ಮಹಾಂತ ಶ್ರೀಗಳದ್ದು ಕ್ರಾಂತಿಕಾರಿ ನಡೆ

KannadaprabhaNewsNetwork |  
Published : Aug 03, 2024, 12:42 AM IST
ಫೋಟೋ: 1ಜಿಎಲ್‌ಡಿ1- ತಹಸೀಲ್ದಾರ ಮಂಗಳಾ ಎಂ. ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವ್ಯಸನಯುಕ್ತತೆ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ವ್ಯಸನಗಳಿಂದ ವ್ಯಕ್ತಿಗತ, ಕೌಟುಂಬಿಕ ಮತ್ತು ಸಾಮಾಜಿಕ ಅಧೋಗತಿ ಗರಿಷ್ಠ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಅಂಥವರನ್ನು ಬಡಿದೆಚ್ಚರಿಸಲು ಮಹಾಂತ ಶ್ರೀಗಳು ತೆಗೆದುಕೊಂಡ ನಡೆ ಕ್ರಾಂತಿಕಾರಿಯಾದುದು ಎಂದು ತಹಸೀಲ್ದಾರ್ ಮಂಗಳಾ ಎಂ.ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ವ್ಯಸನಯುಕ್ತತೆ ಸಮಾಜದಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿದೆ. ವ್ಯಸನಗಳಿಂದ ವ್ಯಕ್ತಿಗತ, ಕೌಟುಂಬಿಕ ಮತ್ತು ಸಾಮಾಜಿಕ ಅಧೋಗತಿ ಗರಿಷ್ಠ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಅಂಥವರನ್ನು ಬಡಿದೆಚ್ಚರಿಸಲು ಮಹಾಂತ ಶ್ರೀಗಳು ತೆಗೆದುಕೊಂಡ ನಡೆ ಕ್ರಾಂತಿಕಾರಿಯಾದುದು ಎಂದು ತಹಸೀಲ್ದಾರ್‌ ಮಂಗಳಾ ಎಂ.ಹೇಳಿದರು.

ಅವರು ಗುರುವಾರ ಪಟ್ಟಣದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಾಂತ ಶ್ರೀಗಳು ಮಾಡಿದ ಕ್ರಾಂತಿಕಾರಿ ನಡೆ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಬಹು ದೊಡ್ಡ ಕೊಡುಗೆಯಾಗಿದೆ. ಜೀವಿತಾವಧಿಯಲ್ಲಿ ಮಾತ್ರವಲ್ಲದೇ ಇಂದಿಗೂ ಮಹಾಂತಪ್ಪನ ಜೋಳಿಗೆ ಜನರನ್ನು ವ್ಯಸನದಿಂದ ಮುಕ್ತರನ್ನಾಗಿ ಎಷ್ಟೋ ಕುಟುಂಬಗಳಲ್ಲಿ ನೆಮ್ಮದಿಯನ್ನು ತರುವ ಕಾರ್ಯವನ್ನು ಮಾಡುತ್ತಿದೆ. ಮೊಬೈಲ್ ಬಳಕೆ ಇಂದಿನ ಬಹು ದೊಡ್ಡ ವ್ಯಸನವಾಗಿ ವ್ಯಾಪಿಸಿದೆ. ದೈಹಿಕ, ಮಾನಸಿಕ, ಭಾವನಾತ್ಮಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ವ್ಯಸನಗಳು ಪ್ರಾರಂಭದಲ್ಲಿ ಹಿತಾನುಭವವನ್ನುಂಟು ಮಾಡಿದರೂ ಅಂತಿಮವಾಗಿ ದುರಂತಕ್ಕೆ ಕಾರಣವಾಗುತ್ತವೆ. ಆದ್ದರಿಂದ ಸಜ್ಜನರ ಸಹವಾಸದೊಂದಿಗೆ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂದೆ, ತಾಯಿ ಮತ್ತು ಗುರುಗಳನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಿ.ಡಿ.ಹುಬ್ಬಳ್ಳಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಚಾರ್ಯ ವಿಠ್ಠಲ ಕಳಸಾ ಮಾತನಾಡಿ, ವ್ಯಸನಗಳು ಉಂಟು ಮಾಡುವ ಪರಿಣಾಮ ಘೋರವಾಗಿರುತ್ತದೆ. ದೈಹಿಕ, ಮಾನಸಿಕ ಅನಾರೋಗ್ಯ ಮಾತ್ರವಲ್ಲದೇ ಆರ್ಥಿಕವಾಗಿ ಇಡೀ ಕುಟುಂಬವೇ ದಿವಾಳಿಯಾಗುತ್ತದೆ. ಯುವಕರು ವ್ಯಸನ ಮುಕ್ತರಾಗಬೇಕೆಂದರು.ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಭಿತ್ತಿ ಚಿತ್ರ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಿ.ವೈ.ಗೌಡರ ಸ್ವಾಗತಿಸಿದರು. ಎಸ್.ಎಚ್.ಮಡಿವಾಳರ ಪ್ರತಿಜ್ಞಾ ವಿಧಿ ಬೋಧಿಸಿದರು.

ಎಚ್.ವೈ.ಕುಂದರಗಿ, ಡಿ.ವೈ.ಹಾದಿಕಾರ, ಜೆ.ವಿ.ಯಡವನ್ನವರ, ಅಕ್ಕಮಹಾದೇವಿ ಶೆಟ್ಟರ, ಗಾಯತ್ರಿ ಬಾಗಲಕೋಟ, ಕವಿತಾ ಹಾದಿ, ಸುಷ್ಮಾ ಅಡಕಿ, ಸೂರಜ ಗಾಣಿಗೇರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶೈಲಾ ಕೊಳ್ಳಿ ನಿರೂಪಿಸಿದರು.ಈರಣ್ಣ ದೊಡಮನಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ