ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಹೊಣೆ

KannadaprabhaNewsNetwork |  
Published : May 28, 2025, 11:54 PM IST
ಶ್ರೀ ಅರಸಿಕಟ್ಟೆ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ. ಎ.ಟಿ. ರಾಮಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಈಗಾಗಲೇ ಸಾಕಷ್ಟು ಪ್ರಕೃತಿ ಹಾನಿಗೊಳಗಾಗಿದ್ದು ನಾವು ಸೇವಿಸುವ ಗಾಳಿ, ನೀರು ವಿಷಪೂರಿತವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ಲಾಸ್ಟಿಕ್‌ಗಳ ಅಂಶಗಳು ಮಣ್ಣಿನಲ್ಲಿ ಬೆರೆತು ಭೂಮಿಯಲ್ಲಿ ಫಲವತತ್ತೆ ಕುಂದುತ್ತಿದೆ. ಕಾಡುಗಳು ಬರಿದಾಗಿ ಬಾಹ್ಯ ಉಷ್ಣತೆ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ಎಲ್ಲರೂ ಸಹಕರಿಸಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ದ್ರೋಹ ಬಗೆದಂತಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ಜನ್ಮಕೊಟ್ಟ ಭೂಮಿಯು ನಮ್ಮ ಪರಿಸರ. ಅದರ ರಕ್ಷಣೆ ನೆಲ ಜಲ ಜೀವ ಸಂಕುಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ತಿಳಿಸಿದ್ದಾರೆ.ಪರಿಸರಕ್ಕಾಗಿ ನಾವು ತಾಲೂಕು ಘಟಕದ ಸ್ಥಾಪನೆಯ ನಿಮಿತ್ತ ಶ್ರೀ ಅರಸಿಕಟ್ಟೆ ದೇವಸ್ಥಾನದ ಸಭಾಭವನದಲ್ಲಿ ಪರಿಸರ ಆಸಕ್ತರು ಒಟ್ಟಾಗಿ ಸೇರಿ ಪರಿಸರಕ್ಕಾಗಿ ನಾವು ತಾಲೂಕು ಸಂಚಾಲಕರನ್ನು ಗುರುತಿಸುವ ಉದ್ದೇಶದಿಂದ ಸೇರಿದ ಸಭೆಯಲ್ಲಿ ಮಾತನಾಡಿದ ಡಾ. ಎ.ಟಿ ರಾಮಸ್ವಾಮಿ, ಪ್ರಕೃತಿಯನ್ನು ನಾವು ಸಮತೋಲನದಿಂದ ಕಾಪಾಡಬೇಕು. ಈಗಾಗಲೇ ಸಾಕಷ್ಟು ಪ್ರಕೃತಿ ಹಾನಿಗೊಳಗಾಗಿದ್ದು ನಾವು ಸೇವಿಸುವ ಗಾಳಿ, ನೀರು ವಿಷಪೂರಿತವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪ್ಲಾಸ್ಟಿಕ್‌ಗಳ ಅಂಶಗಳು ಮಣ್ಣಿನಲ್ಲಿ ಬೆರೆತು ಭೂಮಿಯಲ್ಲಿ ಫಲವತತ್ತೆ ಕುಂದುತ್ತಿದೆ. ಕಾಡುಗಳು ಬರಿದಾಗಿ ಬಾಹ್ಯ ಉಷ್ಣತೆ ಹೆಚ್ಚಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ಎಲ್ಲರೂ ಸಹಕರಿಸಬೇಕು. ಇಲ್ಲವಾದರೆ ಮುಂದಿನ ಪೀಳಿಗೆಗೆ ದ್ರೋಹ ಬಗೆದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರಕ್ಕಾಗಿ ನಾವು ಸಂಘಟನೆಯಲ್ಲಿ ಭಾಗಿವಹಿಸಲು ಕೋರಿದರು.ಇದೇ ವೇಳೆ ತಾಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ವಿರೇಶ್ ಬಿ.ಸಿ, ತಾಲೂಕು ರೈತಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಹಿರಿಯ ವಕೀಲರಾದ ಜನಾರ್ದನ ಗುಪ್ತ, ಗಂಗಾಧರ, ದಿವಾಕರ, ಶ್ರೀ ಅರಸಿಕಟ್ಟೆ ದೇವಾಲಯ ಸಮಿತಿ ಕಾರ್ಯದರ್ಶಿ ಕೃಷ್ಣೇಗೌಡ ಹಾಗೂ ನೂರಾರು ಪರಿಸರ ಪ್ರೇಮಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''