ಕಿತ್ತೂರ ರಾಣಿ ಚೆನ್ನಮ್ಮನ ವಿಜಯೋತ್ಸವ/ಜಯಂತ್ಯುತ್ಸವ ತಾಲೂಕು ಮಟ್ಟದ ಜಾಗೃತ ಸಮಾವೇಶಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮನ ವಿಜಯೋತ್ಸವ/ಜಯಂತ್ಯುತ್ಸವ ತಾಲೂಕು ಮಟ್ಟದ ಜಾಗೃತ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಂಚಮಸಾಲಿ ಸಮಾಜದ ಶ್ರೇಯೋಭೀವೃದ್ದಿಗಾಗಿ ಕಳೆದ ಹತ್ತಾರು ದಶಕಗಳಿಂದ ಸೇವೆ ಸಲ್ಲಿಸಿದ ಅರಟಾಳ ರುದ್ರಗೌಡರು, ಕಂಬಿಳಿ ಸಿದ್ದಪ್ಪನಂತಹ ಅನೇಕ ಮಹನೀಯರ ಬಗ್ಗೆ ತಿಳಿದು ಸ್ಮರಿಸುವುದು ಮುಖ್ಯವಾಗುತ್ತದೆ. ಅಖಿಲ ಭಾರತ ವೀರಶೈವ ಮಹಾಸಭಾದ ನೇತೃತ್ವವಹಿಸಿಕೊಂಡು ಎಲ್ಲ ಸಮಾಜದ ನಾಯಕರನ್ನು, ಎಲ್ಲ ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜಕಟ್ಟುವ ಕೆಲಸ ಮಾಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ವೀರಶೈವ ಲಿಂಗಾಯತ ಒಂದು ನಾವೆಲ್ಲ ಬಂಧು ಎಂಬ ಭಾವನೆಯೊಂದಿಗೆ ಸಮಾಜ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಯಾವುದೇ ಸಮಾಜ ನಿರುದ್ಯೋಗದಿಂದ ಉದ್ಧಾರವಾಗದು. ಈ ನಿಟ್ಟಿನಲ್ಲಿ ಸಮಾಜದ ವಿದ್ಯಾವಂತ ನಿರುದ್ಯೋಗಿಳನ್ನು ಉದ್ಯೋಗಶೀಲರನ್ನಾಗಿಸಬೇಕು. ಅನ್ನದಾತರ ಬದುಕು ಸಂಕಷ್ಟದಲ್ಲಿದೆ. ಸಮಾಜದ ಯುವಕರನ್ನು ದುಶ್ಚಟದಿಂದ ಹೊರ ತರುವ ಪ್ರಯತ್ನ ಸಮಾಜದ್ದಾಗಲಿ. ಕೃಷಿ ಸೇರಿ ಎಲ್ಲ ರಂಗದಲ್ಲಿ ಸಮಾಜ ಬಾಂಧವರು ತೊಡಗಿಸಿಕೊಳ್ಳಬೇಕು. ಸಮಾಜದ ಶ್ರೇಯೋಭೀವೃದ್ದಿ, ಸಂಘಟನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದರು.ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯೊಂದಿಗೆ ಬದುಕುವುದು ಸಮಾಜದ ಧ್ಯೇಯವಾಗಬೇಕು. ನಮ್ಮೊಳಗಿನ ಬೇದಭಾವ ಮರೆತು ಪರಸ್ಫರ ಅನ್ಯೋನ್ಯತೆ ಹಾಗೂ ಇತರ ಸಮಾಜದವರೊಂದಿಗೆ ಉತ್ತಮ ಬಾಂಧವ್ಯದಿಂದ ಬೆರೆತು ಮಾದರಿಯಾಗಿ ಬದುಕೋಣ. ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಶಂಕರ ರಾಗಿ ಮಾತನಾಡಿದರು.
ಶಾಸಕ ಡಾ. ಚಂದ್ರು ಲಮಾಣಿ, ವಿಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಆನಂದ ಗಡ್ಡದೇವರಮಠ ಮಾತನಾಡಿದರು. ಶಿರಹಟ್ಟಿ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ತುಳಿ, ವಿಜಯಕುಮಾರ ಗಡ್ಡಿ, ಚಂಬಣ್ಣ ಬಾಳಿಕಾಯಿ, ಅಯ್ಯಪ್ಪ ಅಂಗಡಿ, ಶಾರಕ್ಕ ಮಹಾಂತಶೆಟ್ಟರ, ಬಸಮ್ಮ ಬೆಲಹುಣಸಿ, ಲೋಹಿತ ನೆಲವಿಗಿ, ಸಣ್ಣಿರಪ್ಪ ಹಳ್ಳೆಪ್ಪನವರ, ವೀರಭದ್ರಯ್ಯ ಹಿರೇಮಠ, ಜಮೀರ ಸೂರಣಗಿ, ಶೇಖಣ್ಣ ಕಾಳೆ, ಶಿವಣ್ಣ ಲಮಾಣಿ, ಪಿ.ಬಿ. ಕರಾಟೆ, ನಿಂಗಪ್ಪ ಬನ್ನಿ, ಈಶ್ವರ ಗದಗ, ಈರಣ್ಣ ಬಡಿಗೇರ, ಬಸವರಾಜ ಬೆಟಗೇರಿ, ಕಿರಣ ನವಲೆ, ನಾರಾಯಣಸಾ ಪವಾರ, ತಿಮ್ಮರಡ್ಡಿ ಮರಡ್ಡಿ, ಗುಡ್ಡಪ್ಪ ಹಡಪದ, ಬಸವರಾಜ ಓದುನವರ ಸೇರಿ ವಿವಿಧ ಸಮಾಜದ ಅಧ್ಯಕ್ಷರು, ಹಿರಿಯರು ಉಪಸ್ಥಿತರಿದ್ದರು.