ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಂಸ್ಕೃತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಕೊಡವ ಸಮಾಜಗಳ ಮೇಲಿದೆ. ಎಲ್ಲ ಕೊಡವ ಸಮಾಜಗಳು ಆ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.ಇಲ್ಲಿನ ಕೊಡವ ಸಮಾಜದ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡಗಿನ ಸಂಸ್ಕೃತಿ ವಿಶಿಷ್ಟವಾದುದು. ಕೊಡವ ಸಮಾಜದ ಪದಾಧಿಕಾರಿಗಳು 18 ಕೊಡವ ಭಾಷಿಕ ಜನರನ್ನು ಒಗ್ಗೂಡಿಸಿ ಜೊತೆಯಲ್ಲಿ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದರು.ಕೊಡವ ಸಮಾಜದ ಬೆಳ್ಳಿನಮ್ಮೆ ಅಂಗವಾಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಸ್ಮರಣ ಸಂಚಿಕೆಯ ಸಂಚಾಲಕ ಮುಕ್ಕಾಟಿರ ವಿನಯ್, ಸಂಚಿಕೆಯಲ್ಲಿ ಇರುವ ಮಾಹಿತಿಯ ಬಗ್ಗೆ ಬೆಳಕು ಚೆಲ್ಲಿದರು.ಈ ಸಂದರ್ಭ ಕೊಡವ ಸಮಾಜದ ಏಳಿಗೆಗೆ ದುಡಿದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾಜ ಬಾಂಧವರಿಗಾಗಿ ನಡೆದ ಉಮ್ಮತ್ತಾಟ್ ಸ್ಪರ್ಧೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಲಮ್ಮ ನಾಣಯ್ಯ, ಬೊಳಕಾಟ್ ಸ್ಪರ್ಧೆಯನ್ನು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋಲಾಟ ಸ್ಪರ್ಧೆಯನ್ನು ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚೆಂಗಪ್ಪ, ಕತ್ತಿಯಾಟ್ ಹಾಗೂ ಪರೆಯಕಳಿ ಸ್ಪರ್ಧೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ವಾಲಗತಾಟ್ ಮತ್ತು ಕಪ್ಪೆಯಾಟ್ ಸ್ಪರ್ಧೆಯನ್ನು ಬಲಂಬೇರಿಯ ಸಮಾಜ ಸೇವಕ ಬೊಳ್ಳಚೆಟ್ಟೀರ ಎಂ. ಸುರೇಶ್ ಉದ್ಘಾಟಿಸಿದರು.ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಪಾಲೂರಿನ ಸಮಾಜ ಸೇವಕ ಬೊಳ್ಳಿಯಂಡ ಪಿ. ಹರೀಶ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ಪೇರೂರಿನ ಕೊಡವ ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ನೆರವೇರಿಸಿದರು. ಬಳಿಕ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಕರವಂಡ ಪಿ. ಲವ.ನಾಣಯ್ಯ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹಕಾರ್ಯದರ್ಶಿ ಮಾಚೆಟ್ಟಿರ ಕುಸು ಕುಶಾಲಪ್ಪ, ನಿರ್ದೇಶಕರಾದ ಚೇನಂಡ ಗಿರೀಶ್ ಪೂನಚ್ಚ, ಬೊಳಿಯಾಡಿರ ಸಂತು ಸುಬ್ರಮಣಿ, ಬೊಪ್ಪೇರ ಜಯ ಉತ್ತಪ್ಪ, ಬದಂಜೆಟ್ಟಿರ ಬಿ. ದೇವಯ್ಯ, ಚೌರೀರ ಜಿ ಅಯ್ಯಪ್ಪ, ಕುಡಿಯೊಳಂದ ಬಿ. ಬೋಪಣ್ಣ, ಕುಟ್ಟoಜೆಟ್ಟಿರ ಶ್ಯಾಮ್ ಬೋಪಣ್ಣ, ನಾಯಕಂಡ ಜೂಬಿ ತಿಮ್ಮಯ್ಯ, ನಾಯಕಂಡ ಟಿ. ಮುತ್ತಪ್ಪ, ಬಾಳೆಯಡ ನಿಶಾ ಮೇದಪ್ಪ, ಅರೆಯಡ ಸರಸು ಚರ್ಮಣ್ಣ, ಕೋಟೆರ ಜಾನ್ಸಿ ಮಂದಪ್ಪ, ಕಲಿಯಂಡ ಗೀತಾ ಗಿರೀಶ್, ಬೊಟ್ಟೋಳಂಡ ಗಿರೀಶ್ ಮಾದಪ್ಪ, ಶಿವಚಾಳಿಯoಡ ಕಿಶೋರ್ ಬೋಪಣ್ಣ, ಬಿದ್ದಾಟಂಡ ಸಂಪತ್ ಸೋಮಯ್ಯ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ವಿವಿಧ ಕೊಡವ ಸಮಾಜಗಳ ಹಾಲಿ, ಮಾಜಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.(ಹೋಗಲೇಬೇಕು) ನಾಪೋಕ್ಲು ಕೊಡವ ಸಮಾಜ ಬೆಳ್ಳಿಹಬ್ಬ ಸಂಭ್ರಮಾಚರಣೆ
ಮೆರವಣಿಗೆ, ಸಭಾ ಕಾರ್ಯಕ್ರಮ:ಒಂದೆಡೆ ಕಾಪಾಳಕಳಿ, ಮತ್ತೊಂದೆಡೆ ಅಜ್ಜಪ್ಪ ತೆರೆ, ಜೊತೆಯಲ್ಲಿ ದುಡಿಕೊಟ್ಟು ವಾದ್ಯ, ಕೊಡವ ಸಾಂಪ್ರದಾಯಿಕ ಕಲೆಗಳು, ಇದರ ಜೊತೆ ಜೊತೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಸಾಗಿದ ಕೊಡವ ಯುವಕ ಯುವತಿಯರು... ಇಲ್ಲಿನ ಕೊಡವ ಸಮಾಜದ ಬೆಳ್ಳಿ ಹಬ್ಬದ ಆಚರಣೆ ಅಂಗವಾಗಿ ಭಾನುವಾರ ಮಾರುಕಟ್ಟೆ ಆವರಣದಿಂದ ಆರಂಭಗೊಂಡ ಮೆರವಣಿಗೆ ಜನರ ಗಮನ ಸೆಳೆಯಿತು.
ಸುಮಾರು ಒಂದು ಗಂಟೆ ಸಾಗಿದ ಮೆರವಣಿಗೆಯಲ್ಲಿ ಕೊಡವ ಸಂಸ್ಕೃತಿಯ ವೈವಿಧ್ಯಮಯ ಕಲೆಗಳು ಅನಾವರಣಗೊಂಡವು. ಕೊಡವರು ವಾಲಗಕ್ಕೆ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ನರ್ತಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಸಂಭ್ರಮಿಸಿದರು.ಸ್ಥಳೀಯ ಮಾರುಕಟ್ಟೆ ಆವರಣದ ಬಳಿ ಕೊಡವ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊ೦ಜಾ೦ಡ ಎ. ಗಣಪತಿ ಗಾಳಿಗೆ ಗುಂಡು ಹೊಡೆಯುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಕೊಡವ ಸಮಾಜದಲ್ಲಿ ಸಮಾಗಮಗೊಂಡ ಮೆರವಣಿಗೆ ಸಭಾ ಕಾರ್ಯಕ್ರಮಕ್ಕೆ ನಾಂದಿ ಹಾಡಿತು.
ಸಭಾ ಕಾರ್ಯಕ್ರಮ:ಕೊಡವ ಸಮಾಜದಲ್ಲಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊ೦ಜಾ೦ಡ ಎ. ಗಣಪತಿ ಅವರನ್ನು ಕೊಡವ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಕರವಂಡ ಪಿ.ನಾಣಯ್ಯ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹಕಾರ್ಯದರ್ಶಿ ಮಾಚೆಟ್ಟಿರ ಕುಶಾಲಪ್ಪ ಉಪಸ್ಥಿತರಿದ್ದರು.ಬಟ್ಟಿರ ಡಯಾನ ಪ್ರಾರ್ಥನೆಗೈದರು. ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತಿಸಿದರು. ಬಾಳೆಯಡ ದಿವ್ಯಮಂದಪ್ಪ ಹಾಗೂ ಬೊಟ್ಟೋಳಂಡ ವಿನಿತ ಮಾದಪ್ಪ ಕಾರ್ಯಕ್ರಮ ನಿರೂಪಿಸಿದರು. ಮಾಚೆಟ್ಟಿರ ಕುಶು ಕುಶಾಲಪ್ಪ ವಂದಿಸಿದರು.
ಬಳಿಕ ಬೆಳ್ಳಿ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.