ಔರಾದ್: ನಾನು ಸಣ್ಣ ಜಾತಿಯವನು ಎನ್ನುವ ಕಾರಣಕ್ಕೆ ಅಮರೇಶ್ವರ ದೇವಸ್ಥಾನ ಕೆಲಸ ಮಾಡಲಿಕ್ಕೆ ಪದೇ ಪದೆ ಅಡ್ಡಿಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ್ ಅವರು ಕಣ್ಣಲ್ಲಿ ನೀರು ತಂದು ಗದ್ಗದಿತರಾಗಿ ನೋವು ತೋಡಿಕೊಂಡಿದ್ದಾರೆ.ಪಟ್ಟಣ ಪಂಚಾಯತ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಮರೇಶ್ವರ ದೇವಸ್ಥಾನದ ಮಹಾದ್ವಾರದ ಕಾಮಗಾರಿ ನೆನಗುದಿಗೆ ಬಿದ್ದಿರುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾನು ಲಂಬಾಣಿ ಸಣ್ಣ ಜಾತಿಯವನು ಅಂತ ಈ ಹಿಂದೆ ಎಂಪಿ ಬೇಕಂತಲೆ ತಮ್ಮ ಬೆಂಬಲಿಗರ ಮುಂದೆ ಲಂಬಾಣಿ ಕೈಯಿಂದ ಕಾಮಗಾರಿ ಮಾಡಿಸಬೇಡಿ ಅಂತ ಹೇಳಿ ಕೆಲಸ ಮಾಡಿಕೊಡದೆ ಇದ್ದುದ್ದರಿಂದಲೇ ವರ್ಷಗಳಿಂದ ನೆನಗುದಿಗೆ ಬಿದ್ದಿದೆ. ನಾನೇನು ಮಾಡಲಿ ಹೇಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಲ್ಲದೆ ಅಮರೇಶ್ವರ ಮಂಟಪದ ಕಾಮಗಾರಿಗೆ ಶಾಸಕರ ಅನುದಾನದ ಅಡಿಯಲ್ಲಿ ನಾನೇ ಮಾಡಿಸಿದ್ದೇನೆ. ಆದರೆ ಅದರ ಮೇಲೆ ನನ್ನ ಹೆಸರು ಬರೆದಿಲ್ಲ. ನನ್ನ ಜಾತಿಯನ್ನು ಹಿಡಿದು ಸಾಕಷ್ಟು ನೋವು ಕೊಟ್ಟಿದ್ದಾರೆ. ನಾನು ಶಾಸಕನಾಗಿ ಇದೆಲ್ಲ ಹೇಳಿಕೊಳ್ಳಬಾರದು ಅಂದಿದ್ದೇ ಇಷ್ಟು ದಿನ ಸುಮ್ಮನಿದ್ದೆ ಎಂದರು.ಜಾತಿ, ಮತ ಪಂಗಡಗಳೆನ್ನದೆ ಸರ್ವರನ್ನೂ ಪೋಷಿಸುವ ಆರಾಧ್ಯ ದೈವ ಉದ್ಭವಲಿಂಗ ಅಮರೇಶ್ವರರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿದ್ದೆನೆ. ನನ್ನ ಆರಾಧ್ಯ ದೇವರ ಸೇವೆ ಮಾಡಲು ನನಗೆ ಹೀಗೆಲ್ಲ ಅಡ್ಡಗಾಲು ಹಾಕಿದ್ದಾರೆ. ಇಂದೇ ಎಲ್ಲರೂ ಹೇಳಲಿ ನಾನು ನಾಳೇನೆ ಕೆಲಸ ಆರಂಭಿಸುತ್ತೇನೆ ಎಂದು ಚವ್ಹಾಣ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.ಈ ಸಂದರ್ಭ ಮಧ್ಯಪ್ರವೇಶಿಸಿ ಮಾತನಾಡಿದ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಘೂಳೆ, ನಾವು 1.2 ಕೋಟಿ ರು. ವೆಚ್ಚದ ಮಹಾದ್ವಾರ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಆಗಿನ ಜಿಲ್ಲಾಧಿಕಾರಿ ಬಳಿ ಹೋಗಿ ಮನವಿಸಿದ್ದಾಗ ಡಿಸಿ ಸಾಹೆಬ್ರು ಸ್ಪಷ್ಟವಾಗಿ ಹೇಳಿದ್ರು ಕೇಂದ್ರ ಸಚಿವ ಖೂಬಾ ಅವರು ಕೆಲಸ ಮಾಡಬೇಡ ಅಂತಾರೆ, ಶಾಸಕ ಚವ್ಹಾಣ್ ಮಾಡು ಅಂತಾರೆ ನಾವೇನ್ ಮಾಡಲಿಕ್ಕಾಗುತ್ತೆ ಅಂತ ಕೈ ತೊಳೆದುಕೊಂಡರು. ಈಗ ಇದೇ ಕಾಮಗಾರಿಗೆ ಎರಡು ಕೋಟಿ ರು.ಗಳ ಬೇಡಿಕೆ ಇಟ್ಟು ನೆನಗುದಿಗೆ ದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಔರಾದ್ ಮಾಸ್ಟರ್ ಪ್ಲ್ಯಾನ್ ರೆಡಿಯಿದೆ: