ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಮಾಜಿ ಶಾಸಕರುಗಳಿಂದ ಜಂಟಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಡಿಸೆಂಬರ್ ೫ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ನಡೆದ ಹಿನ್ನೆಲೆ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೈ ನಾಯಕರಿಗೆ ಜೆಡಿಎಸ್ ತಿರುಗೇಟು ನೀಡಿದರು. ಹಾಸನದಲ್ಲಿ ನಡೆದದ್ದು ಸ್ವಾಭಿಮಾನಿ ಸಮಾವೇಶವು ಅಲ್ಲ, ಜನ ಕಲ್ಯಾಣ ಸಮಾವೇಶವು ಅಲ್ಲ ಅದೊಂದು ಸ್ವಾರ್ಥ ಸಮಾವೇಶ. ಕೇವಲ ನಮ್ಮ ನಾಯಕರನ್ನು ನಿಂದಿಸಲು ಮಾಡಿದ ಸಮಾವೇಶವಾಗಿದ್ದು, ಅವರು ಜಿಲ್ಲೆಗೆ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕಿತ್ತು. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆ ಇದ್ದರೂ ಆ ಬಗ್ಗೆ ಒಂದೆ ಒಂದು ಮಾತನಾಡಿಲ್ಲ. ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಬೇಡವೆ? ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯ ಆಗಿದೆ ಅಂತಾರೆ. ಬಾಣಂತಿಯರ ಸಾವು ಆಗಿರುವುದು ಇದು ಯಾರಿಗೆ ಅನ್ಯಾಯ? ಮಹಿಳೆಯರು ಮಕ್ಕಳಿಗೆ ಮಾಡಿದ ಅನ್ಯಾಯ ಅಲ್ಲವೇ. ಎಲ್ಲಾ ಇಲಾಖೆ ಆಡಳಿತ ಇಲ್ಲಾ ಸರ್ಕಾರ ಸತ್ತು ಹೋಗಿದೆ. ಈ ಸಮಾವೇಶ ಅಕ್ಷ್ಯಮ್ಯ ಎಂದು ವಾಗ್ದಾಳಿ ನಡೆಸಿದರು.
ಉಪ ಚುನಾವಣೆ ಫಲಿತಾಂಶ ಆಡಳಿತ ಪಕ್ಷದ ಪರ ಬರೋದು ಸಾಮಾನ್ಯ. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿರುವ ಬಗ್ಗೆ ಸಿಎಂ ಅವರೇ ಹಗರಣ ಒಪ್ಪಿಕೊಂಡಿದ್ದಾರೆ. ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನ ಕುರುಡರಿಲ್ಲ, ೨೫ ವರ್ಷದಿಂದ ಇರೋ ಪಕ್ಷವನ್ನು ಕಿತ್ತೊಗೆಯೊದಾಗಿ ಹೇಳ್ತಾರೆ. ಅವರು ಆರು ಜಿಲ್ಲೆಯಿಂದ ಅಷ್ಟು ಜನ ಸೇರಿಸಿದ್ದಾರೆ. ನಾವು ಒಂದೇ ಜಿಲ್ಲೆಯಿಂದ ಅಷ್ಟು ಜನ ಸೇರಿಸ್ತೀವಿ. ಲೋಕಸಭಾ ಅಧಿವೇಶನ ಮುಗಿಯಲಿ, ನಮ್ಮ ಕುಮಾರಸ್ವಾಮಿ ಬರ್ತಾರೆ ನಾವೂ ರಾಜಕೀಯ ಸಮಾವೇಶ ಮಾಡ್ತೇವೆ ಎಂದು ತಿರುಗೇಟು ನೀಡಿದರು. ಇದೆಲ್ಲ ಬಿಡಿ ಇನ್ನು ಮುಂದಾದರೂ ಕೆಲಸ ಮಾಡಿ ಎಂದು ಸಲಹೆ ನೀಡಿದರು. ಸುಳ್ಳು ಆಪಾದನೆ ಬಿಡಲಿ, ನಮ್ಮ ನಾಯಕರನ್ನ ನಿಂದಿಸಿರುವುದರ ವಿರುದ್ಧ ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು.ಬಾಯಿ ಮುಚ್ಚಿಸುತ್ತಿದ್ದಾರೆ: ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಿಎಂ ಮತ್ತು ಡಿಸಿಎಂ ಮಾತುಗಳನ್ನ ನೋಡಿದ್ರೆ ಇದು ಕೇವಲ ನಿಂದನೆಗೆ ಮಾಡಿದ ಸಮಾವೇಶವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತಿದೆ. ತಾವು ಮಾಡಿದ ಅಭಿವೃದ್ಧಿ ಏನೆಂದು ಹೇಳಬೇಕಿತ್ತು. ಅಭಿವೃದ್ಧಿ ಇಲ್ಲದೆ ಆಡಳಿತ ಪಕ್ಷದ ನಾಯಕರೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅಸಮಾಧಾನ ಹೊರ ಹಾಕಿದವರ ಬಾಯಿ ಮುಚ್ಚಿಸೋ ಕೆಲಸ ಆಗ್ತಿದೆ. ಹಿಂದುಳಿದ ವರ್ಗಗಳಿಗೆ ನಾಮ್‌ಕಾವಸ್ತೆ ನಿಗಮ ಮಾಡಿದ್ದಾರೆ. ಯಾವುದೇ ನಿಮಗಳಿಂದ ಆ ಸಮುದಾಯಕ್ಕೆ ಉಪಯೋಗ ಆಗ್ತಿಲ್ಲ ಎಂದರು.
ನಮ್ಮ ಪಕ್ಷ ಗಟ್ಟಿಯಾಗಿದೆ: ನಮ್ಮ ಅವಧಿಯಲ್ಲಿ ಆಗಿರೊ ಕಟ್ಟಡಕ್ಕೆ ಇವರು ಸುಣ್ಣ ಬಣ್ಣ ಬಳಿಯಲು ಆಗಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ದೇವೇಗೌಡರ ೫೫ ವರ್ಷಗಳ ರಾಜಕೀಯದಲ್ಲಿ ಹಳ್ಳಿ ಹಳ್ಳಿಯಲ್ಲಿ ಸಾಕ್ಷಿ ಗುಡ್ಡೆ ಇದೆ. ಬೇಕಿದ್ದರೆ ಬರಲಿ ತೋರಿಸೋಣ. ಗ್ಯಾರಂಟಿ ಬಗ್ಗೆ ನಮ್ಮ ಅಪಸ್ಚರ ಇಲ್ಲ. ಆದರೆ ಅಭಿವೃದ್ಧಿ ಮಾಡಲಿ. ನಾವು ಬಿಜೆಪಿ ಅಣ್ಣ ತಮ್ಮರಂತೆ ಹೋಗ್ತಾ ಇದ್ದೀವಿ. ಮುಂದೆ ರಾಜ್ಯದಲ್ಲಿ ಜನರು ಎನ್‌ಡಿಎ ಪರ ಇರ್ತಾರೆ. ಜಿಲ್ಲೆಯಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ನಮಗೆ ಯಾವುದೇ ಆತಂಕ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ. ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ವಕ್ತಾರರಾದ ರಘು ಹೊಂಗೆರೆ ಇತರರು ಉಪಸ್ಥಿತರಿದ್ದರು.* ಬಾಕ್ಸ್: ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ