ನಿರ್ಮಲ ಮನಸ್ಸಿನಿಂದ ಜ್ಞಾನಸಿದ್ಧಿ ಗಳಿಸಲು ಸಾಧ್ಯ

KannadaprabhaNewsNetwork |  
Published : Jun 02, 2024, 01:46 AM IST
ಫೋಟೋ: 1 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಶ್ರೀ ಅಭಯ ಶನೇಶ್ವರ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಕ್ತರು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ. ಡಿ. ಎಲ್. ವೀರಬ್ರಹ್ಮಚಾರ್ ಗುರೂಜಿರವರ ಅಯೋಜಿಸಿದ್ದ 52 ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಹೊಸಕೋಟೆ: ನಿರ್ಮಲ ಮನಸ್ಸಿನಿಂದ ಪರಮಾತ್ಮನ ಮೊರೆ ಹೊಗುವುದರಿಂದ ಮನುಷ್ಯ ಜೀವನದಲ್ಲಿ ಸಾರ್ಥಕತೆ ಪಡೆಯುವುದರ ಜೊತೆಗೆ ಜ್ಞಾನ ಸಿದ್ಧಿ ಗಳಿಸಲು ಸಾಧ್ಯ ಎಂದು ಶ್ರೀಕ್ಷೇತ್ರದ ಸಂಸ್ಥಾಪಕರೂ ಅರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿ ಹೇಳಿದರು.

ಹೊಸಕೋಟೆ: ನಿರ್ಮಲ ಮನಸ್ಸಿನಿಂದ ಪರಮಾತ್ಮನ ಮೊರೆ ಹೊಗುವುದರಿಂದ ಮನುಷ್ಯ ಜೀವನದಲ್ಲಿ ಸಾರ್ಥಕತೆ ಪಡೆಯುವುದರ ಜೊತೆಗೆ ಜ್ಞಾನ ಸಿದ್ಧಿ ಗಳಿಸಲು ಸಾಧ್ಯ ಎಂದು ಶ್ರೀಕ್ಷೇತ್ರದ ಸಂಸ್ಥಾಪಕರೂ ಅರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿ ಹೇಳಿದರು.

ತಾಲೂಕಿನ ದೊಡ್ಡನಲ್ಲೂರಹಳ್ಳಿಯ ಶ್ರೀ ಅಭಯ ಶನೇಶ್ವರ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಕ್ತರು ಏರ್ಪಡಿಸಿದ್ದ 52ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೃಢ ಭಕ್ತಿಯಿಲ್ಲದೆ ಎಷ್ಟೇ ಹಣ ಖರ್ಚು ಮಾಡಿದರೂ ಪ್ರಯೋಜನವಿಲ್ಲ. ಭಗವಂತನು ಸರ್ವಾಂತರಯಾಮಿ ಸಕಲ ಚರಚರಾ ವಸ್ತುಗಳಲ್ಲೂ ಅಡಕವಾಗಿರುತ್ತಾನೆ. ಹಣದಿಂದ ಜ್ಞಾನ ಪಡೆಯಲು ಸಾಧ್ಯವಿಲ್ಲ, ಭಕ್ತಿ ಮಾರ್ಗದಿಂದ ಸಕಲ ಶಕ್ತಿಯನ್ನು ಪಡೆಯಲು ಶುದ್ಧ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಅತ್ಯವಶ್ಯಕ ಎಂದರು.

ದೇವರ ಸೃಷ್ಟಿಯಲ್ಲಿ ಮನುಷ್ಯನು ಒಂದು ಪ್ರಾಣಿ ಸಂತತಿಗೆ ಸೇರಿದ್ದಾನೆ. ಮನುಷ್ಯ ಕಾಣದ ಶಕ್ತಿಗೆ ಹೆದರುತ್ತಾ ಭಕ್ತಿ ಭಾವದೊಂದಿಗೆ ಪ್ರೀತಿ. ವಿಶ್ವಾಸ. ಮಮಕಾರಗಳನ್ನು ಬೆಳೆಸಿಕೊಂಡಿದ್ದಾನೆ. ದೇವರನ್ನು ನಾವು ಹೊರಗಿನಿಂದ ನೋಡುತ್ತೇವೆ, ದೇವರು ನಮ್ಮೊಳಗಿನಿಂದ ನಮ್ಮನ್ನು ಕಾಣುತ್ತಾನೆ. ಆ ಕಾಣದ ಶಕ್ತಿಯೇ ದೇವರು ಎಂದರು.

ಹಿಂದೂ ಸಂಪ್ರದಾಯದಂತೆ ರವಿಸುತ ಸೇವಾ ಟ್ರಸ್ಟ್‌ ವತಿಯಿಂದ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ನೂರಾರು ಭಕ್ತರ ಸಮೂಹ ಸೇರಿ ಗುರೂಜಿಗಳ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಕೃಷ್ಣಾರೆಡ್ಡಿ, ಗ್ರಾಪಂ ಸದಸ್ಯ ಬೂದಿಗೆರೆ ಕೋಟಿ ನಾರಾಯಣಸ್ವಾಮಿ, ಲಕ್ಕೊಂಡಹಳ್ಳಿ ಸಿ. ನಾಗೇಶ್, ಚಿಕ್ಕಬಳ್ಳಾಪುರ ಅಭಿಷೇಕ್, ರವಿಸುತ ಸೇವಾ ಟ್ರಸ್ಟ್‌ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.ಫೋಟೋ: 1 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಶ್ರೀ ಅಭಯ ಶನೇಶ್ವರಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಕ್ತರು ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ.ಡಿ.ಎಲ್.ವೀರಬ್ರಹ್ಮಚಾರ್ ಗುರೂಜಿಯವರಿಗೆ 52ನೇ ಹುಟ್ಟುಹಬ್ಬ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ