ನವಲಿ ಜಲಾಶಯ ಮತ್ತು ಸಿರವಾರ ಬಳಿ ತೋಟಗಾರಿಕೆ ಕೋಲ್ಡ್ ಸ್ಟೋರೇಜ್ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ನೀಡುವುದರ ಮೂಲಕ ಜಾರಿಗೆ ತರಬೇಕು. ಈ ಕಾರ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ
ಕನ್ನಡಪ್ರಭವಾರ್ತೆ ಗಂಗಾವತಿ
ಸಂಸತ್ತಿನಲ್ಲಿ ನಡೆದ ದುಷ್ಕ್ರತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಮಾತನಾಡದಿರುವುದು ದೊಡ್ಡ ದುರಂತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಷಾಧಿಸಿದರು.
ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಾ ವಿಸರ್ಜನೆಯ ಪೂರ್ವಸಿದ್ಧತೆ ಪರಿಶೀಲನೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಳೆದ ವಾರ ಲೋಕಸಭೆಯಲ್ಲಿ ನಡೆದ ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ, ಗೃಹ ಸಚಿವ ಅಮಿತಾ ಷಾ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
₹ 1 ಅನುದಾನ ನೀಡಿಲ್ಲ:
ಹಿಂದಿನ ಬಿಜೆಪಿ ಸರ್ಕಾರ ನಿಗಮಗಳಿಗೆ ₹ 1 ಅನುದಾನ ನೀಡಿಲ್ಲ, ಕೇವಲ ನಿಗಮ ಮಂಡಳಿ ಸ್ಥಾಪಿಸಿದರೆ ಸಾಲದು ಅದಕ್ಕೆ ಹಣ ಮೀಸಲಿರಿಸಿದರೆ ನಿಗಮ ಮಂಡಳಿಗಳಿಗೆ ಬೆಲೆ ಬರುತ್ತದೆ ಎಂದರು.ನವಲಿ ಜಲಾಶಯ ಮತ್ತು ಸಿರವಾರ ಬಳಿ ತೋಟಗಾರಿಕೆ ಕೋಲ್ಡ್ ಸ್ಟೋರೇಜ್ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೇವಲ ಘೋಷಣೆ ಮಾಡಿದರೆ ಸಾಲದು ಅದಕ್ಕೆ ಅನುದಾನ ನೀಡುವುದರ ಮೂಲಕ ಜಾರಿಗೆ ತರಬೇಕು. ಈ ಕಾರ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಜನಾದ್ರಿ ಅಭಿವೃದ್ಧಿಗೆ ₹120 ಕೋಟಿ ಘೋಷಣೆ ಮಾಡಿದ್ದರು. ಈಗ ಆ ಹಣ ಎಲ್ಲಿದೆ? ಎಂದು ತಂಗಡಗಿ ಪ್ರಶ್ನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.