ಕನ್ನಡಪ್ರಭ ವಾರ್ತೆ ಹಳೇಬೀಡುಆಧುನಿಕ ಸಮಾಜದಲ್ಲಿ ವಿದ್ಯಾರ್ಥಿಗಳ ದೃಷ್ಟಿಕೋನ ಬದಲಿಸು ಸಹಕರಿಸುವ, ಪರಿವರ್ತನೆಗೆ ಸಹಕಾರಿಯಾದ ವಿಭಿನ್ನ ಚಟುವಟಿಕೆಗಳನ್ನು ಅನುಸರಿಸುವ ಕಾರ್ಯಕ್ರಮವೇ ಸಹಪಠ್ಯ ಚಟುವಟಿಕೆಗಳು ಹಾಗೂ ಸ್ವಾಗತ ಕಾರ್ಯಕ್ರಮ ಎಂದು ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು. ಹಳೇಬೀಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫- ೨೬ನೇ ಶೈಕ್ಷಣಿಕ ಸಹಪಠ್ಯಚಟುವಟಿಕೆ, ಪ್ರಥಮ ಬಿಎ, ಬಿಕಾಂ, ಹಾಗೂ ಎಮ್‌ಕಾಂ ವಿದ್ಯಾರ್ಥಿಗಳಿಗೆ ಸ್ವಾಗತ, ಸ್ವಚ್ಛತಾ ಹಾಗೂ ಗಿಡ ನೆಡುವ, ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪಕ ದಿನಚರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಹಳೇಬೀಡಿನ ಪ್ರಥಮ ದರ್ಜೆ ಕಾಲೇಜು ಎಂದರೆ ಒಂದು ಗುರುಕುಲ ಮಾದರಿ ಇರುವ ಕಾಲೇಜು ಆಗಿದೆ. ಹಾಸನ ಜಿಲ್ಲೆಗೆ ಒಳ್ಳೆಯ ಫಲಿತಾಂಶ, ಅಧಿಕ ಸಂಖೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಪ್ರಥಮ ಸ್ಥಾನದಲಿ ಇದ್ದು, ನನ್ನ ಕ್ಷೇತ್ರದ ಹೆಮ್ಮೆಯ ವಿಚಾರ. ಇದಕ್ಕೆ ಕಾರಣರಾದ ಪ್ರಾಧ್ಯಾಪಕ ವೃಂದದವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ದೇಶದ ಪ್ರಧಾನಿ ೭೫ನೇ ವರ್ಷದ ಹುಟ್ಟು ಹಬ್ಬ ಅಂಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಗುರುಕುಲದ ಆವರಣದಲ್ಲಿ ಒಂದೊಂದು ಗಿಡಗಳನ್ನು ತಮ್ಮ ತಾಯಿಯ ನೆನಪಿನಲ್ಲಿ ಗಿಡವನ್ನು ಹಾಕಿ ಬೆಳೆಸಿದರೆ ದೊಡ್ಡ ಹೆಮ್ಮರವಾಗುತ್ತದೆ. ಆಗ ದೇಶದ ವಾತಾವರಣ ಪರಿವರ್ತನೆಯಾಗುತ್ತದೆ. ದೇಶ ಕಟ್ಟುವುದು ನಿಮ್ಮ ಕರ್ತವ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ನಿಮ್ಮ ಪಾತ್ರ ದೊಡ್ಡ ಪಾತ್ರವಾಗಿದೆ. ಏಕೆಂದರೆ ಎರಡು ಹಂತದಿಂದ ನೀವು ಮುಂದೆ ಬಂದಿದ್ದಾರೆ (ಎಸ್.ಎಸ್ ಎಲ್.ಸಿ- ಪಿ.ಯು.ಸಿ) ನಿಮಗೆ ನಿಮ್ಮಗಳ ಬಗ್ಗೆ ಅರ್ಥ ಮಾಡಿಕೊಂಡು ವಿದ್ಯಾಭ್ಯಾಸಕ್ಕೆ ಹೆಚ್ಚು ಗಮನ ನೀಡಿದರೆ ಒಳ್ಳೆಯ ಸ್ಥಾನ. ಇಂದಿನ ದಿನದಲ್ಲಿ ಸ್ಪರ್ಧಾತ್ಮಕ ಇರುವುದರಿಂದ ನೀವುಗಳು ಓದುವ ಕಡೆ ಗಮನ ಹೆಚ್ಚು ನೀಡಿದರೆ ನಿಮ್ಮ ಜೀವನ ಸಾರ್ಥಕತೆ ವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪ್ರಾಂಶುಪಾಲ ಡಾ. ಬಿ.ಕೆ. ಶ್ರೀನಿವಾಸ್ ಮಾತನಾಡುತ್ತಾ, ನಮ್ಮ ಕಾಲೇಜಿನಲ್ಲಿ ಎಲ್ಲಾ ಪ್ರಾಧ್ಯಾಪಕರು ಸಮಾನತೆಯಿಂದ ಪಾಠ-ಪ್ರವಚನವನ್ನು ಮಕ್ಕಳಿಗೆ ಅರ್ಥವಾಗುವ ರೀತಿ ನೀಡುತ್ತಾರೆ. ಈ ಕಾಲೇಜನ್ನು ಬೆಳೆಸಲು ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಕಾರ್ಯಧ್ಯಕ್ಷರು,ಸಧಸ್ಯರು ನಮ್ಮೊಂದಿಗೆ ಸದಾ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಕಾರ್ಯಧ್ಯಕ್ಷ ಚೇತನ್, ಅಭಿವೃದ್ಧಿ ಮಂಡಳಿ ಸಧಸ್ಯರು ಹಾಗೂ ಕಾಲೇಜಿನ ಭೂ-ದಾನಿಗಳು ಪ್ರೇಮಣ್ಣ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.