ಗದಗ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನೋಡಿದರೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ದೇಶ ಮಾರಲು ಹೊರಟಿದ್ದಾರೆ ಎನ್ನಿಸುತ್ತದೆ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ವ್ಯಂಗ್ಯವಾಡಿದರು.
ಪಿತ್ರಾರ್ಜಿತ ಆಸ್ತಿ ಉಳಿಸಿಕೊಳ್ಳಬೇಕು ಅಂದರೆ 50% ತೆರಿಗೆ ಸರ್ಕಾರಕ್ಕೆ ಕಟ್ಟಬೇಕು ಎಂದು ಹೇಳುತ್ತೀರಿ, ನಮ್ಮ ಆಸ್ತಿಯ ಹಕ್ಕನ್ನು ಕೇಳಲು ನೀವು ಯಾರು ಅಂತ ಪ್ರಶ್ನಿಸಿದರು.
ಚುನಾವಣಾ ಅಧಿಕಾರಿಗಳಿಗೆ ದೂರು: ಕಳೆದ ಹಲವು ದಿನಗಳಿಂದ ಗ್ಯಾರಂಟಿ ಕಾರ್ಡ್ ನೆಪದಲ್ಲಿ ಗದಗ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡರು ಮನೆ-ಮನೆಗೆ ಸಹಿ ಇರುವ ಗ್ಯಾರಂಟಿ ಕಾರ್ಡ ಕೊಟ್ಟು ಆಧಾರ್ ನಂಬರ್ ಕಲೆಕ್ಟ್ ಮಾಡಿ, ಕಾಂಗ್ರೆಸ್ ಗೆ ಓಟು ಹಾಕಿ ಒಂದು ಲಕ್ಷ ಬರುತ್ತದೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ. ಕಾಂಗ್ರೆಸ್ಸಿನವರು ರಾಜಾರೋಷವಾಗಿ ಮತದಾರರ ದಾರಿ ತಪ್ಪಿಸಿ ಆಮಿಷ ಒಡ್ಡುತ್ತಿದ್ದಾರೆ. ಈ ಕುರಿತು ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಅದಕ್ಕೆ ಪೂಕರವಾದ ದಾಖಲೆ ಅನಿಲ ಬಿಡುಗಡೆ ಮಾಡಿದರು.ನೀರಿನ ಗ್ಯಾರಂಟಿ ಕೊಡಿ:
ಗದಗ ಜಿಲ್ಲೆಯಲ್ಲಿ ಶೇ. 97.02% ಗ್ಯಾರಂಟಿ ಯೋಜನೆ ಜನರಿಗೆ ತಲುಪಿವೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಪದೇ-ಪದೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳುತ್ತಾರೆ. ಅವಳಿ ನಗರದ ಜನತೆ ಕುಡಿವ ನೀರಿಲ್ಲದೇ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನೀರಿಗಾಗಿ ಪ್ರತಿಭಟನೆ ನಡೆಯುತ್ತಿವೆ.ಮೊದಲು ಗದಗ ಜನತೆಗೆ ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಗಮೇಶ ದುಂದೂರ, ಆನಂದ ಶೇಠ್, ರವಿಕಾಂತ್ ಅಂಗಡಿ, ಪರಮೇಶ ನಾಯಕ್, ವಸಂತ ಪಡಗದ, ಬಾಬು ಯಲಿಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.