ಕಲಬುರಗಿ: ಸಂಸ್ಕೃತಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಡಾ. ಗುರುರಾಜ ಕರ್ಜಗಿ

KannadaprabhaNewsNetwork |  
Published : Jan 14, 2024, 01:36 AM IST
ಜೇವರ್ಗಿ :ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಗುರುಕುಲ ಉತ್ಸವ ಕಾರ್ಯಕ್ರಮವನ್ನು ಶಿವಲಾಲಸಿಂಗ್ ಉದ್ಘಾಟಿಸಿದರು, ಅಭಿನವ ಗುರುಬಸವ ಶಿವಾಚಾರ್ಯ ಅಂಕಲಗಿ,ಡಾ.ಗುರುರಾಜ ಕರ್ಜಗಿ, ದೊಡ್ಡಪ್ಪಗೌಡಪಾಟಿಲ ನರಿಬೋಳ, ತಹಶೀಲ್ದಾರ ಮಲ್ಲಣ್ಣ ಯಲಗೋಡ, ನಿತೀನ ನಾಯಕ, ಗೋಲಯ್ಯಾ ಹಿರೇಮಠ ಇದ್ದರು. | Kannada Prabha

ಸಾರಾಂಶ

ಮಕ್ಕಳ ಭವಿಷ್ಯ ಬೇರೆಯವರ ಕೈಯಲ್ಲಿ ಇರುವುದಿಲ್ಲ. ಸ್ವಂತ ತಂದೆ ತಾಯಿ ಹಾಗೂ ಶಿಕ್ಷಕರ ಕೈಯಲ್ಲಿ ಇರುತ್ತದೆ. ಈ ಮೂರು ಜನರ ಒಳ್ಳೆಯ ಮಾರ್ಗದರ್ಶನವೇ ಮಕ್ಕಳ ಭವಿಷ್ಯ ರೂಪಿಸುತ್ತದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಈಗಿನ ಕಾಲದಲ್ಲಿ ಮನುಷ್ಯ ಮನುಷ್ಯರನ್ನು ನಂಬುವುದು ಕಡಿಮೆ ಆಗುತ್ತಿದೆ. ಇದರಿಂದ ಮನುಷ್ಯತ್ವ ಎಂಬುವುದು ಕಳೆದು ಹೋಗುತ್ತಿದೆ. ಮನುಷ್ಯತ್ವ ಉಳಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಚಿಕ್ಕ ಮಕ್ಕಳ ಕೈಯಲ್ಲಿ ತಂದೆ ತಾಯಿಗಳು ಮೊಬೈಲ್ ನೀಡುವುದು ನಿಲ್ಲಿಸಬೇಕು. ಮಕ್ಕಳ ಕೈಯಲ್ಲಿ ಮೊಬೈಲ್ ನೀಡುವುದರಿಂದ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಎಂದು ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರಜಗಿ ಹೇಳಿದರು.

ಅವರು ಪಟ್ಟಣದ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಗುರುಕುಲ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಭವಿಷ್ಯ ಬೇರೆಯವರ ಕೈಯಲ್ಲಿ ಇರುವುದಿಲ್ಲ. ಸ್ವಂತ ತಂದೆ ತಾಯಿ ಹಾಗೂ ಶಿಕ್ಷಕರ ಕೈಯಲ್ಲಿ ಇರುತ್ತದೆ. ಈ ಮೂರು ಜನರ ಒಳ್ಳೆಯ ಮಾರ್ಗದರ್ಶನವೇ ಮಕ್ಕಳ ಭವಿಷ್ಯ ರೂಪಿಸುತ್ತದೆ. ಆ ನಿಟ್ಟಿನಲ್ಲಿ ಮಕ್ಕಳ ಮನಸ್ಸಲ್ಲಿ ಭವಿಷ್ಯದ ಬಗ್ಗೆ ದೊಡ್ಡದಾದ ಕನಸು ಕಾಣುವಂತೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು ಬಹಳ ಪ್ರಮುಖವಾಗಿರುತ್ತದೆ. ಮಕ್ಕಳ ಭವಿಷ್ಯ ರೂಪಿಸುವುದರ ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಸಂಸ್ಕೃತಿ ಕಲಿಸುವುದು ಬಹಳ ಮಹತ್ವದಾಗಿರುತ್ತದೆ ಎಂದು ಡಾ. ಗುರುರಾಜ ಕರ್ಜಗಿ ಹೇಳಿದರು.

ಕಾಂಗ್ರೆಸ್ ಮುಖಂಡ ಶಿವಲಾಲಸಿಂಗ್ ಗುರುಕುಲ ಉತ್ಸವ-೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಲಯ್ಯ ಸಿ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗುರುಕುಲ ಹಾಗೂ ದಾನಮ್ಮ ಕಾಲೇಜಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಡಾ.ಗುರುರಾಜ ಕರ್ಜಗಿ ಸನ್ಮಾನಿಸಿದರು.

ಅಂಕಲಗಿಯ ಅಭಿನವ ಗುರುಬಸವ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು, ತಹಸೀಲ್ದಾರ ಮಲ್ಲಣ್ಣ ಯಲಗೋಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಲಬುರ್ಗಿಯ ಶ್ರೀಗುರು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ನಿತೀನ್ ಎ. ನಾಯಕ, ರಾಜಶೇಖರ ಸಾಹು ಸೀರಿ, ವಿಜಯಕುಮಾರ ಕೆ. ಹಿರೇಮಠ, ಸಿಪಿಐ ರಾಜೇಸಾಹೇಬ ನಧಾಪ್, ಚನಮಲ್ಲಯ್ಯ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಟಿ. ಬಿರಾದಾರ ಮಹಾಂತಯ್ಯ ಹಿರೇಮಠ, ಸಮಜ ಸೇವಕ ಕಲ್ಯಾಣಕುಮಾರ ಸಂಗಾವಿ ಗಂವ್ಹಾರ, ಜಗದೀಶ ಉಕನಾಳಕರ್, ಜ್ಯೋತಿ ಸಾಲಿಮಠ, ರಾಜೇಂದ್ರ ಮಠ, ಎಸ್.ಕೆ ಬಿರಾದಾರ, ಭೀಮಾಶಂಕರ ವಿಭೂತಿ, ಚಂದ್ರಶೇಖರ ತುಂಬಗಿ, ಸದಾನಂದ ಪಾಟೀಲ, ಶ್ರೀಹರಿ ಕರಕಳ್ಳಿ, ಶಿವಶಂಕರ ಜವಳಗಿ, ಶ್ರೀಶೈಲಗೌಡ ಕರಕಳ್ಳಿ, ಶರಣಗೌಡ ಯಲಗೌಡ, ರೇವಣಸಿದ್ದ ಗಾಣಗೇರ ನೆಲೋಗಿ, ಬಸವರಾಜ ಮಾಗಣಗೇರಾ ಸೇರಿದಂತೆ ಗುರುಕುಲ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೂರಾರು ಜನ ಪಾಲಕರು ಸಿಬ್ಬಂದಿವರ್ಗದವರು ನೂರಾರು ಜನ ಮಕ್ಕಳು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ