ಪೊಲೀಸರ ಸಮಸ್ಯೆ ಗಮನಿಸುವುದು ನಮ್ಮ ಕರ್ತವ್ಯ: ಶಾಸಕ ಕೆ.ಎಸ್.ಆನಂದ್

KannadaprabhaNewsNetwork |  
Published : Mar 06, 2026, 01:45 AM IST
5ಕೆಕೆಡಿಯು1 | Kannada Prabha

ಸಾರಾಂಶ

ಕಡೂರುನಮ್ಮರಕ್ಷಣೆಗೆ ಇರುವ ಪೊಲೀಸರ ಸಮಸ್ಯೆಗಳ ಬಗ್ಗೆ ಗಮನಿಸುವುದು ಜನಪ್ರತಿನಿಧಿಯಾಗಿ ನಮ್ಮ ಕರ್ತವ್ಯ. ಪೊಲೀಸರಿಗೆ ಹೊಸ ವಸತಿ ಗೃಹಗಳ ಅಗತ್ಯ ಇರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸರ್ಕಾರದಿಂದ ಅಗತ್ಯ ಅನುದಾನಕ್ಕೆ ಕ್ರಮ ವಹಿಸ ಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಗೆದ್ಲೆಹಳ್ಳಿ ಬಳಿಯ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ನೂತನ ವಸತಿ ಗೃಹಗಳ ಸಮುಚ್ಚಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ನಮ್ಮರಕ್ಷಣೆಗೆ ಇರುವ ಪೊಲೀಸರ ಸಮಸ್ಯೆಗಳ ಬಗ್ಗೆ ಗಮನಿಸುವುದು ಜನಪ್ರತಿನಿಧಿಯಾಗಿ ನಮ್ಮ ಕರ್ತವ್ಯ. ಪೊಲೀಸರಿಗೆ ಹೊಸ ವಸತಿ ಗೃಹಗಳ ಅಗತ್ಯ ಇರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸರ್ಕಾರದಿಂದ ಅಗತ್ಯ ಅನುದಾನಕ್ಕೆ ಕ್ರಮ ವಹಿಸ ಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ತಾಲೂಕಿನ ಗೆದ್ಲೆಹಳ್ಳಿ ಬಳಿಯ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ನೂತನ ವಸತಿ ಗೃಹಗಳ ಸಮುಚ್ಚಯ ಉದ್ಘಾಟಿಸಿ ಮಾತನಾಡಿ ಎರಡು ಕೊಠಡಿಗಳ ವಸತಿ ಗೃಹಗಳು ಅಪಾರ್ಟ್ ಮೆಂಟ್ ಗಳಂತೆ ನಿರ್ಮಾಣವಾಗಿವೆ. ಕಡೂರಲ್ಲಿ ಹಳೆ ಪೊಲೀಸ್‌ ಸ್ಟೇಷನ್ ಮತ್ತು ತಾಲೂಕು ಕಚೇರಿ ಹಿಂಭಾಗದಲ್ಲಿ ಹಾಳಾಗಿರುವ ವಸತಿ ಗೃಹಗಳನ್ನು ತೆರೆವುಮಾಡಿ ಹೊಸ ಗೃಹಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು.

ಅಂದಿನ ನಮ್ಮ ನಾಯಕರು ಹಾಗೂ ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿಯವರು ಪೊಲೀಸ್‌ ತರಬೇತಿ ಕೇಂದ್ರಕ್ಕೆ ನೀಡಿದ್ದ ಸುಮಾರು 58 ಎಕರೆ ಜಮೀನಲ್ಲಿ ಇಂದು ಭವ್ಯವಾದ ತರಬೇತಿ ಕೇಂದ್ರ ನಿರ್ಮಾಣವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಪೊಲೀಸ್‌ ಸೇವೆಗೆ ಸೇರಿ ಇಲ್ಲಿ ತರಬೇತಿ ಪಡೆದು ಕರ್ತವ್ಯಕ್ಕೆ ಹಾಜರಾಗುವುದು ಖುಷಿ ತರುತ್ತಿದೆ ಎಂದರು. ಸ್ಟೇಡಿಯಂ ಮತ್ತು ಆಡಿಟೋರಿಯಂ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಲು ಪಕ್ಕದ ಗ್ರಾಮಗಳ ಜನರ ಜೊತೆ ಮಾತನಾಡಿ ನೀಡಲು ಕ್ರಮ ವಹಿಸುತ್ತೇನೆ. ಈಗಾಗಲೇ 25 ಎಕರೆ ಪ್ರದೇಶ ಜವಳಿ ಪಾಕ್‌ ಉದ್ದೇಶಕ್ಕೆ ನೀಡಲಾಗಿದೆ. ನಮ್ಮನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡುವಂತಿಲ್ಲ. ಆದರೆ ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನಪ್ರತಿನಿಧಿಯಾಗಿ ಸದಾ ನಿಮ್ಮ ಜೊತೆ ಇರುತ್ತೇನೆ ಎಂದರು. ತರಬೇತಿ ಕೇಂದ್ರದ ಸೂಪರಿಂಟೆಂಡೆಂಟ್ ಶ್ರೀನಿವಾಸ್ ಮಾತನಾಡಿ, ಈ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಕಾರಣರಾದ ಶಾಸಕ ಕೆ. ಎಸ್. ಆನಂದ್ ಅವರು ₹3.15ಕೋಟಿ ಅನುದಾನ ನೀಡಿ ಕಾಮಗಾರಿಗೆ ಚಾಲನೆ ನೀಡಿ ಇಂದು 12 ವಸತಿ ಗೃಹಗಳು ಲೋಕಾರ್ಪಣೆ ಆಗುವ ಮೂಲಕ ಈ ನಮ್ಮ ಶಾಸಕರೇ ಉದ್ಘಾಟನೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಮಲ್ಲಿಕಾರ್ಜುನ್, ಮೈಸೂರು ಹೌಸಿಂಗ್ ಕಾರ್ಪೋರೇಶನ್ನಿನ ಮಹದೇವಸ್ವಾಮಿ, ಹಾಸನ ಲೋಕೋಪಯೋಗಿ ಎಇಇ ಲೋಕೇಶ್, ಗುತ್ತಿಗೆದಾರ ರವಿಶಂಕರ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಎಸ್ ಎಲ್.ರುದ್ರೇಗೌಡ ಸೇರಿದಂತೆ ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿ ಸಿಬ್ಬಂದಿ ಇದ್ದರು.

4ಕೆಕೆಡಿಯು2.

ಕಡೂರು ತಾಲೂಕಿನ ಗೆದ್ಲೆಹಳ್ಳಿ ಬಳಿಯ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ನೂತನ ವಸತಿ ಗೃಹಗಳ ಸಮುಚ್ಚಯವನ್ನು ಶಾಸಕ ಕೆ.ಎಸ್. ಆನಂದ್ ಉಧ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿನ್ನೇನಹಳ್ಳಿ ಸೊಸೈಟಿಗೆ ಯುವ ನಾಯಕರ ಆಯ್ಕೆ
ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ