ತಂಬಾಕು ಮುಕ್ತ ಸಮಾಜದಿಂದ ಬಲಿಷ್ಠ ದೇಶ ಕಟ್ಟಲು ಸಾಧ್ಯ: ನ್ಯಾ.ಶಿವಕುಮಾರ್.ಆರ್.

KannadaprabhaNewsNetwork |  
Published : Jun 03, 2024, 12:31 AM IST
1ಕೆಟಿಆರ್.ಕೆ.2ಃತರೀಕೆರೆ ಸಮೀಪದ ಮುಡಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್ ಅರ್. ಉದ್ಘಾಟಿಸಿದರು. ತಾ.ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಮುಡಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸನ್ನ ಕೆ.ಆರ್.ಮತ್ತಿತರರು ಇದ್ದಾರೆ. | Kannada Prabha

ಸಾರಾಂಶ

ತರೀಕೆರೆತಂಬಾಕು ಮುಕ್ತ ಸಮಾಜದಿಂದ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್ ಅರ್. ಹೇಳಿದ್ದಾರೆ.

ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ತರೀಕೆರೆ

ತಂಬಾಕು ಮುಕ್ತ ಸಮಾಜದಿಂದ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್ ಅರ್. ಹೇಳಿದ್ದಾರೆ.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮುಡುಗೋಡು ಇವರ ಸಂಯುಕ್ತಾಶ್ರಯದಲ್ಲಿ ಮುಡುಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ, ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇಂದು ಯುವಜನತೆ ಅದರಲ್ಲೂ ಹದಿ ಹರೆಯದ ಮಕ್ಕಳು ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು ಕಂಡು ತುಂಬಾ ಕಳವಳ ವ್ಯಕ್ತಪಡಿಸಿದರು. ತಂಬಾಕು ಮುಕ್ತ ಸಮಾಜ ನಿರ್ಮಾಣವಾದಾಗ ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ತಂಬಾಕನ್ನು ಎರಡು ವಿಧಗಳಲ್ಲಿ ಸೇವಿಸುತ್ತಾರೆ, ಜಿಗಿಯುವ ತಂಬಾಕು, ಸೇದುವ ತಂಬಾಕು ಎರಡು ಅಪಾಯಕಾರಿ. ತಂಬಾಕು ಉತ್ಬನ್ನಗಳ ಬಳಕೆಯಿಂದ ಬಾಯಿ, ಗಂಟಲು, ಶ್ವಾಸಕೋಶ, ಜಠರ, ಲಿವರ್, ಕಿಡ್ನಿಗಳಂತಹ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಬಂಜೆತನ, ಕುರುಡುತನ, ಕ್ಷಯ ರೋಗ, ಗರ್ಭಕೋಶದ ಕ್ಯಾನ್ಸರ್ , ಗ್ಯಾಂಗ್ರಿನ್, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ ಎಂದು ಹೇಳಿದರು.

ಪ್ರತಿವರ್ಷ 13 ಲಕ್ಷ ಜನರು ಈ ತಂಬಾಕು ಉತ್ಪನ್ನಗಳಿಂದ ಉಂಟಾದ ಕಾಯಿಲೆಗಳಿಂದ ಸಾಯುತ್ತಿದ್ದಾರೆ. ತಂಬಾಕು ಸೇವನೆಯಿಂದ ಉತ್ಪತ್ತಿಯಾದ ತ್ಯಾಜ್ಯ ಪರಿಸರಕ್ಕೂಸಹ ಮಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂಬಾಕು ಉತ್ಪನ್ನಗಳಿಗೆ ವ್ಯಸನಿಗಳಾಗುತ್ತಿದ್ದು, ನಾವೆಲ್ಲಾ ಎಚ್ಚೆತ್ತು ನಮ್ಮಮಕ್ಕಳನ್ನು ರಕ್ಷಿಸಬೇಕಿದೆ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆ ದಂತ ವೈದ್ಯರಾದ ಡಾ.ಭಾಗ್ಯಲಕ್ಷ್ಮಿ ಅವರು ಬಾಯಿ ಮತ್ತು ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಉಚಿತ ದಂತ ಪರೀಕ್ಷೆ ಮತ್ತು ಚಿಕಿತ್ಸೆ ನೀಡಿದರು.

ಮುಡುಗೋಡು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ಆರ್.ಪ್ರಸನ್ನ, ವಕೀಲ ಪಿ.ಬಿ.ವಿಶ್ವನಾಥ್, ತಾಲೂಕು ಆರೋಗ್ಯ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶಿವಪ್ಪ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.1ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಮುಡಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್ ಅರ್. ಉದ್ಘಾಟಿಸಿದರು. ತಾ.ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಮುಡಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸನ್ನ ಕೆ.ಆರ್.ಮತ್ತಿತರರು ಇದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು