ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಸಮಾಜದ ಹೊಣೆ

KannadaprabhaNewsNetwork |  
Published : Jun 17, 2026, 01:30 AM IST
ಮಧುಗಿರಿಯ ಕನ್ನಿಕಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಆರ್ಯವೈಶ್ಯ ಅಧಿಕಾರಿಗಳು ಮತ್ತು ವೃತ್ತಿನಿರತರ ಸಂಘ ಆಪೋಶ  ಹಾಗೂ ಆರ್ಯ ವೈಶ್ಯ ಮಂಡಳಿ  ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಸ್‌ಎಸ್‌ಎಸ್‌ಲಿ ,ಪಿಯುಸಿ,ಪದವಿ,ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಗಣ್ಯರು ಮಕ್ಕಳನ್ನು ಸನ್ಮಾನಿಸಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಹೊಣೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಕಾರ್ಯದರ್ಶಿ ಬಿ.ಜಿ.ನಂದಕುಮಾರ್ ತಿಳಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಹೊಣೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಕಾರ್ಯದರ್ಶಿ ಬಿ.ಜಿ.ನಂದಕುಮಾರ್ ತಿಳಿಸಿದರು.

ಇಲ್ಲಿನ ಕನ್ನಿಕಾಪರಮೇಶ್ವರಿ ದೇಗುಲದ ಆವರಣದಲ್ಲಿ ಆರ್ಯ ವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘ , ಆರ್ಯ ವೈಶ್ಯ ಮಂಡಳಿ ಹಾಗೂ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಎಸ್ಎಸ್ಎಲ್ಸಿ ,ಪಿಯುಸಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ 2026ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕೇವಲ ಜ್ಞಾನ ಸಂಪಾದನೆಯಲ್ಲ, ಇತರರೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಸುತ್ತದೆ, ಅಂಕಗಳಿಕೆ ಶಿಕ್ಷಣದ ಗುರಿಯಾಗಬಾರದು. ಉತ್ತಮ ಸಂಸ್ಕಾರ, ಸಮಾಜಮುಖಿ ಚಿಂತನೆ ಬೆಳಸಿಕೊಳ್ಳಬೇಕು ಎಂದರು. ಡಾ.ಕೆ.ಎಸ್‌.ರಾಮಕೃಷ್ಣ ಮಾತನಾಡಿ, ಸ್ವ ಅನಭವವನ್ನು ಹಂಚಿಕೊಂಡ ಕಲಿಯುವುದು ಬೇಕಾದಷ್ಟಿದೆ. ತಾಳ್ಮೆ, ಸಹಕಾರ, ಸಹಾನೂಭೂತಿಯಿಂದ ಮಾತ್ರ ವಿದ್ಯೆ ವರ್ಧಿಸುತ್ತದೆ. ಪ್ರಸ್ತುತ ಕಂಪ್ಯೂಟರ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಬಲಿಯಾಗದೇ ತಮ್ಮ ಆಸಕ್ತಿಯನ್ನು ಓದುವ ಕಡೆ ಗಮನ ಹರಿಸಬೇಕು ಎಂದರು.

ಸಮಾರಂಭದಲ್ಲಿ ಆರ್ಯವೈಶ್ಯ ಸಮುದಾಯದ ತಾಲೂಕಿನಾದ್ಯಂತ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ಪತ್ರ,ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸಮೂರ್ತಿ, ಕೆ.ವಿ.ಮಂಜುನಾಥಗುಪ್ತ, ಆಪೋಶ ಕೆ.ಎಂ.ಕೃಷ್ಣಮೂರ್ತಿ, ಕಲಾವಿದರ ಸಂಘದ ಡಾ.ಕೆ.ಸಣ್ಣಹೊನ್ನಯ್ಯ, ಕೆ.ಪ್ರಸಾದ್,ರಾಮಕೃಷ್ಣಶೆಟ್ಟಿ, ಜಿ.ಎಸ್‌.ರಂಗನಾಥ್, ಭೀಮರಾಜು,ಸುದರ್ಶನ ಬಾಬು, ಗಿರೀಶ್, ಅನೂಪ್,ವೆಂಕಟೇಶ್ ಬಾಬು,ಗಿರಿಜಾ ಅಶ್ವತ್ಥನಾರಾಯಣ್,ಸುಶೀಲಮ್ಮ,ಸುಮಾ ಸುದರ್ಶನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಮರು ಪರೀಕ್ಷೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಡಾ.ಕುಮಾರ
ಮತದಾರರ ಪಟ್ಟಿ ನಿಖರವಾಗಿ ಪರಿಷ್ಕರಿಸಿ: ಪಿ.ರವಿಕುಮಾರ್