ಕನ್ನಡ ಜಾನಪದ ದಿನಾಚಾರಣೆ ಉದ್ಘಾಟನೆ
ಜಾನಪದ ಕಲೆ, ಸಂಸ್ಕೃತಿ ಪರಂಪರೆ ನಮ್ಮ ಪೂರ್ವಿಕರಿಂದ ಬಂದ ಬಳುವಳಿ. ಈ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ಹೇಳಿದರು.
ತಾಲೂಕಿನ ಕೂತಗೋಡು ಪಂಚಾಯಿತಿ ವೈಕುಂಠಪುರದಲ್ಲಿ ಶೃಂಗೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಆಯೋಜಿಸಿದ್ದ ಕನ್ನಡ ಜಾನಪದ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಬಂದಿರುವ ಜಾನಪದ ಕಲೆ, ಮೌಲ್ಯ, ಸಂಸ್ಕೃತಿಗಳು ಇಂದು ನಶಿಸುವ ಹಂತದಲ್ಲಿದೆ. ಪಾಶ್ಚಿಮಾತ್ಯ ಸಂಸ್ಕೃತಿ, ಆಧುನಿಕ ಭರಾಟೆ ನಡುವೆ ನಮ್ಮ ಯುವಜನಾಂಗ ನಮ್ಮ ಸಂಸ್ಕೃತಿ, ಮೌಲ್ಯಗಳಿಂದ ದೂರ ಸರಿಯುತ್ತಿದೆ.ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರಾಯಿಕ ಜಾನಪದ ಕಲೆ, ಆಚರಣೆ, ಹಬ್ಬಗಳು ಮಹತ್ವ ಕಳೆದುಕೊಳ್ಳುವತ್ತ ಸಾಗಿದೆ. ಅಂಟಿಕೆ ಪಿಂಟಿಕೆ, ಗ್ರಾಮೀಣ ಆಟಗಳು, ಹುಲಿ ವೇಷ, ಕರಡಿ ಕುಣಿತ ಮೊದಲಾದ ಸಾಂಪ್ರದಾಯಿಕ ಕಲೆಗಳು ಅಪರೂಪಕ್ಕೆ ಕೆಲವೆಡೆ ಉಳಿದುಕೊಂಡಿದ್ದರೂ ಪ್ರೋತ್ಸಾಹವಿಲ್ಲದೇ ಕಣ್ಮರೆಯತ್ತ ಸಾಗುತ್ತಿವೆ. ಇವುಗಳನ್ನು ಉಳಿಸಿ ಬೆಳೆಸಬೇಕು ಎಂದರು.
25 ಶ್ರೀ ಚಿತ್ರ 1-