ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟೇಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಗೀತೆಗೊಂದು ಗಿಡ ವಿಶ್ವ ಪರಿಸರ ದಿನಾಚರಣೆ ಹಾಗೂ ಸಖಿ ಸ್ವಾವಲಂಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವಂತೆಯೇ ಪ್ರತಿ ಸಂಸ್ಥೆಗಳಿಗೂ ಸಹಕಾರ ನೀಡಬೇಕಾಗಿರುವುದು ಸಾರ್ವಜನಿಕರ ಕರ್ತವ್ಯವೂ ಆಗಿರುತ್ತದೆ. ಜೊತೆಗೂಡಿ ಕೆಲಸ ಮಾಡಿದಾಗಲೇ ಕಾರ್ಯಕ್ರಮಗಳು ಯಶಸ್ವಿಯಾಗುವುದು ಎಂದರು.ಪ್ರಕೃತಿಯೊಂದಿಗಿನ ಮಾನವನ ಸಂಬಂಧ ಅವಿನಾಭಾವ, ಪ್ರತಿ ಗಿಡವೂ ತನ್ನದೇ ಆದ ಮಹತ್ವವನ್ನು ಪಡೆದಿರುತ್ತದೆ, ಹಸಿರನ್ನು ಉಳಿಸಿ ಬೆಳೆಸುವಂತೆ ಮಕ್ಕಳಿಗೆ ಹಿರಿಯರು ಕಲಿಸಲೇ ಬೇಕಿದೆ. ಒಬ್ಬ ಧೂಮ್ರಪಾನಿ ಬೀಡಿ- ಸಿಗರೇಟು ಸೇದಿ ಪರಿಸರ ನಾಶ ಮಾಡುವುದಲ್ಲದೇ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ. ಇಂತಹ ಪರಿಸರ ವಿನಾಶಕಾರಿ ಕೃತ್ಯಗಳಿಂದ ಮಕ್ಕಳು ದೂರವಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಬಳಿಕ 2023- 24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಾಮಕೃಷ್ಣನಗರ 58ನೇ ವಾರ್ಡಿನ 52 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಹಾಡು ಹೇಳಿದ ಪರಿಸರ ಪ್ರೇಮಿಗಳಿಗೆ ಗಿಡ ನೀಡಲಾಯಿತು. ಸಖಿ ಸ್ವಾವಲಂಬಿ ಯೋಜನೆಯಡಿ ಮಾಂಟೆಸರಿ ಶಿಕ್ಷಕರ ತರಬೇತಿ ಪಡೆದ 15 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.