಕ್ರಾಂತಿಕಾರಿಗಳ ಸ್ಮರಣೆ ಅವಶ್ಯ

KannadaprabhaNewsNetwork |  
Published : Mar 29, 2025, 12:34 AM IST
ಎಬಿವಿಪಿಯಿಂದ ಉಘೇ ವೀರಭೂಮಿ ಕಾರ್ಯಕ್ರಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತದ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿ ಬದಲಾವಣೆಯ ದಿಕ್ಕನ್ನು ನೀಡಿ ಭಾರತ ಮಾತೆ ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಯಾಗಬೇಕು ಎಂಬ ಉದ್ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಅಮರ ಕಲಿಗಳನ್ನು ಸ್ಮರಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತದ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿ ಬದಲಾವಣೆಯ ದಿಕ್ಕನ್ನು ನೀಡಿ ಭಾರತ ಮಾತೆ ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಯಾಗಬೇಕು ಎಂಬ ಉದ್ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಅಮರ ಕಲಿಗಳನ್ನು ಸ್ಮರಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು.

ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಭಗತ್ ಸಿಂಗ್, ರಾಜಗುರು, ಸುಖದೇವ, ಅವರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯ್ನಾಡನ್ನು ಸ್ವತಂತ್ರಗೊಳಿಸುವ ಮಹಾನ್ ಗುರಿಯನ್ನು ಸಾಧಿಸಲು ಯಾವುದೇ ತ್ಯಾಗವು ಸಾಕಾಗುವುದಿಲ್ಲ. ಸ್ವಾತಂತ್ರ‍್ಯ ಹೋರಾಟದಲ್ಲಿ ಅವರ ಸಹಚರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಸ್ಪೂರ್ತಿದಾಯಕ ದೃಷ್ಟಿಕೋನವಿತ್ತು. ಚಂದ್ರಶೇಖರ್ ಆಜಾದ್ ಅವರ ಸಹಾಯದಿಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ (ಎಚ್‌ಎಸ್‌ಆರ್‌ಎ) ಅನ್ನು ರಚಿಸಿದರು. ಅದರ ಮೂಲಕ ಸ್ವಾತಂತ್ರದ ಜಾಗೃತಿ ಕಾರ್ಯಕ್ಕೆ ಇಳಿದರು, ಸ್ವಾತಂತ್ರಕ್ಕಾಗಿ ನಾವುಗಳು ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವೆಂದು ನೇಣಿಗೆ ಹಾಕುವ ದಿನವೂ ನಗುನಗುತ್ತಾ ರಂಗ ದೇ ಬಸಂತಿ ಚೋಲಾ ಹಾಡನ್ನು ಹಾಡುತ್ತಾ ನೇಣಿಗೇರಿ ಪ್ರಾಣ ಅರ್ಪಿಸಿದ ಮೂರು ರತ್ನಗಳು ಎಂದು ಸ್ಮರಿಸಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡಿದ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ರಾಷ್ಟ್ರೀಯ ಸ್ವಯಸೇವಕ ಸಂಘದ 100 ವರ್ಷದ ಕಾಲಘಟ್ಟದಲ್ಲಿ ಸಮಾಜದಲ್ಲಿ ಪಂಚ ಪರಿವರ್ತನೆಯನ್ನು ತರುವ ನಿಟ್ಟಿನಲ್ಲಿ ಪರಿಸರ, ನಾಗರಿಕ ಕರ್ತವ್ಯ, ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಸ್ವದೇಶಿ ವಿಷಯಗಳ ಕುರಿತು ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಕೀಲ ಸಂಗಮೇಶ ಡೋಂಗರಗಾಂವಿ ಮಾತನಾಡಿ, ಸಮಾಜದಲ್ಲಿ ಯುವಶಕ್ತಿ ಸಶಕ್ತ ಶೀಲವಂತಾಗಬೇಕಾಗಿದೆ. ದಿನನಿತ್ಯ ಅಪರಾಧ ಪ್ರಕರಣಗಳು, ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಸಶಕ್ತ ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿವಿಮಾತು ಹೇಳಿದರು.

ಎಬಿವಿಪಿಯ ವಿಭಾಗ ಸಹ ಪ್ರಮುಖರಾದ ಅಮಿತಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಡಾ.ಎಚ್.ವೆಂಕಟೇಶ, ಬಸವರಾಜ ಯಾದವಾಡ ಉಪಸ್ಥಿತರಿದ್ದರು. ನಗರ ಅಧ್ಯಕ್ಷೆ ಸುಮಾ ಬೋಳರೆಡ್ಡಿ ಸ್ವಾಗತಿಸಿದರು. ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ ವಂದಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ