ಸಮಸ್ಯೆ ಇತ್ಯರ್ಥ ಪಡಿಸಿದಿದ್ದರೇ ತಕ್ಕಪಾಠ

KannadaprabhaNewsNetwork |  
Published : Feb 11, 2026, 03:15 AM IST
ಕೆಂಗನಾಳ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಶಾಸಕರುಗಳು ಜಿಲ್ಲೆಯ ಸಮಸ್ಯೆ ಬಗ್ಗೆ ಗಮನ ಹರಿಸದೇ ಕಾಲ ಹರಣ ಮಾಡಿ ನಿರಂತರವಾಗಿ ಸಾರ್ವಜನಿಕರಿಗೆ ಅನ್ಯಾಯಮಾಡುತ್ತಿದ್ದಾರೆ ಎಂದು ಕರವೇ ಮುಖಂಡ ಸಿದ್ದರಾಮ ಹಳ್ಳೂರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಶಾಸಕರುಗಳು ಜಿಲ್ಲೆಯ ಸಮಸ್ಯೆ ಬಗ್ಗೆ ಗಮನ ಹರಿಸದೇ ಕಾಲ ಹರಣ ಮಾಡಿ ನಿರಂತರವಾಗಿ ಸಾರ್ವಜನಿಕರಿಗೆ ಅನ್ಯಾಯಮಾಡುತ್ತಿದ್ದಾರೆ ಎಂದು ಕರವೇ ಮುಖಂಡ ಸಿದ್ದರಾಮ ಹಳ್ಳೂರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಹೆಸ್ಕಾಂ ಮುಂದೆ ರೈತ ಭಾರತ ಪಕ್ಷದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆದ 6ನೇ ದಿನದ ಅನಿರ್ದಿಷ್ಟಾವಧಿ ಧರಣಿ ಬೆಂಬಲಿಸಿ ಮಾತನಾಡಿದ ಅವರು, ಸಾರ್ವಜನಿಕರು ನೀಡಿದ ಅಧಿಕಾರವನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತ ಜನ ಹಿತ ಮರೆತಿದ್ದಾರೆ. ಸಮಸ್ಯೆ ಇತ್ಯರ್ಥ ಪಡಿಸದಿದ್ದರೇ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ಜೆಸಿಬಿ ಪಕ್ಷಗಳ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.ಮುಖಂಡ ಹಾಗೂ ಸಾಹಿತಿಗಳಾದ ಲಾಯಪ್ಪ ಇಂಗಳೆ ಮಾತನಾಡಿ, ವಿಶ್ವ ಗುರು ಬಸವಣ್ಣನವರ ಜನ್ಮಭೂಮಿ ವಿಜಯಪುರ ಜಿಲ್ಲೆ ಹಿಂದಿನಿಂದಲೂ ಈ ದೇಶಕ್ಕೆ, ಈ ನಾಡಿಗೆ ಅನೇಕ ಕೊಡುಗೆಗಳನ್ನು ಕೊಡುತ್ತ ಬಂದಿದೆ. ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರಿಗೆ ದೇಶಕ್ಕೆ ಆರ್ಥಿಕ ಸಂಕಷ್ಟ ಬಂದಾಗ ಬಂಗಾರದಲ್ಲಿ ತೂಗಿದ ಜಿಲ್ಲೆ ನಮ್ಮದು. ಇಂತಹ ದೇಶ ಪ್ರೇಮಿ ನಿಸ್ವಾರ್ಥ ಜನಗಳಿಗೆ ಆಳುವ ಪಕ್ಷಗಳು ನಿರಂತರವಾಗಿ ಅನ್ಯಾಯ ಎಸಗುತ್ತಿರುವುದು ಖಂಡನೀಯ. ಕೂಡಲೇ ಸಾರ್ವಜನಿಕರಿಗೆ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸದಿದ್ದರೇ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಕೆ.ಎಂ.ಹುಂಡೇಕಾರ, ಎಸ್.ಎಸ್.ಮಣಿಯಾರ, ರಫೀಕ್‌ ಬಾಗವಾನ, ಚಾಂದಸಾಬ್‌ ಗೊಳಸಂಗಿ, ಸಿಕ್ಕಂದರ್‌ ಮುಜಾವರ, ಚಾಂದಬ್ಯಾಶ್ಯಾ, ಬಬಲು ಚಟ್ಟರಕಿ, ವಾಶೀಮ ಪುಣೇಕರ, ದಸ್ತಗೀರ ಮುಲ್ಲಾ, ಮಹಿಬೂಬ್‌ ಚಟ್ಟರಕಿ, ಸಮೀರ್‌ ಹರಿಯಾಳ, ವಾಜೀದ್‌ ಮುಲ್ಲಾ, ಅಸ್ಫಾಕ್‌ ಜಮಖಂಡಿ, ರಾಮಪ್ಪ ನಾಗಶೆಟ್ಟಿ, ಪರಶುರಾಮ ಗಾಯಕವಾಡ, ನಾಗೇಶ ಪಟೇಲ, ಬಸಂತ ಬಿ.ಪಾಟೀಲ, ಬಿ.ಬಿ.ಬಗಲಿ, ಎಂ.ಎಚ್.ಜಾಗೀರದಾರ, ಇಸಾಕ್‌ ಅಹ್ಮದ ಎಂ.ಮೇಟಿ, ಅಂಬಣ್ಣ ಗುನ್ನಾಪೂರ, ಎಸ್.ಕೆ.ತೆಲಸಂಗ, ಸಂತೋಷ ಕಳಗುಡಿ, ಸೋಮಶೇಖರ ಮೇಡೇಗಾರ, ಮಲ್ಲಪ್ಪ ದೊಡಮನಿ, ಸೈಯ್ಯದ್‌ ಪೀರಜಾದೆ, ಜಗದೇವ ಸೂರ್ಯವಂಶಿ, ಬಸೀರ್‌ ಹಿಮಾರತವಾಲೆ, ಸಿದ್ದಪ್ಪ ಬಸನಾಳ, ರಾಜು ಕುಮಟಗಿ, ಎ.ಎ.ವಾಲೀಕಾರ, ಐ.ಎಂ.ಸುತಾರ, ರಿಯಾಜ್‌ ಜಮಾದಾರ, ಎಂ.ಶಹಾಜಾನ, ಮುನಫ್ ಮುಜಾವರ, ಗಭೀಮ್‌ ರಸೂಲ್‌ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿಯಿಂದ ಸ್ವಚ್ಛತಾ ಅಭಿಯಾನ
ಧರ್ಮ ಉಳಿಯ ಹಿಂದೂಗಳು ಸಂಘಟಿತರಾಗಿ