ಕೌಶಲ್ಯಾಧಾರಿತ ಜ್ಞಾನ ಹೊಂದುವುದು ತುಂಬಾ ಅಗತ್ಯ: ಪ್ರಾಧ್ಯಾಪಕ ಡಾ.ಬಿ. ನಾಗರಾಜು ಅಭಿಪ್ರಾಯ

KannadaprabhaNewsNetwork |  
Published : May 02, 2025, 11:45 PM ISTUpdated : May 02, 2025, 11:46 PM IST
50 | Kannada Prabha

ಸಾರಾಂಶ

ಸಂಶೋಧನಾ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರದ ಅಗತ್ಯತೆ, ಲಭ್ಯವಿರುವ ಔದ್ಯೋಗಿಕ ಅವಕಾಶಗಳು ಹಾಗೂ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಅರಿತು ಬದಲಾದ ಸನ್ನಿವೇಶಕ್ಕನುಗುಣವಾಗಿ ಬೇಡಿಕೆ, ನೀಡಿಕೆ, ಉತ್ಪಾದನೆ, ಯಂತ್ರಗಳ ಬಳಕೆ ಹಾಗೂ ತಂತ್ರಾಂಶಗಳ ನಿರ್ವಹಣೆ ಸಕಾಲಿಕ ಜ್ಞಾನವನ್ನು ಹೊಂದಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯವಹಾರ ನಿರ್ವಹಣೆ ಮಾಡುವ ಕೌಶಲ್ಯಾಧಾರಿತ ಜ್ಞಾನವನ್ನು ಹೊಂದುವುದು ತುಂಬಾ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುವ್ಯವಹಾರ ನಿರ್ವಹಣೆ ಮಾಡುವ ಕೌಶಲ್ಯಾಧಾರಿತ ಜ್ಞಾನವನ್ನು ಹೊಂದುವುದು ತುಂಬಾ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಬಿ. ನಾಗರಾಜು ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಘಟಕ ಹಾಗೂ ಇಂಡಿಯನ್ ಬ್ಯಾಂಕ್, ದೇವಿರಮ್ಮನಹಳ್ಳಿಯ ಸಹಯೋಗದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರವೃತ್ತಿಗಳು-ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಬಗ್ಗೆ ನಡೆದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಇಂದಿನ ಜಾಗತಿಕ ಹಾಗೂ ವಾಣಿಜ್ಯ ಅಭಿವೃದ್ಧಿಯ ಕಾಲಘಟ್ಟದಲ್ಲಿ ವಾಣಿಜ್ಯಶಾಸ್ತ್ರ ಹಾಗೂ ವ್ಯವಹಾರ ನಿರ್ವಹಣೆ ವಿಷಯವನ್ನು ಬೋಧಿಸುವ ಹಾಗೂ ಅಧ್ಯಯನ ಮಾಡುವ ಬೋಧಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರದ ಅಗತ್ಯತೆ, ಲಭ್ಯವಿರುವ ಔದ್ಯೋಗಿಕ ಅವಕಾಶಗಳು ಹಾಗೂ ಜಾಗತಿಕ ಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಅರಿತು ಬದಲಾದ ಸನ್ನಿವೇಶಕ್ಕನುಗುಣವಾಗಿ ಬೇಡಿಕೆ, ನೀಡಿಕೆ, ಉತ್ಪಾದನೆ, ಯಂತ್ರಗಳ ಬಳಕೆ ಹಾಗೂ ತಂತ್ರಾಂಶಗಳ ನಿರ್ವಹಣೆ ಸಕಾಲಿಕ ಜ್ಞಾನವನ್ನು ಹೊಂದಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯವಹಾರ ನಿರ್ವಹಣೆ ಮಾಡುವ ಕೌಶಲ್ಯಾಧಾರಿತ ಜ್ಞಾನವನ್ನು ಹೊಂದುವುದು ತುಂಬಾ ಅಗತ್ಯವಾಗಿದೆ ಎಂದರು.ಇಂಡಿಯನ್ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಗಟ್ಟುಪರ್ಥಿ ಹರೀಶ್ ಬಾಬು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣಾ ವಿಭಾಗದಲ್ಲಿ ಅಧ್ಯಯನ ಮಾಡುವ ಅಧ್ಯಾಪಕರನ್ನೊಳಗೊಂಡಂತೆ ಸಂಶೋಧನಾರ್ಥಿಗಳು ಹಣಕಾಸು ನಿರ್ವಹಣೆ, ಸಕಾಲಿಕ ಸದ್ಬಳಕೆ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಹಣಕಾಸು ನಿರ್ವಹಣೆ ಸಂಬಂಧಿತ ವ್ಯವಹಾರಗಳನ್ನು ಬ್ಯಾಂಕಿನ ಮುಖೇನ ಮಾಡುವಲ್ಲಿ ಗಮನ ಹರಿಸಬೇಕೆಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಅಧ್ಯಯನ ಮಾಡುವ ಸಂಶೋಧನಾರ್ಥಿಗಳಿಗೆ ತುಂಬಾ ಉಪಯೋಗವಾಗಿದೆ ಎಂದರು.ಜೆಎಸ್ಎಸ್‌ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಕೆ.ಎಲ್. ರೇವಣ್ಣಸ್ವಾಮಿ, ಅವರು ಕಾಲೇಜಿನಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳದಲ್ಲಿ ಸಕಾಲಿಕ ಹಾಗೂ ಮಾಹಿತಿ ಆಧಾರಿತ ಸಮ್ಮೇಳನವಾಗಿದೆ ಎಂದು ತಿಳಿಸಿದರು.ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಜಾಲಕ ಡಾ.ಬಿ.ಕೆ. ಕೆಂಡಗಣ್ಣಸ್ವಾಮಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎನ್.ಪಿ. ಮಮತಾ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಎಂ.ಎನ್. ಜಯಶೀಲಾ, ಸಂಪನ್ಮೂಲ ವ್ಯಕ್ತಿಗಳಾದ ಜಿ. ಪರಮೇಶ್ವರಿ, ಬಿ. ಹರ್ಷವರ್ಧನ, ಎಸ್.ಪಿ. ಸುನೀತಾ, ಎ.ಸಿ. ಪ್ರಮೀಳಾ, ಎಚ್.ಎಸ್. ಕೊಂಗಾಳಪ್ಪ, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅಧ್ಯಾಪಕರು, ಅಧ್ಯಾಪಕೇತರರು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!