ಹನುಮಸಾಗರ:
ಜನಪದ ಕಲೆ ಬೆಳೆಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಉಪನ್ಯಾಸಕ ಶಿವಶಂಕರ ಮೆದಿಕೇರಿ ಹೇಳಿದರು.ಪಟ್ಟಣದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಕಸಾಪ ವತಿಯಿಂದ ಗುರಪ್ಪ ವೀರಪ್ಪ ಕನ್ನೂರ ಹಾಗೂ ಅಂದಾನಪ್ಪ ಸಾಂತಪ್ಪ ಅಗಸಿಮುಂದಿ ಅವರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರ ಹೆಸರು ಪೀಳಿಗೆಯಿಂದ ಪೀಳಿಗೆ ಉಳಿಯಬೇಕೆಂದರೆ ದತ್ತಿ ರೂಪದಲ್ಲಿ ಸ್ಮರಿಸಬೇಕು. ಸಂವಾದ ಶೈಲಿಯ ಉಪನ್ಯಾಸಗಳು ಸ್ಮರಣೆಯನ್ನು ಶಾಶ್ವತಗೊಳಿಸುತ್ತವೆ ಎಂದರು.
ಶರಣರು ಜೀವನವನ್ನು ಕೇವಲ ಧಾರ್ಮಿಕ ಬೋಧನೆಗೆ ಮಾತ್ರ ಸೀಮಿತಗೊಳಿಸದೆ, ಮಾನವೀಯತೆ ಮತ್ತು ಸಮಾನತೆಯ ಆಧಾರವಾಗಿ ಕಟ್ಟಿಕೊಟ್ಟಿದ್ದರು. ಆಧುನಿಕ ಜೀವನದಲ್ಲಿ ಶರಣ ಸಾಹಿತ್ಯ ಮೌಲ್ಯ ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗುತ್ತದೆ. ಶರಣರ ವಚನಗಳು ಇಂದಿಗೂ ಮಾರ್ಗದರ್ಶಕ. ನೈತಿಕತೆ ಮತ್ತು ಸತ್ಯಸಂಧತೆಯನ್ನು ಬದುಕಿನಲ್ಲಿ ಪಾಲಿಸಿದಾಗ ಮಾತ್ರ ಸಮಾಜ ಸಜ್ಜನಿಕೆಯಿಂದ ಸಾಗುತ್ತದೆ ಎಂದರು.ಚಂದ್ರಶೇಖರ ಗುಳೇದ ಅವರು ‘ಶೈಕ್ಷಣಿಕ ಕ್ಷೇತ್ರದಲ್ಲಿ ನಾಡು–ನುಡಿ ಅಭಿಮಾನ’ ಕುರಿತು ಮಾತನಾಡಿ, ಭಾಷೆ ನಮ್ಮ ಅಸ್ತಿತ್ವದ ಗುರುತು. ನಾಡು–ನುಡಿಯನ್ನು ಗೌರವಿಸುವುದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ. ಶಾಲಾ ಶಿಕ್ಷಣದ ಮೂಲದಲ್ಲಿಯೇ ಕನ್ನಡ ಕಾಪಾಡಿದಾಗ ಮಾತ್ರ ನಿಜವಾದ ಜ್ಞಾನವಿಕಾಸ ಸಾಧ್ಯ. ನಾಡು–ನುಡಿ ಪ್ರೇಮವು ಕೇವಲ ಸಾಂಸ್ಕೃತಿಕ ಅಂಶವಲ್ಲ, ಅದು ಸಾಮಾಜಿಕ ಒಗ್ಗೂಡಿಸುವ ಶಕ್ತಿ ಕೂಡ ಹೌದು ಎಂದರು.ಉಪಾಧ್ಯಕ್ಷೆ ಗೌರಮ್ಮ ಮುದಿಯಪ್ಪ ವಾಲ್ಮೀಕಿ, ದತ್ತಿ ದಾನಿ ವಿಶ್ವನಾಥ ಕನ್ನೂರ, ಕಸಾಪ ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲೀಕಾರ, ರಾಮಚಂದ್ರ ಬಡಿಗೇರ, ಅಬ್ದುಲ್ ಕರೀಮ ಒಂಟೆಳಿ ಮತ್ತಿತರರು ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಲೆಂಕಪ್ಪ ವಾಲೀಕಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ ಮುದಿಯಪ್ಪ ವಾಲ್ಮೀಕಿ, ಕಸ್ತೂರಬಾ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ, ದತ್ತಿ ದಾನಿ ವಿಶ್ವನಾಥ ಕನ್ನೂರ, ಅಬ್ದುಲ್‌ಕರೀಮ ಒಂಟೆಳಿ, ಹೋಬಳಿ ಅಧ್ಯಕ್ಷ ಮಂಜುನಾಥ ಗುಳೇದಗುಡ್ಡ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ, ಗೌರವ ಕಾರ್ಯದರ್ಶಿ ಶರಣಪ್ಪ ಲೈನದ, ಬಸವರಾಜ ಕನ್ನೂರ, ಸುನಂದಾ ಮೆದಿಕೇರಿ, ಗ್ಯಾನಪ್ಪ ತಳವಾರ, ಬಸವರಾಜ ದಟ್ಟಿ, ಗ್ಯಾನಪ್ಪ ತಳವಾರ ನಾಡಗೀತೆ ಪ್ರಸ್ತುತಪಡಿಸಿದರು. ಹೋಬಳಿ ಕಸಾಪ ಕಾರ್ಯದರ್ಶಿ ಬಸವರಾಜ ದಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಲೈನದ ವಂದಿಸಿದರು.