ಕನ್ನಡಪ್ರಭ ವಾರ್ತೆ ಕುಮಟಾ
ಚಂದಾವರ ಸನಿಹದ ತೋರಗೋಡಿನಲ್ಲಿ ಶಿರಸಿ ವಸುಂಧರಾ ಸಮೂಹ ಸೇವಾ ಸಂಸ್ಥೆಯ ಅಡಿಯಲ್ಲಿ ಪುರೋಹಿತ ವಿಶ್ವೇಶ್ವರ ಭಟ್ಟರಿಂದ ನೀಡಲ್ಪಟ್ಟ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಗೋಪಾಲಕೃಷ್ಣ ಭಾಗವತ ಕಡತೋಕಾ, ಕಲೆ ಮತ್ತು ಕಲಾವಿದರು ದೇಶದ ಆಸ್ತಿ. ರಾಷ್ಟ್ರವು ಆರ್ಥಿಕವಾಗಿ ಮುಂದುವರಿದಷ್ಟೇ ಸಾಂಸ್ಕೃತಿಕವಾಗಿ ಶ್ರೀಮಂತವಾಗುವುದು ಬಹು ಮುಖ್ಯ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಜಿ. ಹೆಗಡೆ, ಯುವಜನತೆ ಸಾಂಸ್ಕೃತಿಕ ಕ್ಷೇತ್ರದಿಂದ ದೂರ ಇರುವುದು ವಿಷಾದದ ಸಂಗತಿ. ಯುವಜನತೆಯ ಮಾನಸಿಕ ಸಮಸ್ಯೆ ಮತ್ತು ಉನ್ನತಿಗೆ ಸಾಂಸ್ಕೃತಿಕ ಕ್ಷೇತ್ರ ಅತ್ಯುತ್ತಮ. ಈ ದಿಸೆಯಲ್ಲಿ ಈಶ್ವರ ಹೆಬ್ಬಾರರ ಕೊಡುಗೆ ಗಣನೀಯ ಎಂದರು.
ಯಕ್ಷಗಾನ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ವಸಂತ ಭಟ್ಟ, ಗ್ರಾಪಂ ಸದಸ್ಯೆ ಮಲ್ಲಿಕಾ ಪರಮೇಶ್ವರ ಭಂಡಾರಿ ಮಾತನಾಡಿದರು. ಆರ್.ಟಿ. ಭಟ್ಟ ಕಬ್ಗಾಲ ಸನ್ಮಾನಿತ ಈಶ್ವರ ಹೆಬ್ಬಾರರ ಕುರಿತು ಅಭಿನಂದನಾ ನುಡಿಗಳನ್ನಾಡಿದರು.ಶಿಕ್ಷಕ ಗಣೇಶ ಭಟ್ಟ ಸನ್ಮಾನ ಪತ್ರ ವಾಚಿಸಿದರು. ನಾಗೇಂದ್ರ ಭಟ್ಟ, ಬಿ.ವಿ. ಶ್ರೀಪತಿ ವೇದ ಘೋಷಗೈದರು. ಕಾರ್ಯದರ್ಶಿ ಜಿ.ಆರ್. ಭಟ್ಟ ಗುಳ್ಳಾಪುರ, ನಿರ್ದೇಶಕ ವಿಶ್ವೇಶ್ವರ ಭಟ್ಟ, ಗಣಪತಿ ಭಟ್ಟ ಬ್ರಹ್ಮೂರು, ಬಿ.ವಿ. ಶ್ರೀಧರ್ ನಿರ್ವಹಿಸಿದರು.
ಬಳಿಕ ಕರ್ಮಬಂಧ ಯಕ್ಷಗಾನ ತಾಳಮದ್ದಲೆಯಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಮದ್ದಲೆಯಲ್ಲಿ ಸುಬ್ರಹ್ಮಣ್ಯ ಭಟ್ ಬಾಡ, ಚಂಡೆಯಲ್ಲಿ ರಾಮನ್ ಊರಕೇರಿ, ಅರ್ಥಧಾರಿಗಳಾಗಿ ಶ್ರೀಕೃಷ್ಣನಾಗಿ ಎಲ್. ವಾಸುದೇವ ಭಟ್ಟ ಹಂದಲಸು, ಭೀಷ್ಮನಾಗಿ ಪವನಕಿರಣ ಕೆರೆ, ಕೌರವನಾಗಿ ನಾರಾಯಣ ಯಾಜಿ ಸಾಲೆಬೈಲು, ಅರ್ಜುನನಾಗಿ ಆರ್.ಟಿ. ಭಟ್ಟ ಕಬ್ಗಾಲ ಪಾತ್ರ ನಿರ್ವಹಿಸಿದರು.