- ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಿರಿಯರು, ಅವರ ಮಾತಲ್ಲಿ ಅರ್ಥವಿದೆ ।
- ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನದ ಸಮೀಕ್ಷೆಯಿದು, ಜಾತಿ ಜನಗಣತಿ ಅಲ್ಲ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ದೇಶದಲ್ಲಿ ಪ್ರತಿಯೊಬ್ಬರಿಗೂ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ಜಾತಿ ಜನಗಣತಿಯಲ್ಲಿ ತಪ್ಪು ಏನು ಎಂಬುದನ್ನು ತಿಳಿದುಕೊಂಡು, ವಿರೋಧ ಮಾಡಬೇಕು ಎಂಬುದಷ್ಟೇ ನನ್ನ ಮನವಿ ಎಂದರು.
ಇದು ಜಾತಿ ಜನಗಣತಿಯಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಧ್ಯಯನಕ್ಕಾಗಿ ಯಾರೆಲ್ಲಾ ಹಿಂದುಳಿದಿದ್ದಾರೆ ಎಂಬುದನ್ನು ಕೈಗೊಂಡಿದ್ದ ಸಮೀಕ್ಷೆಯಾಗಿದೆ. ಎಲ್ಲ ಲಿಂಗಾಯತರಲ್ಲಿ, ಪರಿಶಿಷ್ಟ ಜಾತಿ- ಪಂಗಡಗಳಲ್ಲಿ, ಹಿಂದುಳಿದ ವರ್ಗಗಳಲ್ಲೂ ಅತ್ಯಂತ ಕಡುಬಡವರಿದ್ದಾರೆ. ಅಂತಹವರಿಗೆ ಈ ವರದಿಯಿಂದ ಅನುಕೂಲವಾಗುತ್ತದೆ ಎಂದು ಸರ್ಕಾರದ ಜಾತಿ ಜನಗಣತಿ ವರದಿಯನ್ನು ಶಾಸಕ ಬಸವಂತಪ್ಪ ಸಮರ್ಥಿಸಿಕೊಂಡರು.
- - -
* ಜಾತಿ ಜನಗಣತಿ ಬೇಡಿಕೆ ಇಡ್ಬೇಕಿರೋದು ಶೋಷಿತರೇ ಹೊರತು ಬಲಾಢ್ಯರಲ್ಲ: ಜಿಬಿವಿ
ಜಾತಿ ಜನಗಣತಿ ಬೇಡಿಕೆ ಇಡಬೇಕಾಗಿರುವುದು ಶೋಷಿತರೇ ಹೊರತು, ಬಲಾಢ್ಯರಲ್ಲ. ಜಾತಿ ಜನಗಣತಿ ವರದಿ ಜಾರಿಗಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಿ, ಹಕ್ಕುಗಳನ್ನು ಪಡೆಯಬೇಕು. ಜಾತಿಗಣತಿ ಜಾರಿಗೆ ಸಿದ್ದರಾಮಯ್ಯ ಮಾಡುತ್ತಿರುವ ಕೆಲಸ ಶ್ಲಾಘನೀಯ. ಇದು ಅನುಷ್ಠಾನ ಆಗಬೇಕು. ಬಹುಮತವಿರದಿದ್ದರೆ ಅಸಮಾನತೆ ಇದ್ದೇ ಇರುತ್ತದೆ. ಕೆಳಗಿರುವವರನ್ನು ಬೆಳೆಸುವ ಕೆಲಸ ಆಗುತ್ತಿಲ್ಲ. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿದ್ದರೆ ನಾನು ಸಂಸದನಾಗುತ್ತಿದ್ದೆ ಎಂದಿದ್ದಾರೆ.ನಾವೇನೂ ಯಾರದ್ದೋ ಸ್ವಂತ ಆಸ್ತಿ ಕೇಳುತ್ತಿಲ್ಲ. ಕಾನೂನು ಬದ್ಧವಾಗಿ, ಸಂವಿಧಾನಬದ್ಧವಾಗಿ, ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿಗೆ ಕೇಳುತ್ತಿದ್ದೇವೆ ಎಂದು ವಿನಯಕುಮಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
(ಬಾಕ್ಸ್)
* ಎಲ್ಲರೂ ಕಾದು ನೋಡೋಣ: ಡಾ.ಪ್ರಭಾದಾವಣಗೆರೆ: ಜಾತಿಗಣತಿ ಬಗ್ಗೆ ಪ್ರತಿಯೊಬ್ಬ ಸಮಾಜದವರಿಗೂ ಆತಂಕವಿದೆ. ಹತ್ತು ವರ್ಷಗಳ ಹಿಂದೆ ಮಾಡಿದ ಜಾತಿ ಜನಗಣತಿ ವರದಿ ಇದಾಗಿದೆ. ಎಲ್ಲ ಸಮುದಾಯದ ಜನಸಂಖ್ಯೆಯೂ ಹೆಚ್ಚಾಗಿದೆ. ಈ ವರದಿ ಜಾರಿಗೊಳಿಸಲು ಮತ್ತೆ ಸಚಿವ ಸಂಪುಯದಲ್ಲಿ ಚರ್ಚೆಯಾಗಲಿದೆ. ಎಲ್ಲರೂ ಕಾದು ನೋಡೋಣ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ನಿನ್ನೆ ಸಂಜೆಯಷ್ಟೇ ಸಂಪುಟ ಸಭೆ ನಡೆದಿದೆ. ಎಲ್ಲ ಸಚಿವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಭೆಯಲ್ಲಿ ಆಳವಾಗಿ ಚರ್ಚಿಸಲು ಮತ್ತೆ ಸಮಯ ನಿಗದಿಯಾಗಿದೆ ಎಂದರು.
ಸಂಪುಟ ಸಭೆ ನಿರ್ಣಯ ಕಾಯ್ದಿರಿಸಲಾಗಿದೆ. ಜಾತಿಗಣತಿ ಸರಿಯಾಗಿ ಆಗಿಲ್ಲವೆಂದು ತುಮಕೂರು ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ. ಎಲ್ಲ ಸಮಾಜದವರಿಗೂ ಜಾತಿಗಣತಿಯಿಂದ ಒಳ್ಳೆಯದಾಗಲಿ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲರೂ ವರದಿಗಾಗಿ ಕಾದುನೋಡೋಣ ಎಂದು ತಿಳಿಸಿದರು.- - --18ಕೆಡಿವಿಜಿ6: ಕೆ.ಎಸ್.ಬಸವಂತಪ್ಪ
-18ಕೆಡಿವಿಜಿ1: ವಿನಯಕುಮಾರ-18ಕೆಡಿವಿಜಿ5: ಡಾ.ಪ್ರಭಾ ಮಲ್ಲಿಕಾರ್ಜುನ