ಕನ್ನಡಪ್ರಭ ವಾರ್ತೆ ಕೊಪ್ಪಳ
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಾತನಾಡುವ ವೇಳೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಂವ, ಇಂವ ಎಂದೆಲ್ಲ ಮಾತನಾಡುತ್ತಿರುವುದು ಸರಿಯಲ್ಲ ಎಂದರು. ಅವರು ಅಧಿಕಾರ ಸಿಗುವುದಿಲ್ಲ ಎಂದು ಎಷ್ಟು ವಿಚಲಿತರಾಗಿದ್ದಾರೆ ಎಂದರೆ, ವೋಟ್ ಹಾಕದಿದ್ದರೂ ಮಣ್ಣಿಗಾದರೂ ಬನ್ನಿ ಎಂದು ಭಾವನಾತ್ಮಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ವಿಡಿಯೋಗಳು ತಪ್ಪಾಗಿ ಎಡಿಟ್ ಮಾಡುವುದರಲ್ಲಿಯೂ ಎತ್ತಿದ ಕೈ. ತೆಲಂಗಾಣದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಮಾತನಾಡಿದ್ದನ್ನು ಎಡಿಟ್ ಮಾಡಿದ್ದಾರೆ. ಸಂವಿಧಾನ ತೆಗೆದು ಹಾಕಲಿದ್ದಾರೆ, ಮೀಸಲಾತಿ ತೆಗೆದುಹಾಕಿದ್ದಾರೆ ಎನ್ನುವ ಅರ್ಥದಲ್ಲಿ ಮಾಡಿದ್ದಾರೆ. ಇದರ ವಿರುದ್ಧ ಈಗಾಗಲೇ ದೂರು ಸಹ ದಾಖಲಾಗಿದೆ ಎಂದರು.ಮೀಸಲಾತಿಯನ್ನು ತೆಗೆದುಹಾಕುವುದಿಲ್ಲ. ಮತ್ತೆ ಅಂಬೇಡ್ಕರ್ ಬಂದರೂ ಸಹ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಆದರೂ ಪದೇ ಪದೆ ಅದನ್ನೇ ಹೇಳಿ, ಮತದಾರರು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ:
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ತನಿಖೆ ನಡೆದ ಮೇಲೆ ಸತ್ಯ ಬೆಳಕಿಗೆ ಬರುತ್ತದೆ ಎಂದರು.
ನೇಹಾ ಪ್ರಕರಣಕ್ಕೂ ಇದಕ್ಕೂ ಸಂಬಂಧ ಕಲ್ಪಿಸಲು ಬರುವುದಿಲ್ಲ. ಅದೇ ಬೇರೆ ಇದೇ ಬೇರೆ. ಅದು ಕೊಲೆ ಪ್ರಕರಣ ಎಂದರು.