ಬೆಂಗಳೂರು: ಎಸ್ಸೆಸ್ಸೆಲ್ಸಿ ಸೇರಿ ಪ್ರೌಢಶಾಲಾ ಹಂತದ ಎಲ್ಲಾ ತರಗತಿ ವಿದ್ಯಾರ್ಥಿಗಳ ಉಜ್ವಲ ಶೈಕ್ಷಣಿಕ ಭವಿಷ್ಯಕ್ಕಾಗಿ ಪ್ರತೀ ವರ್ಷ ಅತ್ಯುತ್ತಮ ‘ಅಭ್ಯಾಸ ಪುಸ್ತಕ’ಗಳನ್ನು ತಯಾರಿಸಿಕೊಡುತ್ತಾ ಬರುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ‘ರಾವ್ಸ್ ಅಕಾಡೆಮಿ’ಯು 2026-27ನೇ ಶೈಕ್ಷಣಿಕ ಸಾಲಿನ ಅಭ್ಯಾಸ ಪುಸ್ತಕಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರುವ ರಾವ್ಸ್ ಅಕಾಡೆಮಿ ಕಳೆದ 18 ವರ್ಷಗಳಿಂದ ರಾಜ್ಯದ ಪ್ರೌಢ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಭ್ಯಾಸ ಪುಸ್ತಕಗಳ ಮೂಲಕ ತನ್ನದೇ ಕೊಡುಗೆ ನೀಡುತ್ತಾ ಬರುತ್ತಿದೆ. ಈ ಪುಸ್ತಕಗಳ ಅಭ್ಯಾಸದ ಪರಿಣಾಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತೀ ವರ್ಷ ವಿವಿಧ ರ್‍ಯಾಂಕ್ ಮತ್ತು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ.
ಸರ್ಕಾರದ ಪಠ್ಯಕ್ರಮಕ್ಕೆ ಅನುಗುಣವಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷಾ ವಿಷಯಗಳು, ಕೋರ್ ಸಬ್ಜೆಕ್ಟ್‌ಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪ್ರತಿಯೊಂದು ವಿಷಯಕ್ಕೂ ರಾವ್ಸ್ ಅಕಾಡೆಮಿ ಈ ಅಭ್ಯಾಸ ಪುಸ್ತಕಗಳನ್ನು ಸಿದ್ಧಪಡಿಸಿದ್ದು, ಅವು ವಿದ್ಯಾರ್ಥಿಗಳು ಸಂಪೂರ್ಣ ಪಠ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಅರ್ಥೈಸಿಕೊಂಡು ವಿಷಯ ಗ್ರಹಿಕೆ ಮಾಡಿಕೊಳ್ಳಲು ಸಹಕಾರಿಯಾಗಿವೆ ಎನ್ನುತ್ತಾರೆ ಶಿಕ್ಷಣ ತಜ್ಞರು.
ತಜ್ಞ ಶಿಕ್ಷಕರಿಂದ ಸಂದೇಹ ಪರಿಹಾರ:
ಪ್ರತಿಯೊಂದು ಅಭ್ಯಾಸ ಪುಸ್ತಕಗಳನ್ನೂ ತಜ್ಞ ಶಿಕ್ಷಕರುಗಳಿಂದ ರಚಿಸಲಾಗಿದೆ. ಪ್ರತಿ ಅಧ್ಯಾಯದಲ್ಲೂ ನೂರಾರು ಪ್ರಶ್ನೆಗಳು ಸಿದ್ಧಪಡಿಸಿ ಅವುಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಲು ಸೂಕ್ತ ಸ್ಥಳಾವಕಾಶ ನೀಡಲಾಗಿದೆ. ಈ ಪುಸ್ತಕಗಳನ್ನು ಕೊಂಡು ಅಭ್ಯಾಸ ಮಾಡುವ ಜೊತೆಗೆ ಯಾವುದೇ ಸಂದೇಹಗಳು ಬಂದಲ್ಲಿ ವಿದ್ಯಾರ್ಥಿಗಳು ಆ ಪುಸ್ತಕ ಸಿದ್ಧಪಡಿಸಿದ ತಜ್ಞ ಶಿಕ್ಷಕರಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು.
ಇದಕ್ಕಾಗಿ ಪುಸ್ತಕಗಳ ಮೊದಲ ಪುಟದಲ್ಲೇ ಆ ಶಿಕ್ಷಕರ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗಳನ್ನೂ ನೀಡಲಾಗಿರುತ್ತದೆ. ನೂರು ಬಾರಿ ಓದುವುದಕ್ಕಿಂತ ಒಮ್ಮೆ ಬರೆಯುವುದು ಉತ್ತಮ ಎನ್ನುವಂತೆ ಅಭ್ಯಾಸ ಪುಸ್ತಕಗಳಲ್ಲಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಮಕ್ಕಳು ಪಠ್ಯದ ಪ್ರತಿ ವಿಷಯವನ್ನೂ ನೆನಪಿಟ್ಟುಕೊಂಡು ಸಲೀಸಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ.
ಇನ್ನು ಕಳೆದ 20 ವರ್ಷಗಳಿಂದಲೂ ಅಕಾಡೆಮಿಯು ತನ್ನ ಪುಸ್ತಕಗಳ ಮುದ್ರಣ ಮತ್ತು ಹಾಳೆಗಳ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಎಲ್ಲರಿಗೂ ಕೈಗೆಟಕುವ ದರದಲ್ಲಿ ದೊರೆಯುವ ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊಸದಾಗಿ ವೃತ್ತಿಗೆ ಸೇರಿದ ಶಿಕ್ಷಕರಿಗೂ ಅನುಕೂಲಕರ ರೀತಿಯಲ್ಲಿವೆ. ಉತ್ತಮ ಅಭ್ಯಾಸ ಮತ್ತು ಪರೀಕ್ಷೆಯಲ್ಲಿ ಮಕ್ಕಳು ಗರಿಷ್ಠ ಅಂಕ ಗಳಿಕೆಗೆ ನೆರವಾಗುವುದೇ ನಮ್ಮ ಉದ್ದೇಶ ಎನ್ನುತ್ತಾರೆ ಸಂಸ್ಥೆ ಮುಖ್ಯಸ್ಥರು.
ಕನ್ನಡ-ಇಂಗ್ಲಿಷ್ ಎರಡೂ ಮಾಧ್ಯಮ ಪುಸ್ತಕಗಳು ಲಭ್ಯ:
ರಾವ್ಸ್ ಅಕಾಡೆಮಿಯ ಅಭ್ಯಾಸ ಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲೂ ಲಭ್ಯವಿದೆ. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪುಸ್ತಕ ಹಾಗೂ ವಿದ್ಯಾರ್ಥಿಗಳು ಬರೆದು ಅಭ್ಯಸಿಸಲು ಅಗತ್ಯ ಸ್ಥಳಾವಕಾಶ ಮತ್ತು ಪರಿಶೀಲಿಸಿಕೊಳ್ಳಲು ಸರಿಯಾದ ಉತ್ತರಗಳೂ ಲಭ್ಯವಿರುತ್ತದೆ. ಈ ಪುಸ್ತಕಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಯೊಂದು ಅಧ್ಯಾಯ ಮನದಟ್ಟು ಮಾಡಿಕೊಂಡು ಯಾವುದೇ ಭಯವಿಲ್ಲದೆ ಎಲ್ಲಾ ಹಂತದ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿ. ಅಕಾಡೆಮಿಯು ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಲಕ್ಷಾಂತರ ಅಭ್ಯಾಸ ಪುಸ್ತಕಗಳನ್ನು ಮುದ್ರಿಸಿ ಸಿದ್ದಪಡಿಸಿದೆ. ಆಸಕ್ತ ಮಕ್ಕಳು, ಪೋಷಕರು, ಶಾಲಾ ಮುಖ್ಯಸ್ಥರು ನಮ್ಮ ಕಚೇರಿಗೆ ಖುದ್ದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಸುಧೀಂದ್ರರಾವ್ ತಿಳಿಸಿದ್ದಾರೆ.
ಅಭ್ಯಾಸ ಪುಸ್ತಕಗಳಿಗೆ ಸಂಪರ್ಕಿಸಿ:
ರಾವ್ಸ್ ಅಕಾಡೆಮಿಯ ಅಭ್ಯಾಸ ಪುಸ್ತಕಗಳಿಗಾಗಿ ಕಚೇರಿ ವಿಳಾಸ ನಂ.51, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು-56004 ಇಲ್ಲಿಗೆ ಭೇಟಿ ನೀಡಬಹುದು. ಅಥವಾ ಹೆಚ್ಚಿನ ವಿವರಗಳಿಗೆ ಮೊ: 9900575990/9844328990ಗೆ ವಾಟ್ಸಪ್ ಮಾಡಬಹುದು.
ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್, ಡಿಸ್ಟಿಂಗ್‌ಷನ್‌ಗೆ ಸಹಕಾರಿ:
ಅಭ್ಯಾಸ ಪುಸ್ತಕಗಳು 8, 9ನೇ ತರಗತಿ ಮಾತ್ರವಲ್ಲ 10ನೇ ತರಗತಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಭಯವಿಲ್ಲದೆ ಎದುರಿಸಿ ರ್‍ಯಾಂಕ್, ಅತ್ಯುನ್ನತ ದರ್ಜೆ ಫಲಿತಾಂಶ ಪಡೆಯಲು ಸಹಕಾರಿಯಾಗಿವೆ. ಅಂದಾಜಿನ ಪ್ರಕಾರ ಅಕಾಡೆಮಿಯ ‘ಅಭ್ಯಾಸ ಪುಸ್ತಕ’ಗಳ ಅಭ್ಯಾಸದ ಪರಿಣಾಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತೀ ವರ್ಷ ವಿವಿಧ ರ್‍ಯಾಂಕ್ ಮತ್ತು ಡಿಸ್ಟಿಂಗ್‌ಷನ್‌ನಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದು ಸಂಸ್ಥೆ ಹೇಳಿದೆ.
