ಎರಡು ದಿನಗಳ ವರ್ಲ್ಡ್ ಕಾನ್ಫರೆನ್ಸ್ ಆನ್ ಕಾಗ್ನಿಟಿವ್ ಕಂಪ್ಯೂಟಿಂಗ್ ಆ್ಯಂಡ್ ಜನರೇಟಿವ್ ಎಐ –WCCG 2026 ಅಂತಾರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಕಮಲಾ ಮತ್ತು ವೆಂಕಪ್ಪ ಎಂ. ಅಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ಬೆಂಗಳೂರು ವಿಭಾಗ ಹಾಗೂ ಐಇಇಇ ನಾರ್ತ್ ಕರ್ನಾಟಕ ಸಬ್‌ಸೆಕ್ಷನ್ ಸಹಯೋಗದೊಂದಿಗೆ ನ. 20 ಮತ್ತು 21ರಂದು ಆಯೋಜಿಸಲಾಗಿದ್ದ ಎರಡು ದಿನಗಳ ವರ್ಲ್ಡ್ ಕಾನ್ಫರೆನ್ಸ್ ಆನ್ ಕಾಗ್ನಿಟಿವ್ ಕಂಪ್ಯೂಟಿಂಗ್ ಆ್ಯಂಡ್ ಜನರೇಟಿವ್ ಎಐ –WCCG 2026 ಅಂತಾರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ಜರುಗಿತು.
ಕೃತಕ ಬುದ್ಧಿಮತ್ತೆ, ಜನರೇಟಿವ್ ಎಐ, ಕಾಗ್ನಿಟಿವ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಸೇರಿದಂತೆ ನವೀನ ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆ ಕುರಿತು ಥೈಲ್ಯಾಂಡ್‌ನ ಮುಬಾನ್ ಚೋಂಬುಯೆಂಗ್ ರಾಜಭಟ್ ವಿಶ್ವವಿದ್ಯಾಲಯದ ಕೈಗಾರಿಕಾ ತಂತ್ರಜ್ಞಾನ ವಿಭಾಗದ ಡಿಜಿಟಲ್ ಮೀಡಿಯಾ ಟೆಕ್ನಾಲಜಿ ವಿಭಾಗದ ಡಾ. ನರುಮೋಲ್ ಚುಮುಯಾಂಗ್ ಮಾತನಾಡಿದರು.
ಸಮ್ಮೇಳನವು ಜಾಗತಿಕ ಸಂಶೋಧನಾ ಸಮುದಾಯದ ಗಮನ ಸೆಳೆದಿದ್ದು, 12 ವಿವಿಧ ದೇಶಗಳು ಹಾಗೂ ಭಾರತದ 20 ರಾಜ್ಯಗಳಿಂದ 200ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಕೃತಕ ಬುದ್ಧಿಮತ್ತೆ, ಜನರೇಟಿವ್ ಎಐ, ಕಾಗ್ನಿಟಿವ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಸೇರಿದಂತೆ ನವೀನ ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆ ಹಾಗೂ ಬೆಳವಣಿಗೆಗಳ ಕುರಿತು ದೇಶ-ವಿದೇಶಗಳ ಸಂಶೋಧಕರು, ಪ್ರಾಧ್ಯಾಪಕರು, ಉದ್ಯಮ ತಜ್ಞರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಈ ಸಮ್ಮೇಳನದಲ್ಲಿ ಥೈಲ್ಯಾಂಡ್‌ನ ಮುಬಾನ್ ಚೋಂಬುಯೆಂಗ್ ರಾಜಭಟ್ ವಿಶ್ವವಿದ್ಯಾಲಯದ ಕೈಗಾರಿಕಾ ತಂತ್ರಜ್ಞಾನ ವಿಭಾಗದ ಡಿಜಿಟಲ್ ಮೀಡಿಯಾ ಟೆಕ್ನಾಲಜಿ ವಿಭಾಗದ ಡಾ. ನರುಮೋಲ್ ಚುಮುಯಾಂಗ್ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನದ ಕುರಿತು ಮಾತನಾಡಿದರು. ವಿದೇಶಿ ವಿಶ್ವವಿದ್ಯಾಲಯದ ಗಣ್ಯರು ಆಗಮಿಸಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸಮ್ಮೇಳನದಲ್ಲಿ ಐಇಇಇ ಬೆಂಗಳೂರು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿ ಚಟುವಟಿಕೆ ಸಮಿತಿಯ ಅಧ್ಯಕ್ಷ ಪ್ರೊ. ದೇವೇಂದ್ರ ಗೌಡ, ಐಇಇಇ ಬೆಂಗಳೂರು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎನ್‌ಕೆಎಸ್‌ಎಸ್ ಅಧ್ಯಕ್ಷೆ ಡಾ. ಸುಜಾತಾ ಎನ್. ಪಾಟೀಲ, ಅಮೇರಿಕಾದ ಜೆಪಿ ಮೋರ್ಗನ್ ಚೆಸ್ ಸಂಸ್ಥೆಯ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದ ತಜ್ಞ ರವಿಚಂದ್ರ ನಂಬೂರಿ, ಅಮೇಜಾನ್ ವೆಬ್ ಸೀರೀಸ್ ಸಂಸ್ಥೆಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ವಿನೀಲಾ ಗುಡಿಪಾಟಿ, ಹಿರಿಯ ಐಟಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ರಿಷಿರಾಜ್ ಕೊಹ್ಲಿ ಹಾಗೂ ಡೇಟಾ ಮತ್ತು ಅನಾಲಿಟಿಕ್ಸ್ ವಿಭಾಗದ ಲೀಡ್ ಪ್ರಾಡಕ್ಟ್ ಮ್ಯಾನೇಜರ್ ಆಕಾಂಕ್ಷಾ ಪೋಲೆಪಲ್ಲಿ ಅವರು ಮಾತನಾಡಿ ಉದ್ಯಮ ಕ್ಷೇತ್ರದ ಅನುಭವ, ತಂತ್ರಜ್ಞಾನದಲ್ಲಿನ ಹೊಸ ಬೆಳವಣಿಗೆಗಳು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ತಿಳಿಸಿದರು.
ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ತಾಂತ್ರಿಕ ಗೋಷ್ಠಿಗಳು, ಸಂಶೋಧನಾ ಪ್ರಬಂಧಗಳ ಮಂಡನೆ, ತಜ್ಞರ ಉಪನ್ಯಾಸಗಳು ಹಾಗೂ ಶೈಕ್ಷಣಿಕ ಸಂವಾದಗಳು ನಡೆದವು. ವಿವಿಧ ದೇಶಗಳು ಮತ್ತು ರಾಜ್ಯಗಳಿಂದ ಆಗಮಿಸಿದ ಸಂಶೋಧಕರ ಭಾಗವಹಿಸುವಿಕೆ ಸಮ್ಮೇಳನಕ್ಕೆ ಜಾಗತಿಕ ವೇದಿಕೆಯ ಸ್ವರೂಪ ನೀಡಿತು. ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಸಂಶೋಧನಾ ಅವಕಾಶಗಳು ಮತ್ತು ಶೈಕ್ಷಣಿಕ ಸಹಯೋಗಗಳನ್ನು ಬೆಳೆಸಿಕೊಳ್ಳಲು ಇದು ಉತ್ತಮ ವೇದಿಕೆಯಾಯಿತು.
ಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಡಾ. ಆರ್.ಎಂ. ಪಾಟೀಲ, ಡಾ. ಶ್ರೀನಿವಾಸ ಆರ್. ಹಾಗೂ ಡಾ. ಅರುಣ್ ಕುಮಾರ್ ಜೋಶಿ ಕಾರ್ಯನಿರ್ವಹಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಐಇಇಇನರುಲ್ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.